ಶ್ರೀಮಂಗಲ, ಆ. ೧೦: ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಳ್ಳಿ ಗ್ರಾಮದ ಕಾಫಿ ತೋಟ ಒಂದರಲ್ಲಿ ಎರಡು ತಿಂಗಳ ಕಾಡಾನೆ ಮರಿ ಜೀವಂತವಾಗಿ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಕಾಡಾನೆ ಮರಿಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ರವಾನಿಸಿದೆ.ಬ್ರಹ್ಮಗಿರಿ ಅಭಯಾರಣ್ಯ ಶ್ರೀಮಂಗಲ ವಿಭಾಗದ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಕಾಡಾನೆ ಮರಿ ಮಂಚಳ್ಳಿ ಗ್ರಾಮದ ಮಲ್ಲಂಗಡ ಕುಶಾ ಬೆಳ್ಯಪ್ಪ ಅವರ ಕಾಫಿ ತೋಟದಲ್ಲಿ ಪತ್ತೆಯಾಗಿದ್ದು, ಗಂಡು ಕಾಡಾನೆ ಮರಿ ಮೊದಲ ಪುಟದಿಂದ) ಆರೋಗ್ಯವಾಗಿದ್ದು ಹಾಲು ಸೇವನೆಯೊಂದಿಗೆ ಹಣ್ಣುಗಳನ್ನು ತಿನ್ನುತ್ತಿದೆ. ದುಬಾರೆ ಸಾಕಾನೆ ಶಿಬಿರಕ್ಕೆ ಹೆಚ್ಚಿನ ಆರೈಕೆಗೆ ಬಿಡಲಾಗುವುದು ಎಂದು ತಿಳಿಸಿದರುಶ್ರೀಮಂಗಲ ಪಶುವೈದ್ಯಾಧಿಕಾರಿ ಡಾ. ಬಿ.ಜಿ. ಗಿರೀಶ್ ಅವರು ಪ್ರಥಮ ಚಿಕಿತ್ಸೆ ನೀಡಿದರು. ಕಾಡಾನೆ ಮರಿ ಆರೋಗ್ಯಯುತವಾಗಿದ್ದು, ಸುಮಾರು ಎರಡುವರೆ ತಿಂಗಳು ವಯಸ್ಸಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಶಂಕರ್, ಪಂಚಾಯಿತಿ ಸದಸ್ಯರಾದ ತೀತಿರ ತೀರ್ಥ ಮಂಜುನಾಥ್ ಹಾಗೂ ಗ್ರಾಮಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.
-ಹರೀಶ್ ಮಾದಪ್ಪ