ಮಡಿಕೇರಿ, ಆ. ೧೧: ಮಡಿಕೇರಿಯ ಬ್ರಹ್ಮಕುಮಾರೀಸ್ ಲೈಟ್ ಹೌಸ್ ಸಭಾಂಗಣದಲ್ಲಿ ಪಾವನ ಪರ್ವ ರಕ್ಷಾಬಂಧನದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೇಶವ್ ಕಾಮತ್, ಅವರ ಪತ್ನಿ ಸಂಧ್ಯಾ ಕಾಮತ್ ಹಾಗೂ ಬ್ರಹ್ಮಗಿರಿ ಪತ್ರಿಕೆಯ ಸಂಪಾದಕರಾದ ಉಳ್ಳಿಯಡ ಪೂವಯ್ಯ ಇವರುಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ನಗರದ ಅನೇಕ ಮಂದಿ ಸಹೋದರ ಸಹೋದರಿಯರಿಗೆ ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರಿಜೀ ಹಾಗೂ ಬ್ರಹ್ಮಕುಮಾರಿ ಧನಲಕ್ಷಿö್ಮÃಜಿ ಶ್ರೀರಕ್ಷೆಯನ್ನು ಕಟ್ಟಿ ಆಶೀರ್ವದಿಸಿದರು.

ಬಸಪ್ಪ ಶಿಶುವಿಹಾರದ ಮಹಿಳಾ ಸಮಾಜದ ಅಧಕ್ಷೆ ಸವಿತಾ ಭಟ್ ಹಾಗೂ ಅವರ ಅನೇಕ ಸದಸ್ಯರು, ಮತ್ತಿತರರು ಭಾಗವಹಿಸಿದ್ದರು.