ಸೋಮವಾರಪೇಟೆ, ಆ. ೮: ಲಯನ್ಸ್ ಕ್ಲಬ್ ವತಿಯಿಂದ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ವನಮಹೋತ್ಸವ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ೨೫ಸಾವಿರ ರೂ.ಗಳ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡಲಾಯಿತು.

ಶಾಲಾ ಆವರಣದ ಸುತ್ತ ನೆರಳಿನ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು. ಮರ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಲಯನ್ಸ್ ಜಿಲ್ಲಾ ರಾಯಭಾರಿ ಕೆ.ಎಂ.ಜಗದೀಶ್ ಹೇಳಿದರು.

ಲಯನ್ಸ್ ಅಧ್ಯಕ್ಷ ಸಿ.ಕೆ.ರೋಹಿತ್, ಕಾರ್ಯದರ್ಶಿ ಕೆ.ಎನ್.ತೇಜಸ್ವಿ, ಖಜಾಂಚಿ ಜಿ.ಟಿ.ಯೋಗೇಂದ್ರ, ನಿಕಟಪೂರ್ವ ಅಧ್ಯಕ್ಷ ಸಿ.ಕೆ.ಮಲ್ಲಪ್ಪ, ಹಿರಿಯ ಪದಾಧಿಕಾರಿಗಳಾದ ಎಸ್.ಬಿ. ಲೀಲಾರಾಮ್, ಜಿ.ಎಸ್. ರಾಜಾರಾಮ್, ಎಸ್.ಎನ್. ಯೋಗೇಶ್, ಪವನ್ ಮುತ್ತಪ್ಪ, ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ವೆಂಕಟೇಶ್, ನಿರ್ದೇಶಕರಾದ ಎ. ಎಸ್ ಮಹೇಶ್, ಮುಖ್ಯ ಶಿಕ್ಷಕಿ ಪಿ.ಕೆ.ಲಕ್ಷಿö್ಮ ಇದ್ದರು.