ವೀರಾಜಪೇಟೆ, ಆ.೧೦: ವೀರಾಜಪೇಟೆಯ ಅಯ್ಯಪ್ಪ ಬೆಟ್ಟದಲ್ಲಿ ನೆಲೆಸಿರುವ ೧೦೦ಕ್ಕೂ ಅಧಿಕ ಕುಟುಂಬ ಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯದಲ್ಲಿಯೇ ಸ್ಥಳಾಂತರಿಸಲಾಗುವುದೆAದು ಪುರಸಭೆ ಅಭಿಯಂತರ ಹೇಮ್ಕುಮಾರ್ ತಿಳಿಸಿದ್ದಾರೆ.
ಇಂದು ಪುರಸಭೆ ಅಧ್ಯಕ್ಷೆ ಸುಶ್ಮಿತಾ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯ ಡಿ.ಪಿ. ರಾಜೇಶ್, ಈ ತನಕ ಸುರಿದ ಭಾರೀ ಮಳೆಗೆ ಇಲ್ಲಿನ ಅಯ್ಯಪ್ಪ ಬೆಟ್ಟದಲ್ಲಿರುವ ಸುಮಾರು ೧೦೦ಕ್ಕೂ ಅಧಿಕ ಕುಟುಂಬಗಳು ಆತಂಕದಲ್ಲಿದ್ದು, ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ. ಈ ಕುಟುಂಬಗಳ ಮೇಲೆ ಪುರಸಭೆಗೆ ಯಾವುದೇ ಅನುಕಂಪವಿಲ್ಲ. ಪಶ್ಚಾತಾಪವೂ ಇಲ್ಲ. ಭಾರೀ ಮಳೆ ಬಂದಾಗ ಬೆಟ್ಟದ ಮನೆಯಿಂದ ಕೆಳಗೆ ಬರ ಹೇಳುತ್ತಾರೆ, ನಂತರ ಪುನ: ಬೆಟ್ಟದಲ್ಲಿರುವ ಮನೆಗೆ ಕಳುಹಿಸುವ ಪರಿಪಾಠವಾಗಿದೆ. ಆತಂಕದಲ್ಲಿರುವ ಕುಟುಂಬಗಳಿಗೆ ಬದಲಿ ವ್ಯವಸ್ಥೆ ಮಾಡಿ ಶಾಶ್ವತ ಪರಿಹಾರ ಮಾಡಲು ಒಂದು ಅಂತಿಮ ನಿರ್ಧಾರ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮೀನ ಮೇಷ ಎಣಿಸಬಾರದು. ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡು ೪ ವರ್ಷಗಳೆ ಕಳೆದಿದೆ ಎಂದು ಗಮನ ಸೆಳೆದರು.
ರಾಜೇಶ್ ಮಾಡಿದ ಆರೋಪಕ್ಕೆ ಪುರಸಭೆ ಅಭಿಯಂತರ ಹೇಮ್ಕುಮಾರ್ ಪ್ರತಿಕ್ರಿಯಿಸಿ ಬೆಟ್ಟದಲ್ಲಿ ಆತಂಕದಲ್ಲಿರುವ ಕುಟುಂಬಗಳನ್ನು ಸ್ಥಳಾಂತರಿಸಲು ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ೭.೮೦ ಎಕರೆ ಜಾಗ ಖರೀದಿಸುವ ಪ್ರಕ್ರಿಯೆ ಮುಂದುವರೆದಿದ್ದು, ಸಧ್ಯದಲ್ಲಿಯೇ ಕುಟುಂಬಗಳನ್ನು ಸ್ಥಳಾಂತರಿಸಲಾಗು ವುದು ಎಂದು ತಿಳಿಸಿದರು.
ಅಧಿಕಾರಿಗಳ ನಿರ್ಲಕ್ಷö್ಯ
ಸಭೆಯ ಆರಂಭದಲ್ಲಿಯೇ ಸದಸ್ಯ ಸಿ.ಕೆ.ಪೃಥ್ವಿನಾಥ್ ಒಂದು ವರ್ಷದ ಅವಧಿಯಲ್ಲಿ ಈಗಿನ ಪುರಸಭೆಯಲ್ಲಿ ಕೇವಲ ೫ ಸಭೆಗಳನ್ನು ನಡೆಸಲಾಗಿದೆ. ಈಗ ಸಾಮಾನ್ಯ ಸಭೆಗೆ ಬದಲು ಇಂದು ವಿಶೇಷ ಸಭೆ ನಡೆಸುವ ಔಚಿತ್ಯವೇನು. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷö್ಯವಿದೆ. ಪುರಸಭೆ ಪಟ್ಟಣದ ಅಭಿವೃದ್ಧಿಯ ಕುರಿತು ಚಿಂತಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ, ಸದಸ್ಯರುಗಳಿಗೆ ಕಳಿಸಿದ ಸಭೆಯ ಅಜೆಂಡಾ ಪತ್ರಕ್ಕೂ ಸಹಿ ಮಾಡದಿರು ವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಕಸ ವಿಲೇವಾರಿಗೆ ಜಾಗ
ಪುರಸಭೆಯ ಕಸ ವಿಲೇವಾರಿ ಜಾಗದ ಬಳಿ ತಾಲೂಕು ಪಂಚಾಯಿತಿ ಮಲ ತ್ಯಾಜ್ಯ ಸಂಸ್ಕರಣೆಗಾಗಿ ೫೦ ಸೆಂಟು ಜಾಗವನ್ನು ನೀಡುವಂತೆ ಕೋರಿದಕ್ಕೆ ಪುರಸಭೆಯ ಕೆಲವು ಸದಸ್ಯರು ವಿರೋಧಿಸಿದರೆ ಆಡಳಿತ ಪರ ಸದಸ್ಯರು ಜಾಗ ಕೊಡಲು ಪರವಾಗಿ ಮಾತನಾಡಿದರು. ಈಗ ಪುರಸಭೆಗೆ ಮಂಜೂರಾಗಿರುವ ೫ ಎಕರೆ ಜಾಗ ಕಸ ವಿಲೇವಾರಿಗೆ ಸಾಕಾಗುತ್ತಿಲ್ಲ. ಈ ಜಾಗವನ್ನೇ ವಿಸ್ತರಿಸಿ ವೈಜ್ಞಾನಿಕ ರೀತಿಯಲ್ಲಿ ಮಲ ತ್ಯಾಜ್ಯ, ಕಸ ವಿಲೇವಾರಿ ಮಾಡಲು ಬಳಸುವಂತೆ ಸಭೆ ತೀರ್ಮಾನಿಸಿತು.
ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ಮಾತನಾಡಿ, ವಿಶೇಷ ಚೇತನ ಮಕ್ಕಳಿಗೆ ನೀಡುವ ಪೋಷಣಾ ವೆಚ್ಚವನ್ನು ಈಗಿನ ರೂ.೨೦೦೦ ದಿಂದ ೫೦೦೦ಕ್ಕೆ ಏರಿಸಬೇಕು. ಇಲ್ಲಿನ ಮೊಗರ ಗಲ್ಲಿ ರಸ್ತೆಯ ನೆಹರೂ ನಗರದ ಕೆಳಭಾಗದಲ್ಲಿ ಭಾರೀ ಮಳೆಗೆ ತಡೆಗೋಡೆ ಕುಸಿಯುವ ಹಂತದಲ್ಲಿದ್ದು, ಅಪಾಯದ ಅಂಚಿನಲ್ಲಿದೆ. ತಡೆಗೋಡೆ ಕುಸಿದರೆ ಅಕ್ಕ ಪಕ್ಕದ ಹಾಗೂ ಕೆಳಗಿನ ಅನೇಕ ಮನೆಗಳಿಗೆ ಹಾನಿಯಾಗಲಿದೆ. ತಕ್ಷಣ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರಲ್ಲದೆ, ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಸ್ಮಶಾನಗಳಿಗೆ ಪುರಸಭೆ ವತಿಯಿಂದ ಆಧುನಿಕ ವಿದ್ಯುತ್ ಚಿತಾಗಾರವನ್ನು ಅಳವಡಿಸುವಂತೆ ಒತ್ತಾಯಿಸಿದರು. ಈ ಸಂಬAಧ ಪರಿಶೀಲನೆ ನಡೆಸುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.
ನಲ್ಲಿ ಸಂಪರ್ಕವಿಲ್ಲ
ಅರಸು ನಗರದಲ್ಲಿ ಅರ್ಹ ಫಲಾನುಭವಿಗಳಿಗೆ ನಲ್ಲಿ ನೀರು ಸೌಲಭ್ಯಕ್ಕಾಗಿ ವಸ್ತು ಪ್ರದರ್ಶನದಂತೆ ಪೈಪುಗಳನ್ನು ತರಿಸಿ ಇಡಲಾಗಿದೆ. ಆದರೆ ಫಲಾನುಭವಿಗಳಿಗೆ ಈವರೆವಿಗೂ ನಲ್ಲಿ ಸಂಪರ್ಕ ದೊರೆತಿಲ್ಲ, ಅರಸುನಗರದ ಬಳಿಯಿ ರುವ ಸ್ಮಶಾನದಲ್ಲಿ ಮಳೆಗಾಲದಲ್ಲೂ ಅಂತ್ಯಕ್ರಿಯೆ ನಡೆಸಲು ಎಲ್ಲ ಸೌಲಭ್ಯ ಗಳನ್ನು ಪುರಸಭೆ ಒದಗಿಸುವಂತೆ ಸಭೆಯಲ್ಲಿ ಪಟ್ಟಡ ರಂಜಿ ಪೂಣಚ್ಚ ಒತ್ತಾಯಿಸಿದರು. ಮುಂದಿನ ಒಂದು ತಿಂಗಳ ಅವಧಿಯಲ್ಲಿ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವುದಾಗಿ ಅಭಿಯಂತರ ಹೇಮ್ಕುಮಾರ್ ಪ್ರತಿಕ್ರಿಯಿಸಿದರು.
ಪಾರ್ಕ್ ನಿರ್ಮಿಸಿಲ್ಲ
ಜೈನರ ಬೀದಿಯಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ಸುಮಾರು ೭೫ ಸೆಂಟು ಜಾಗದಲ್ಲಿ ಸಾರ್ವಜನಿಕರ ಸೌಲಭ್ಯಕ್ಕಾಗಿ ಪಾರ್ಕ್ನ್ನು ನಿರ್ಮಿಸು ವಂತೆ ತಿಳಿಸಿದ್ದರೂ ಅಧಿಕಾರಿಗಳ ನಿರ್ಲಕ್ಷö್ಯದಿಂದ ಈ ಜಾಗವನ್ನು ಪಾರ್ಕ್ ಆಗಿ ಪರಿವರ್ತಿಸಿಲ್ಲ. ಶಾಸಕ ಬೋಪಯ್ಯ ಅವರು ಈ ಪಾರ್ಕ್ ನಿರ್ಮಾಣಕ್ಕೆ ಸಹಮತ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಆದೇಶಿಸಿದ್ದರೂ ಈ ತನಕ ಕಾಮಗಾರಿ ಆರಂಭಿಸದಿದ್ದುದಕ್ಕೆ ಸದಸ್ಯ ಎಸ್.ಎಚ್.ಮತೀನ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬAಧದಲ್ಲಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಚಂದ್ರಕುಮಾರ್ ತಿಳಿಸಿದರು.
ವಿದ್ಯಾನಗರದಲ್ಲಿ ನೀರು
ವೀರಾಜಪೇಟೆ ವಿಭಾಗಕ್ಕೆ ಕಳೆದ ೩೦ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು ರಸ್ತೆ, ಚರಂಡಿ ಹಾನಿಗೊಳಗಾಗಿದೆ. ಗೋಣಿಕೊಪ್ಪ ರಸ್ತೆಯ ವಿದ್ಯಾನಗರದ ಪಕ್ಕದಲ್ಲಿರುವ ನೀರು ವಿದ್ಯಾನಗರದ ಖಾಲಿ ಜಾಗದಲ್ಲಿ ಆವರಿಸಿದ್ದು ನಿವಾಸಿಗಳಿಗೆ ಆತಂಕ ಉಂಟುಮಾಡಿದೆ. ಸರಕಾರದಿಂದ ಬರುವ ಪರಿಹಾರ ಹಣದಿಂದ ಇದನ್ನು ತಕ್ಷಣ ಸರಿಪಡಿಸುವಂತೆ ಸದಸ್ಯ ಮಹಮ್ಮದ್ ರಾಫಿ ಹೇಳಿದರು. ಅಲ್ಲದೆ ಮಳೆ ಹಾನಿ ಪರಿಹಾರ ನಿಧಿಯಲ್ಲಿ ಜಿಲ್ಲಾಧಿಕಾರಿ ಬಳಿ ರೂ ೩೫ಕೋಟಿ ಹಣ ಖಾತೆಯಲ್ಲಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಸಮಸ್ಯೆ ಪರಿಹರಿಸುವಂತೆ ರಾಫಿ ಕೋರಿದರು.
ಗಣೇಶೋತ್ಸವಕ್ಕೆ ಹಣ
ಗೌರಿ-ಗಣೇಶೋತ್ಸವದ ಅಂಗವಾಗಿ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿಯುವ ಸಲುವಾಗಿ ಪ್ರತಿ ವರ್ಷದಂತೆ ರೂ. ೨೦೦೦ಕ್ಕೆ ಬದಲಾಗಿ ರೂ. ೫೦೦೦ ಪುರಸಭೆಯಿಂದ ನೀಡುವಂತೆ ಸದಸ್ಯ ರಜನಿಕಾಂತ್ ಸಭೆಯಲ್ಲಿ ಒತ್ತಾಯಿಸಿದರು.
ಪುರಸಭೆ ಅಭಿಯಂತರ ಹೇಮ್ಕುಮಾರ್ ಮಾತನಾಡಿ, ಹದಿನೈದನೇ ಹಣಕಾಸು ಯೋಜನೆ ಯಡಿಯಲ್ಲಿ ರೂ. ೭೧ ಲಕ್ಷ ಹಣ ಎಸ್.ಎಫ್.ಸಿ.ಯಲ್ಲಿ ರೂ.೨೯ಲಕ್ಷ ಅಮೃತ ನಿರ್ಮಲ ಯೋಜನೆಯಡಿ ರೂ.೧೮.೧೩ ಲಕ್ಷ, ನಗರೊತ್ಥಾನದಿಂದ ರೂ.೬೪ ಲಕ್ಷ ಅಭಿವೃದ್ಧಿ ಕಾಮಗಾರಿ ಗಳಿಗೆ ಅನುದಾನ ಬಂದಿರುವುದಾಗಿ ತಿಳಿಸಿದರು.
ಅಮೃತ ಮಹೋತ್ಸವ ಆಚರಣೆ
ಮುಖ್ಯಾಧಿಕಾರಿ ಚಂದ್ರಕುಮಾರ್ ಮಾತನಾಡಿ, ಈ ಬಾರಿ ಅಮೃತ ಮಹೋತ್ಸವದ ಸ್ವಾತಂತ್ರö್ಯವನ್ನು ಸಂಭ್ರಮದಿAದ ಆಚರಿಸಲಾಗುವುದು. ಇದಕ್ಕಾಗಿ ತಾ.೧೩ ರಿಂದ ೧೭ರತನಕ ಮನೆ, ಅಂಗಡಿಗಳಲ್ಲಿ ರಾಷ್ಟçಧ್ವಜ ಹಾರಿಸಲಾಗುವುದು. ತಾ.೧೫ರಂದು ಅಮೃತ ಮಹೋತ್ಸವ ಸ್ವಾತಂತ್ರೊö್ಯತ್ಸ ವವನ್ನು ಆಚರಿಸಲಾಗುವುದು. ಈ ಪ್ರಯುಕ್ತ ಪುರಸಭೆಯಿಂದ ೪೦೦೦ ಧ್ವಜಗಳನ್ನು ಉಚಿತವಾಗಿ ಮನೆಗಳಿಗೆ, ಅಂಗಡಿಗಳಿಗೆ ಹಂಚಲಾಗುವುದು ಎಂದರು.
ಚರ್ಚೆಯಲ್ಲಿ ಸದಸ್ಯರುಗಳಾದ ಆಶಾ ಸುಬ್ಬಯ್ಯ, ಜೂನಾ, ಅನಿತಾ ಕುಮಾರ್, ಕೂತಂಡ ಸಚಿನ್, ತಸ್ಲೀಮ್ ಅಕ್ತರ್ ಭಾಗವಹಿಸಿದ್ದರು.
ಸಭೆಯಲ್ಲಿ ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ, ಸಿಬ್ಬಂದಿಗಳು ಹಾಜರಿದ್ದರು.
-ಡಿ.ಎಂ.ಆರ್., ಉಷಾ.