ಕಡಂಗ, ಆ. ೧೧: ಕಾಕೋಟು ಪರಂಬು ಮುಲ್ಲೇರ ಮಧು ಮಂಜುನಾಥ ಅವರ ಗದ್ದೆಯಲ್ಲಿ ವೀರಾಜಪೇಟೆ ಸರಕಾರಿ ಪದವಿ ಕಾಲೇಜಿನ ಪ್ರಾಯೋಜಕತ್ವದಲ್ಲಿ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇವಡ ಗಿರೀಶ್ ಬೋಪಣ್ಣ ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ಕೆಸರುಗದ್ದೆ ಕ್ರೀಡೆಗೆ ಕಾಲೇಜು ಮಟ್ಟದಲ್ಲಿ ಪ್ರೋತ್ಸಾಹ ದೊರೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ವೇದಿಕೆಯಲ್ಲಿ ಸ್ಥಳ ದಾನಿ ಮುಲ್ಲೇರ ಮಧು ಮಂಜುನಾಥ್, ತೀತಿಮಾಡ ಬೋಸು ಅಯ್ಯಪ್ಪ, ಉಪಸ್ಥಿತರಿದ್ದರು. ಪ್ರಾಂಶುಪಾಲ ದಯಾನಂದ, ದೈಹಿಕ ಶಿಕ್ಷಕಿ ರಾಕಿ ಪೂವಣ್ಣ ಮಾತನಾಡಿದರು.