ಮಡಿಕೇರಿ, ಆ. ೧೦: ೭೫ನೇ ಸ್ವಾತಂತ್ರö್ಯ ದಿನದ ಅಂಗವಾಗಿ ಕಂಡಕರೆ ಗಾಂಧಿ ಯುವಕ ಸಂಘ ವತಿಯಿಂದ, ಕಂಡಕರೆಯ ಬ್ರೆöÊಟ್ ಸ್ಪೋರ್ಟ್ಸ್ ಕ್ಲಬ್ ಷಟಲ್ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಮೊದಲನೇ ವರ್ಷದ ಜಿಲ್ಲಾಮಟ್ಟದ ಮುಕ್ತ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ತಾ. ೧೪ ಮತ್ತು ೧೫ ರಂದು ನಡೆಯಲಿದೆ ಎಂದು ಸಮಿತಿ ತಿಳಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸಲಹೆಗಾರ ಮಹಮ್ಮದ್ ರಫಿ, ಬೆಳಿಗ್ಗೆ ಹತ್ತು ಗಂಟೆಗೆ ಪಂದ್ಯಾಟ ಪ್ರಾರಂಭ ವಾಗಲಿದ್ದು, ಪಂದ್ಯಾವಳಿಯಲ್ಲಿ ಜಿಲ್ಲೆಯ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ತಾ. ೧೨ ರಂದು ಬೆಳಿಗ್ಗೆ ಹತ್ತು ಗಂಟೆಯೊಳಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಮೊದಲು ನೋಂದಣಿ ಮಾಡಿಕೊಂಡ ೫೦ ತಂಡಗಳಿಗೆ ಮಾತ್ರ ಅವಕಾಶ ಇರಲಿದೆ. ಪ್ರಥಮ ಬಹುಮಾನ ರೂ. ೭ ಸಾವಿರ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ. ೩,೫೦೦ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಸೆಮಿಫೈನಲ್ ಪ್ರವೇಶಿಸಿದ ಎರಡು ತಂಡಗಳಿಗೆ ವಿಶೇಷ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನ ಗಳನ್ನು ನೀಡಲಾಗುವುದು ಎಂದು ವಿವರಿಸಿದರು. ಸಂಘದ ಅಧ್ಯಕ್ಷ ಕೆ.ಎಂ. ಇಸ್ಮಾಹಿಲ್ ಮಾತನಾಡಿ, ತಾ. ೧೫ ರ ಸಂಜೆ ೭ ಗಂಟೆ ನಡೆಯುವ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಸಮಾಜ ಸೇವಕ, ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಕಂಡಕರೆಯ ಶಶಿಕುಮಾರ್, ಕಂಡಕರೆ ವಾರ್ಡ್ ಮಾಜಿ ಗ್ರಾ.ಪಂ. ಸದಸ್ಯ ಹಾಗೂ ಗಾಂಧಿ ಯುವಕ ಸಂಘದ ಸಲಹೆಗಾರ ಮೊಹಮ್ಮದ್ ರಫಿ, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವತ್ಸಲ, ಚೆಟ್ಟಳ್ಳಿಯ ಲೈನ್ ಮೆನ್‌ಗಳಿಗೆ, ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಎಂ.ಬಿ.ಎ. ಪದವಿ ಪಡೆದಿರುವ ಷರೀಫ್ ಪಿ.ಎಂ., ಬ್ರೆöÊಟ್ ಸ್ಪೋರ್ಟ್ಸ್ ಕ್ಲಬ್ ಪ್ರಮುಖರಾದ ಮನ್ಸೂರ್ ಹಾಗೂ ನೌಷಾದ್ ಅವರನ್ನು ಸಂಘದಿAದ ಸನ್ಮಾನಿಸಿ ಗೌರವಿಸಲಾಗುತ್ತದೆ. ಸಮಾರೋಪದ ಕಾರ್ಯಕ್ರಮಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ೯೭೩೧೬೮೭೫೯೮, ೯೫೯೧೬ ೯೨೪೬೭ ಸಂಖ್ಯೆಯನ್ನು ಸಂಪರ್ಕಿಸುವAತೆ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಸುಹೈಲ್ ಓ.ಎಸ್,, ಉಪಾಧ್ಯಕ್ಷ ಉನೈಸ್ ಕೆ.ಎಂ. ಇದ್ದರು.