ಮಡಿಕೇರಿ, ಆ. ೮: ಸ್ಥಳೀಯರ, ವಾಹನ ಸವಾರರ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಮಡಿಕೇರಿ-ತಣ್ಣಿಮಾನಿ-ಭಾಗಮಂಡಲ-ಕರಿಕೆ ಸರಪಳಿ ೫೫.೮೦ ಕಿ.ಮೀ. ರಲ್ಲಿ (ಭಾಗಮಂಡಲ-ಕರಿಕೆ ರಸ್ತೆಯ ಮೇಲಡ್ಕ ಹತ್ತಿರ) ಭಾಗಶಃ ಕುಸಿತವಾಗಿರುವ ರಸ್ತೆಯಲ್ಲಿ ಪ್ರಯಾಣಿಕರ ಲಘು ವಾಹನಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ರೀತಿಯ ಭಾರೀ ವಾಹನಗಳ ಸಂಚಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಬಿ.ಸಿ. ಸತೀಶ ಆದೇಶ ಹೊರಡಿಸಿದ್ದಾರೆ.
*ಬೆಟ್ಟಗೇರಿ-ನಾಪೋಕ್ಲು ರಸ್ತೆ ಸರಪಳಿ ೫.೫೦ ಕಿ.ಮೀ.ರಲ್ಲಿ (ಕೊಟ್ಟಮುಡಿ ಜಂಕ್ಷನ್ ಹತ್ತಿರ) ರಸ್ತೆ ಕುಸಿತವಾಗಿರುವ ರಸ್ತೆಯಲ್ಲಿ ಪ್ರಯಾಣಿಕರ ಲಘು ವಾಹನಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ರೀತಿಯ ಭಾರೀ ವಾಹನಗಳ ಸಂಚಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಈ ರಸ್ತೆಗೆ ಪರ್ಯಾಯವಾಗಿ ನಾಪೋಕ್ಲುವಿನಿಂದ ಬೆಟ್ಟಗೇರಿಗಾಗಿ ಮಡಿಕೇರಿಗೆ ಸಂಚರಿಸುವ ಒಟ್ಟು ತೂಕ ೧೬.೨ಟನ್ ಒಳಪಟ್ಟ ಭಾರೀ ವಾಹನಗಳು ಕೊಟ್ಟಮುಡಿ ಜಂಕ್ಷನ್, ಬೊಳಿಬಾಣೆ, ಹೊದವಾಡ, ಪಾಲೂರು ಜಂಕ್ಷನ್ ಮೂಲಕ ಬೆಟ್ಟಗೇರಿ ರಸ್ತೆ ಸಂಪರ್ಕಿಸುವುದು.
ಮಡಿಕೇರಿಯಿAದ ನಾಪೋಕ್ಲುವಿಗೆ ಸಂಚರಿಸುವ ಒಟ್ಟು ತೂಕ ೧೬.೨ ಟನ್ ಒಳಪಟ್ಟ ಭಾರಿ ವಾಹನಗಳು ಪಾಲೂರು ಜಂಕ್ಷನ್, ಬೊಳಿಬಾಣಿ ಮೂಲಕ ಕೊಟ್ಟಮುಡಿ ಜಂಕ್ಷನ್ ಸಂಪರ್ಕಿಸುವAತೆ ತಿಳಿಸಿದ್ದಾರೆ.