ಮಡಿಕೇರಿ, ಆ. ೧೧: ಕರ್ನಾಟಕ ಟಿಇಟಿ ಪರೀಕ್ಷೆಯನ್ನು ನವೆಂಬರ್ ೬ ರಂದು ನಡೆಸಲು ಸರ್ಕಾರ ತೀರ್ಮಾನಿಸಿದೆ ಮತ್ತು ಪಿಡಿಓ ಹುದ್ದೆಗಳ ನೇಮಕಾತಿಗೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತದೆ. ಈ ಪ್ರವೇಶ ಪರೀಕ್ಷೆಗಳ ತಯಾರಿಗಾಗಿ ಹಾಸನದ ಸಾಲಗಾಮೆ ರಸ್ತೆ ಬಳಿಯಿರುವ ಕೃಷಿಕ್ ಸರ್ವೋದಯ ಫೌಂಡೇಶನ್ ಹಾಸನ ಶಾಖೆಯಲ್ಲಿ ಅತ್ಯಂತ ನುರಿತ ವಿಷಯ ತಜ್ಞರಿಂದ ರಿಯಾಯಿತಿ ದರದಲ್ಲಿ ತರಬೇತಿಯನ್ನು ಶೀಘ್ರದಲ್ಲಿ ಪ್ರಾರಂಭಿಸುತ್ತಿದ್ದು, ಇದರ ಪೂರ್ವಭಾವಿಯಾಗಿ ತಾ. ೧೫ ರಂದು ಬೆಳಿಗ್ಗೆ ೧೦.೩೦ ರಿಂದ ಉಚಿತ ಕಾರ್ಯಾಗಾರ ನಡೆಯಲಿದೆ.

ತಾ. ೧೪ ರೊಳಗೆ ೮೬೬೦೨೧೭೭೩೯/ ೦೮೧೭೨-೨೪೫೧೩೫ ಕ್ಕೆ ಕರೆ/ವಾಟ್ಸಾಪ್ ಮಾಡಿ ಈ ಉಚಿತ ಕಾರ್ಯಾಗಾರಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹಾಸನ ಶಾಖೆಯ ಕೃಷಿಕ್ ಸರ್ವೋದಯ ಫೌಂಡೇಶನ್‌ನ ಕಾರ್ಯದರ್ಶಿ ಹೆಚ್.ಪಿ. ಮೋಹನ್ ತಿಳಿಸಿದ್ದಾರೆ.