ಸುಂಟಿಕೊಪ್ಪ, ಆ. ೧೧: ಮನೆ ನಿವೇಶನಕ್ಕೆ ಜಾಗ ನೀಡಬೇಕು, ಅಸ್ಸಾಂ ಮೂಲದ ಜನರಿಗೆ ಆಧಾರ್ ಕಾರ್ಡ್ ಮಾಡುವ ಬಗ್ಗೆ ಎಚ್ಚರ ಅಗತ್ಯ, ಕೂಲಿ ಕಾರ್ಮಿಕರ ಬಿಪಿಎಲ್ ಕಾರ್ಡ್ ಎಪಿಎಲ್ ಆಗಿದೆ. ಶಾಲಾ ಆವರಣದಲ್ಲಿ ಗಾಂಜಾ, ಮದ್ಯ ಸೇವನೆ ತಡೆಯಬೇಕು ಎಂದು ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ೨೦೨೨-೨೩ನೇ ಸಾಲಿನ ಗ್ರಾಮ ಸಭೆಯು ಕಾನ್ಬೈಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ ಬಿ.ಜಿ. ರಮೇಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮದ ಸುತ್ತಮುತ್ತಲಿನ ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕರಾಗಿ ಅಸ್ಸಾಂ ಮೂಲದ ನಿವಾಸಿಗಳೆಂದು ಅನೇಕ ಮಂದಿ ಬೀಡುಬಿಟ್ಟಿದ್ದಾರೆ. ಇವರಿಗೆ ಸೋಮವಾರಪೇಟೆ ತಾಲೂಕು ಎಂದು ಆಧಾರ್ ಕಾರ್ಡ್ ಹೇಗೆ ದೊರೆಯುತ್ತದೆ. ಬಹಳ ಮಂದಿ ಈ ರೀತಿ ಆಧಾರ್ ಕಾರ್ಡ್ ಹೊಂದಿದ್ದು ಇದರ ಹಿಂದೆ ದೊಡ್ಡ ಜಾಲವೊಂದು ಕಾರ್ಯ ನಿರ್ವಹಿಸುತ್ತಿದೆ. ಇದು ಸಮಾಜಕ್ಕೆ ಮಾರಕ ಇಂತಹವರನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಅಸ್ಸಾಂ ರಾಜ್ಯದಿಂದ ಬಂದವರೆAದು ನಂಬಿಸಿ ಕಾಫಿ ತೋಟಕ್ಕೆ ಸೇರುತ್ತಿರುವ ಬಗ್ಗೆ ಗುಮಾನಿ ಇದೆ. ಬಾಂಗ್ಲಾ, ನೇಪಾಳದಿಂದಲೂ ಕೊಡಗಿಗೆ ಬಂದು ನೆಲೆಸಿದ್ದಾರೆ. ಅವರಿಗೆ ಇಲ್ಲಿನ ಪೌರತ್ವ ನೀಡಿದರೆ ಮುಂದೆ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಕಾಫಿ ಬೆಳೆಗಾರ ಕೆ.ಎ. ತಮ್ಮಯ್ಯ ಸಭೆಯ ಗಮನ ಸೆಳೆದರು. ಪಂಚಾಯಿತಿ ಅಧ್ಯಕ್ಷ ಬಿ.ಜಿ. ರಮೇಶ್ ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ನೀಡಲಾಗುವುದೆಂದರು.
ಗ್ರಾಮದಲ್ಲಿ ಕೂಲಿ ಕಾರ್ಮಿಕರ ಬಿಪಿಎಲ್ ಕಾರ್ಡ್ ಇದ್ದಕ್ಕಿದ್ದಂತೆ ಎಪಿಎಲ್ ಕಾರ್ಡ್ ಆಗಿದೆ. ಕೆಲವರ ಕಾರ್ಡ್ಗಳೇ ಮಾಯವಾಗಿದೆ. ಆಹಾರ ಇಲಾಖೆ ಅಧಿಕಾರಿಗಳು ಸರಿಯಾದ ಸಮೀಕ್ಷೆ ನಡೆಸದೆ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದು, ಈ ರೀತಿಯಾಗಲು ಕಾರಣವೇನು? ಇಂದಿನ ಗ್ರಾಮ ಸಭೆಗೆ ಆಹಾರ ಇಲಾಖೆ ಅಧಿಕಾರಿ ಬರಲಿಲ್ಲ ಗ್ರಾಮ ಪಂಚಾಯಿತಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ಯಾರಾದರು ಮೃತಪಟ್ಟರೆ ಶವ ಸಂಸ್ಕಾರ ಮಾಡಲು ನಮ್ಮ ಗ್ರಾಮದಲ್ಲಿ ಜಾಗವಿಲ್ಲ ದೂರದ ಸುಂಟಿಕೊಪ್ಪ ಗ್ರಾಮಕ್ಕೆ ಕೊಂಡೊಯ್ಯಬೇಕು ಎಂದು ಗ್ರಾಮದ ಶಾಂತಪ್ಪ ಹಾಗೂ ಇತರರು ಸ್ಮಶಾನಕ್ಕೆ ಗ್ರಾಮದಲ್ಲಿ ಜಾಗ ಗುರುತಿಸಿ ಕೊಡಿ ಎಂದು ಆಗ್ರಹಿಸಿದರು.
ಗ್ರಾಮದಲ್ಲಿ ಆನೆ, ಮಂಗಗಳ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿ ಎಂದು ಗ್ರಾಮಸ್ಥರಾದ ಸೋಮಯ್ಯ. ಅಯ್ಯಣ್ಣ ಇತರರು ಹೇಳಿದರು. ಈಗಾಗಲೇ ನಿವೇಶನ ರಹಿತರಿಗೆ, ಸ್ಮಶಾನ ಜಾಗಕ್ಕೆ ಹಾಗೂ ಪೈಸಾರಿ ಜಾಗ ಗುರುತಿಸಿ ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಎಲ್ಲಾ ಕೆಲಸಗಳನ್ನು ಹಂತ ಹಂತವಾಗಿ ಮಾಡಲಾಗುವುದು ಎಂದು ಅಧ್ಯಕ್ಷರು ಉತ್ತರಿಸಿದರು. ಗಾಂಜಾ ಮತ್ತು ಮದ್ಯದ ಅಡ್ಡೆ ಕಾನ್ಬೈಲ್ ಶಾಲಾ ಆವರಣದಲ್ಲಿ ಸಂಜೆ ವೇಳೆ ಕಿಡಿಗೇಡಿಗಳು ಗಾಂಜಾ, ಮಧ್ಯ ಸೇವನೆ ಅತಿಯಾಗಿದೆ. ಯುವಕರು ದಾರಿ ತಪ್ಪುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಇzರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥೆ ಯಶೋದ ಹೇಳಿದರು. ಸುಂಟಿಕೊಪ್ಪ ಹೋಬಳಿಯಲ್ಲಿ ೧೧ ಆರೋಗ್ಯ ಉಪಕೇಂದ್ರಗಳಿದ್ದು ಕೇವಲ ೫ ಜನ ಆರೋಗ್ಯ ಸಹಾಯಕಿಯರಿದ್ದು ಎಲ್ಲರ ಸೇವೆ ಏಕ ಕಾಲದಲ್ಲಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಗ್ಯ ಸಹಾಯಕಿ ಕೆ.ಸಿ. ಲತಾಕುಮಾರಿ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷತೆ ವಹಿಸಿದ ಅಧ್ಯಕ್ಷ ರಮೇಶ್ ಮಾತನಾಡಿ ಸಭೆಯಲ್ಲಿ ಚರ್ಚೆಗಳು ಇದ್ದಲ್ಲಿ ಮಾತ್ರ ಅರ್ಥಪೂರ್ಣ ಸಭೆ ನಡೆದು ಗ್ರಾಮದ ಅಭಿವೃದ್ಧಿ ಸಾಧ್ಯ. ಗ್ರಾಮ ಗ್ರಾಮಸ್ಥರ ಆಶÀಯ ಬೇಡಿಕೆಗಳನ್ನು ಈಡೇರಿಸಲು ಪಂಚಾಯಿತಿ ಆಡಳಿತ ಮಂಡಳಿ ಸದಾ ಸಿದ್ಧವಿದೆ. ಯಾವುದೇ ಕೆÀಲಸಕ್ಕೆ ಗ್ರಾಮ ಸಭೆಯನ್ನು ಕಾಯದೆ ಸದಾ ತೆರೆದಿರುವ ಪಂಚಾಯಿತಿ ಕಚೇರಿಗೆ ಮಾಹಿತಿ ನೀಡಿ ಪರಿಹಾರ ಕಂಡುಕೊಳ್ಳುವAತೆ ಕರೆ ನೀಡಿದರು.
ಸಭೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕಾರಣೀಭೂತರಾದ ಶಿಕ್ಷಕರಿಗೆ ಶಾಲ Äಹೊದಿಸಿ ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು. ಸಭೆಯ ನೋಡಲ್ ಅಧಿಕಾರಿಯಾಗಿ ಪ್ರೌಢÀಶಾಲಾ ಮುಖ್ಯಶಿಕ್ಷಕ ಎಂ.ವಿ. ಮಂಜೇಶ್ ಕಾರ್ಯನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನಾರ್ ಸ್ವಾಗತಿಸಿ, ವಂದಿಸಿದರು. ಶಿಕ್ಷಕಿ ಶಾಂತಿ ಪ್ರಾರ್ಥಿಸಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾದ್ಯಕ್ಷ ಬಿ.ಈ. ಸತೀಶ್, ಕಾರ್ಯದರ್ಶಿ ಚಂದ್ರಶೇಖರ್, ಸದಸ್ಯರಾದ ಕೆ.ಎಂ. ಶುಭಾಶ್, ಸೀತೆ, ಎಂ.ಸಿ. ಜಗನ್ನಾಥ್, ರಾಧಾಮಣಿ, ಅರುಣಾಕುಮಾರಿ, ಪ್ರೇಮ, ಉಪಸ್ಥಿತರಿದ್ದರು.