ಮಡಿಕೇರಿ, ಆ. ೧೧: ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ಎಲ್ಲಾ ಜಿಲ್ಲಾ ಪ್ರಧಾನ ಅಂಚೆ ಕಚೇರಿಗಳಲ್ಲಿ ದೇಶ ವಿಭಜನೆ ಸಂದರ್ಭದ ಕರಾಳ ದಿನಗಳನ್ನು ನೆನಪಿಸುವ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ೧೯೪೭ರ ಆಗಸ್ಟ್ ೧೪ರ ಸಂದರ್ಭದ ಚಿತ್ರಣವನ್ನು ಪ್ರತಿಬಿಂಬಿಸುವ ಸುಮಾರು ೫೨ ಛಾಯಾಚಿತ್ರಗಳು, ಪತ್ರಿಕಾ ಸುದ್ದಿಗಳ ತುಣುಕುಗಳನ್ನು ಒಳಗೊಂಡ ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಮಡಿಕೇರಿಯ ಪ್ರಧಾನ ಅಂಚೆ ಕಚೇರಿಯಲ್ಲಿ ಉದ್ಘಾಟಿಸಲಾಯಿತು.

ಇಂದು ನಿವೃತ್ತ ಮೇಜರ್ ಬಿ.ಎ. ನಂಜಪ್ಪ ಅವರು ಪ್ರದರ್ಶನವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಅಂಚೆ ಅಧೀಕ್ಷಕರಾದ ರಮೇಶ್ ಪ್ರಭು, ಉಪ ಅಂಚೆ ಅಧೀಕ್ಷಕ ಎಸ್.ಜಿ. ಸೋಮಯ್ಯ, ವೀರಾಜಪೇಟೆಯ ಅಂಚೆ ಅಧೀಕ್ಷಕ ಬಿ.ಡಿ. ಮಂಜುನಾಥ್, ಅಂಚೆಪಾಲಕ ಶ್ರೀನಿವಾಸ್ ಟಿ.ಪಿ., ಸವಿತಾ ಮತ್ತಿತರರು ಹಾಜರಿದ್ದರು. ಸೋಮಯ್ಯ ಸ್ವಾಗತಿಸಿ, ಮಂಜುನಾಥ್ ನಿರೂಪಿಸಿದರು. ಅಂಚೆ ಕಚೇರಿಯ ಮನೋರಂಜನಾ ಕೂಟದ ಕಾರ್ಯದರ್ಶಿ ರಶ್ಮಿ ವಂದಿಸಿದರು.

ಇಂದಿನಿAದ ೪ ದಿನಗಳ ತನಕ ಈ ಪ್ರದರ್ಶನ ಮುಂದುವರಿಯಲಿದೆ ಎಂದು ರಮೇಶ್ ಪ್ರಭು ಅವರು ತಿಳಿಸಿದ್ದಾರೆ.