ಮಡಿಕೇರಿ, ಆ. ೯ : ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಸುರಿದ ಮಳೆ ಮಂಗಳವಾರ ಕೊಂಚ ಕಡಿಮೆಯಾದಂತೆ ಭಾಸವಾಗಿದೆ. ಕೆಲವು ಕಡೆಗಳಲ್ಲಿ ಮಾತ್ರ ಮಳೆಯಾಗುತ್ತಿದೆ. ಮಳೆ ಇಳಿಮುಖಗೊಂಡರೂ ಆಸ್ತಿ - ಪಾಸ್ತಿಗಳಿಗೆ ಹಾನಿ ಸಂಭವಿಸುತ್ತಲೇ ಇದೆ. ರಸ್ತೆಯಲ್ಲಿ ಜಲಸ್ಫೋಟಗೊಂಡು ರಸ್ತೆಗೆ ಹಾನಿಯಾಗಿದ್ದರೆ, ಅಲ್ಲಲ್ಲಿ ಭೂಕುಸಿತ, ಮನೆಗಳಿಗೆ ಹಾನಿ ಉಂಟಾಗಿದೆ. ಇದುವರೆಗೆ ಸುರಿದ ಮಳೆಯ ತೀವ್ರತೆಗೆ ತೇವಗೊಂಡಿರುವ ಪ್ರದೇಶಗಳಲ್ಲಿ ಹಾನಿ ಉಂಟಾಗುತ್ತಿವೆ.
ಮಳೆರಾಯನ ಅಬ್ಬರಕ್ಕೆ ಮಡಿಕೇರಿ ಮಂಗಳೂರು ರಾಷ್ಟಿçÃಯ ಹೆದ್ದಾರಿ ನಡುವಿನ ಕರ್ತೋಜಿಯಲ್ಲಿ ಬರೆ ಕುಸಿದ ಘಟನೆ ನಡೆದಿದೆ.
ಕಳೆದ ರಾತ್ರಿ ಬರೆಯಲ್ಲಿ ಬಿರುಕು ಕಾಣಿಸಿಕೊಂಡಿದೆ, ಅಲ್ಲದೇ ಅಲ್ಪಪ್ರಮಾಣದಲ್ಲಿ ಮಣ್ಣು ಜರಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಸ್ಥಳದಲ್ಲಿ ‘ಎಕ್ಸ್ಕವೇಟರ್' ಅನ್ನು ನಿಲುಗಡೆಗೊಳಿಸಿದ್ದು, ಕಾರ್ಮಿಕರನ್ನು ನಿಯೋಜನೆ ಮಾಡಲಾಗಿದೆ. ಏನಾದರು ಅನಾಹುತ ಸಂಭವಿಸಿದ್ದಲ್ಲಿ ತ್ವರಿತ ಮಣ್ಣು ತೆರವು ಮಾಡಲು ಕ್ರಮವಹಿಸಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿ ಮುರುಗೇಶ್ ತಿಳಿಸಿದ್ದಾರೆ.
(ಮೊದಲ ಪುಟದಿಂದ) ಬರೆ ಕುಸಿಯುತ್ತಿರುವ ಜಾಗದಲ್ಲಿರುವ ವಿದ್ಯುತ್ ಕಂಬಗಳನ್ನು ಸೆಸ್ಕ್ ತೆರವುಗೊಳಿಸಿ ಮತ್ತೊಂದು ಬದಿಗೆ ಸ್ಥಳಾಂತರಿಸಿದೆ. ಜೊತೆಗೆ ರಸ್ತೆ ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
ಸೋಮವಾರಪೇಟೆ: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಪಳ್ಳಿ ಗ್ರಾಮದ ಸೋಮಯ್ಯ ಅವರ ಮನೆಯ ಪಕ್ಕದಲ್ಲಿ ಬರೆ ಕುಸಿತವಾಗುತ್ತಿದ್ದು, ವಾಸದ ಮನೆಗೆ ಆತಂಕ ತಂದೊಡ್ಡಿದೆ. ತಕ್ಷಣ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗ ಇತ್ತ ಗಮನ ಹರಿಸಿ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.ಮಡಿಕೇರಿ: ಭಾರೀ ಮಳೆಯ ಪರಿಣಾಮ ಮಡಿಕೇರಿ-ಮಂಗಳೂರು ಹೆದ್ದಾರಿ ನಡುವಿನ ಕರ್ತೋಜಿಯಲ್ಲಿ ಬರೆ ಕುಸಿದ ಸ್ಥಳಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦೧೮ರಲ್ಲಿಯೂ ಇದೇ ಜಾಗದಲ್ಲಿ ದೊಡ್ಡ ಮಟ್ಟದ ಬರೆ ಕುಸಿದು ಸಂಚಾರಕ್ಕೆ ತೊಡಕು ಉಂಟಾಗಿತ್ತು. ಈ ಬಾರಿಯೂ ಕುಸಿದಿರುವುದು ಆತಂಕಕ್ಕೆ ಎಡೆಮಾಡಿ ಕೊಟ್ಟಿದೆ. ಯಾವುದೇ ಕ್ಷಣದಲ್ಲಾದರೂ ಬರೆ ಕುಸಿಯುವ ಭೀತಿ ಇರುವ ಕಾರಣ ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಸಂಚಾರ ದಟ್ಟಣೆ ಎದುರಾಗದಂತೆ ಪೊಲೀಸ್ ಇಲಾಖೆ ಸೂಚಿಸಿದ್ದು, ರಸ್ತೆಯ ಎರಡು ತುದಿಗಳಲ್ಲಿಯೂ ಪೊಲೀಸರನ್ನು ನೇಮಿಸಿ ವಾಹನಗಳ ಓಡಾಟದ ಮೇಲೆ ನಿಗಾ ಇರಿಸಲಾಗಿದೆ. ಆಕಸ್ಮಾತ್ ಬರೆ ಕುಸಿದರೆ ಪರ್ಯಾಯ ಮಾರ್ಗ ಕೂಡ ಇಲ್ಲ. ಹೆದ್ದಾರಿ ಪಕ್ಕದಲ್ಲಿ ನದಿಯೂ ಹರಿಯುವುದರಿಂದ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಯಾದರೂ ಜನರ ಜೀವಕ್ಕೆ ಅಪಾಯವಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು. ಭೇಟಿ ಸಂದರ್ಭ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಮುರುಗೇಶ್ ಹಾಜರಿದ್ದರು.
ಕುಶಾಲನಗರ: ಮಡಿಕೇರಿ -ಮಂಗಳೂರು ಹೆದ್ದಾರಿ ರಸ್ತೆ ಮದೆನಾಡು ಬಳಿ ಬೆಟ್ಟ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ತಾ. ೯ ರಂದು ರಾತ್ರಿ ೯ ಗಂಟೆಯಿAದ ತಾ. ೧೦ ರ ಬೆಳಿಗ್ಗೆ ೬.೩೦ ಗಂಟೆವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿರುವ ಸಂಬAಧ ಕೊಡಗು - ಮೈಸೂರು ಜಿಲ್ಲಾ ಗಡಿಭಾಗ ಕುಶಾಲನಗರ ಗೇಟ್ ಬಳಿ ಪೊಲೀಸರು ಕುಶಾಲನಗರ ಮೂಲಕ ಮಡಿಕೇರಿಗಾಗಿ ಮಂಗಳೂರು ಕಡೆಗೆ ತೆರಳುವ ಎಲ್ಲಾ ವಾಹನಗಳನ್ನು ತಡೆದು ನಿಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು.
ಕನಿಷ್ಟ ಮಡಿಕೇರಿವರೆಗಾದರೂ ಬಿಡಬಹುದಲ್ಲ., ಕುಶಾಲನಗರದಲ್ಲೇ ಏಕೆ ತಡೆ ಮಾಡುತ್ತಿದ್ದೀರಾ ಎಂದು ಪ್ರಯಾಣಿಕರು ಪ್ರಶ್ನೆ ಮಾಡುತ್ತಿದ್ದರು. ಪೊಲೀಸರ ಈ ಕ್ರಮ ಸರಿಯೇ ಎಂಬದು ಸಾರ್ವಜನಿಕರ ಪ್ರಶ್ನೆಯಾಗಿತ್ತು.
ಮಡಿಕೇರಿಯಲ್ಲಿ ತಡೆ : ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಮಡಿಕೇರಿಯ ಜ. ತಿಮ್ಮಯ್ಯ ವೃತ್ತದ ಬಳಿ ಮಂಗಳೂರು ಕಡೆಗೆ ತೆರಳುವ ರಸ್ತೆಗೆ ಪೊಲೀಸರು ಬ್ಯಾರಿಕೇಡ್ಗಳನ್ನು ಅಳವಡಿಸಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದರು.
ಚೆಯ್ಯಂಡಾಣೆ: ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ವೀರಾಜಪೇಟೆ-ನಾಪೋಕ್ಲು ಮುಖ್ಯ ರಸ್ತೆಯ ಕರಡ ಸೇತುವೆ ಸಮೀಪ ರಸ್ತೆಯ ಮಧ್ಯದಲ್ಲಿ ಜಲಸ್ಫೋಟ ಉಂಟಾಗಿದೆ. ಇಂದು ಮುಂಜಾನೆ ಖಾಸಗಿ ಬಸ್ಸೊಂದು ರಸ್ತೆಯ ಮಧ್ಯೆ ಸಿಲುಕಿಕೊಂಡ ಪರಿಣಾಮ ವಾಹನ ಸಂಚರಿಸಲು ಸಾಧ್ಯವಾಗದೆ ಎರಡು ತಾಸಿಗೂ ಹೆಚ್ಚು ಕಾಲ ವಾಹನಗಳ ಚಾಲಕರು ರಸ್ತೆಯಲ್ಲಿ ಅನಗತ್ಯವಾಗಿ ಕಾಯಬೇಕಾಯಿತು. ಬಳಿಕ ವಾಹನಗಳು ಪರ್ಯಾಯ ಮಾರ್ಗವಾಗಿ ಚೆಯ್ಯಂಡಾಣೆಯಿAದ ಬಾವಲಿ, ಎಡಪಾಲದ ಮೂಲಕ ಕಡಂಗಕ್ಕೆ ತೆರಳಿದವು.
ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ಹಾಗೂ ಸದಸ್ಯ ಕೋಡಿರ ವಿನೋದ್ ನಾಣಯ್ಯ ಕೂಡಲೇ ಸ್ಥಳಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಂಡು ಜೆಸಿಬಿ ಹಾಗೂ ಕಲ್ಲುಗಳನ್ನು ತರಿಸಿ ವಾಹನ ಸಂಚರಿಸಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರು.
ಇಲಾಖೆಯ ನಿರ್ಲಕ್ಷö್ಯ
ಗ್ರಾಮಸ್ಥ ಅಭಿನ್ ಮಾತನಾಡಿ ನಾವು ದಿನನಿತ್ಯ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಲೋಕೋಪಯೋಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಿಲ್ಲ. ಎರಡುಬಾರಿ ‘ಶಕ್ತಿ’ ಪತ್ರಿಕೆಯಲ್ಲಿ ಇದರ ಬಗ್ಗೆ ಸುದ್ದಿ ಪ್ರಕಟವಾಗಿತ್ತು. ಆದರೂ ಕ್ರಮ ಕೈಗೊಳ್ಳದೆ ರಸ್ತೆಯ ಅಭಿವೃದ್ಧಿ ಕುರಿತು ನಿರ್ಲಕ್ಷö್ಯ ವಹಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನಾದರೂ ಸಂಬAಧಪಟ್ಟ ಅಧಿಕಾರಿಗಳು ಎಚ್ಚೆತ್ತು ಮಳೆಗಾಲದ ಬಳಿಕ ವೀರಾಜಪೇಟೆ- ಕಡಂಗ, ನಾಪೋಕ್ಲು ಮುಖ್ಯ ರಸ್ತೆಯ ಅಭಿವೃದ್ಧಿ ಕೈಗೆತ್ತಿಕೊಳ್ಳಬೇಕೆಂದರು.
ತಲಕಾವೇರಿ, ಭಾಗಮಂಡಲ, ಇಗ್ಗುತಪ್ಪ ದೇವಸ್ಥಾನ, ಎಮ್ಮೆಮಾಡು ದರ್ಗಾ, ನಾಲ್ಕುನಾಡು ಅರಮನೆ, ಚೇಲವಾರ ಜಲಪಾತ ಮುಂತಾದ ಪ್ರವಾಸಿ ಹಾಗೂ ಆಧ್ಯಾತ್ಮಿಕ ತಾಣಗಳಿಗೆ ಭಕ್ತರು, ಪ್ರವಾಸಿಗರು ಹೆಚ್ಚಾಗಿ ಆಗಮಿಸಲು ಬಳಕೆಮಾಡುವ ರಸ್ತೆ ಇದಾಗಿದೆ.
ಸೇತುವೆಗೆ ಅಪಾಯ
ಜಲಸ್ಫೋಟ ಕರಡ ಸೇತುವೆ ಸಮೀಪದಲ್ಲಾಗಿದ್ದು ಸೇತುವೆಗೂ ಕೂಡ ಅಪಾಯವಿದೆ. ಮಳೆ ಹೆಚ್ಚಾದಲ್ಲಿ ಜಲಸ್ಫೋಟವಾಗಿ ಸೇತುವೆ ಕೂಡ ಕೊಚ್ಚಿ ಹೋಗುವುದರಲ್ಲಿ ಸಂದೇಹವಿಲ್ಲವೆAದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಮರ್ಪಕ ರಸ್ತೆ, ಸೇತುವೆಯತ್ತ ಲೋಕೋಪಯೋಗಿ ಇಲಾಖೆ ಚಿತ್ತಹರಿಸಲೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಂಚರಿಸಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರು.

ಗೋಣಿಕೊಪ್ಪಲು: ಎಡೆಬಿಡದೆ ಸುರಿಯುತ್ತಿರುವ ಮಳೆಯು ಇದೀಗ ದಕ್ಷಿಣ ಕೊಡಗಿನ ಕೆಲವು ಭಾಗಗಳಲ್ಲಿ ಬಿಡುವು ನೀಡಿದ್ದು ಪ್ರಮುಖವಾಗಿ ಗೋಣಿಕೊಪ್ಪ ನಗರದಲ್ಲಿ ಹರಿಯುತ್ತಿದ್ದ ಕೀರೆ ಹೊಳೆಯ ನೀರು ನಿಧಾನಗತಿಯಾಗಿ ಇಳಿಯುತ್ತಿದೆ. ಕಳೆದ ಎರಡು ದಿನಗಳ ಮಳೆಯಿಂದಾಗಿ ಕೀರೆ ಹೊಳೆಯು ಅಪಾಯ ಮಟ್ಟ ತಲುಪಲು ಕೆಲವು ಅಡಿಗಳಷ್ಟೆ ಬಾಕಿ ಇದ್ದಿತು. ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆಯೆ ನೀರಿನ ಪ್ರಮಾಣವೂ ಕಡಿಮೆಯಾಗಿದ್ದು ಪ್ರವಾಹದ ಆತಂಕ ಸಧ್ಯದ ಪರಿಸ್ಥಿತಿಯಲ್ಲಿ ದೂರವಾಗಿದೆ.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಕೀರೆಹೊಳೆಯ ಬದಿಯಲ್ಲಿ ವಾಸಿಸುವ ಗುಡಿಸಲು ಮನೆಗಳಿಗೆ ತೆರಳಿ ಅಲ್ಲಿಯ ನಿವಾಸಿಗಳಿಗೆ ಮಳೆಯ ಬಗ್ಗೆ ಎಚ್ಚರವಹಿಸುವಂತೆ ತಿಳಿಸಿದರು. ಮಳೆಯಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಹೊರತುಪಡಿಸಿದರೆ ಗಂಭೀರ ಅಪಾಯವು ಈ ಭಾಗದಲ್ಲಿ ವರದಿಯಾಗಿಲ್ಲ. ಕಳೆದೆರಡು ವರ್ಷಗಳಿಂದ ನಗರದಲ್ಲಿ ಹರಿಯುತ್ತಿರುವ ಕೀರೆ ಹೊಳೆಯ ಹಾಗೂ ಬೈ ಪಾಸ್ ರಸ್ತೆಯ ಬದಿಯಲ್ಲಿರುವ ಕೈ ತೋಡಿನ ಹೂಳೆತ್ತುವುದರಿಂದ ನೀರಿನ ಪ್ರವಾಹ ಅಷ್ಟಾಗಿ ಕಂಡು ಬರುತ್ತಿಲ್ಲ.
ಕೀರೆ ಹೊಳೆ ಹಾಗೂ ಬೈಪಾಸ್ ಕೈ ತೋಡು ಬದಿಯಲ್ಲಿ ವಾಸಿಸುವ ಮನೆಗಳಿಗೆ ತೆರಳಿದ ಕಂದಾಯ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಿದ್ದರು. ನೀರಿನ ಅಪಾಯಮಟ್ಟ ಕಂಡು ಬಂದಲ್ಲಿ ಕೂಡಲೇ ಇಲಾಖೆಯು ನಿಗದಿಪಡಿಸಿದ ಸ್ಥಳಕ್ಕೆ ತೆರಳಲು ಅವಕಾಶವಿದೆ ಎಂದು ನಿವಾಸಿಗಳಿಗೆ ಇಲಾಖೆ ವತಿಯಿಂದ ಮಾಹಿತಿ ಒದಗಿಸಿದರು.
ದಕ್ಷಿಣ ಕೊಡಗಿನೆಲ್ಲೆಡೆ ವಿಪರೀತ ಮಳೆ ಸುರಿದ ಪರಿಣಾಮ ನಾಗರಿಕರು ಗೋಣಿಕೊಪ್ಪಲು: ಎಡೆಬಿಡದೆ ಸುರಿಯುತ್ತಿರುವ ಮಳೆಯು ಇದೀಗ ದಕ್ಷಿಣ ಕೊಡಗಿನ ಕೆಲವು ಭಾಗಗಳಲ್ಲಿ ಬಿಡುವು ನೀಡಿದ್ದು ಪ್ರಮುಖವಾಗಿ ಗೋಣಿಕೊಪ್ಪ ನಗರದಲ್ಲಿ ಹರಿಯುತ್ತಿದ್ದ ಕೀರೆ ಹೊಳೆಯ ನೀರು ನಿಧಾನಗತಿಯಾಗಿ ಇಳಿಯುತ್ತಿದೆ. ಕಳೆದ ಎರಡು ದಿನಗಳ ಮಳೆಯಿಂದಾಗಿ ಕೀರೆ ಹೊಳೆಯು ಅಪಾಯ ಮಟ್ಟ ತಲುಪಲು ಕೆಲವು ಅಡಿಗಳಷ್ಟೆ ಬಾಕಿ ಇದ್ದಿತು. ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆಯೆ ನೀರಿನ ಪ್ರಮಾಣವೂ ಕಡಿಮೆಯಾಗಿದ್ದು ಪ್ರವಾಹದ ಆತಂಕ ಸಧ್ಯದ ಪರಿಸ್ಥಿತಿಯಲ್ಲಿ ದೂರವಾಗಿದೆ.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಕೀರೆಹೊಳೆಯ ಬದಿಯಲ್ಲಿ ವಾಸಿಸುವ ಗುಡಿಸಲು ಮನೆಗಳಿಗೆ ತೆರಳಿ ಅಲ್ಲಿಯ ನಿವಾಸಿಗಳಿಗೆ ಮಳೆಯ ಬಗ್ಗೆ ಎಚ್ಚರವಹಿಸುವಂತೆ ತಿಳಿಸಿದರು. ಮಳೆಯಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಹೊರತುಪಡಿಸಿದರೆ ಗಂಭೀರ ಅಪಾಯವು ಈ ಭಾಗದಲ್ಲಿ ವರದಿಯಾಗಿಲ್ಲ. ಕಳೆದೆರಡು ವರ್ಷಗಳಿಂದ ನಗರದಲ್ಲಿ ಹರಿಯುತ್ತಿರುವ ಕೀರೆ ಹೊಳೆಯ ಹಾಗೂ ಬೈ ಪಾಸ್ ರಸ್ತೆಯ ಬದಿಯಲ್ಲಿರುವ ಕೈ ತೋಡಿನ ಹೂಳೆತ್ತುವುದರಿಂದ ನೀರಿನ ಪ್ರವಾಹ ಅಷ್ಟಾಗಿ ಕಂಡು ಬರುತ್ತಿಲ್ಲ.
ಕೀರೆ ಹೊಳೆ ಹಾಗೂ ಬೈಪಾಸ್ ಕೈ ತೋಡು ಬದಿಯಲ್ಲಿ ವಾಸಿಸುವ ಮನೆಗಳಿಗೆ ತೆರಳಿದ ಕಂದಾಯ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಿದ್ದರು. ನೀರಿನ ಅಪಾಯಮಟ್ಟ ಕಂಡು ಬಂದಲ್ಲಿ ಕೂಡಲೇ ಇಲಾಖೆಯು ನಿಗದಿಪಡಿಸಿದ ಸ್ಥಳಕ್ಕೆ ತೆರಳಲು ಅವಕಾಶವಿದೆ ಎಂದು ನಿವಾಸಿಗಳಿಗೆ ಇಲಾಖೆ ವತಿಯಿಂದ ಮಾಹಿತಿ ಒದಗಿಸಿದರು.
ದಕ್ಷಿಣ ಕೊಡಗಿನೆಲ್ಲೆಡೆ ವಿಪರೀತ ಮಳೆ ಸುರಿದ ಪರಿಣಾಮ ನಾಗರಿಕರು ಹೆಚ್ಚಾಗಿ ಪಟ್ಟಣದತ್ತ ಆಗಮಿಸಿರಲಿಲ್ಲ. ಇದರಿಂದಾಗಿ ವಾಣಿಜ್ಯ ನಗರದ ಬಹುತೇಕ ಅಂಗಡಿ ಮಳಿಗೆಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಗ್ರಾಮೀಣ ಪ್ರದೇಶಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಗಳು ಪ್ರಯಾಣಿಕರಿಲ್ಲದೆ ಹಲವು ಮಾರ್ಗಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿದ್ದವು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕಡಿಮೆಯಾಗಿತ್ತು. ಸದಾ ಜನಜಂಗುಳಿಯಿAದ ಕೂಡಿರುತ್ತಿದ್ದ ಗೋಣಿಕೊಪ್ಪ ನಗರದಲ್ಲಿ ಅಷ್ಟಾಗಿ ಜನರ ಓಡಾಟ ಕಂಡು ಬರಲಿಲ್ಲ.
ಕೆಲವು ವಿದ್ಯುತ್ ಟ್ರಾನ್ಸ್ಫಾರ್ಮರ್ಗಳಲ್ಲಿ ಕಾಣಿಸಿಕೊಂಡ ದೋಷದಿಂದ ನಗರದ ಕೆಲವು ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಕೆಲಸ ಕಾರ್ಯದಲ್ಲಿ ತೊಡಗಿದ್ದರು. ಮಳೆ - ಗಾಳಿಯ ಹಿನ್ನೆಲೆ ಗ್ರಾಮೀಣ ಭಾಗದಲ್ಲಿ ಬಹುತೇಕ ಮರಗಳು ವಿದ್ಯುತ್ ಕಂಬದ ಮೇಲೆ ಉರುಳಿ ಬಿದ್ದಿರುವುದರಿಂದ ಇದರ ತೆರವು ಕಾರ್ಯ ನಡೆಯುತ್ತಿದೆ. ಹಲವು ಭಾಗಗಳಲ್ಲಿ ಇನ್ನೂ ಕೂಡ ವಿದ್ಯುತ್ ಪೂರೈಸಲು ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ.ಕರಿಕೆ: ಧಾರಾಕಾರ ಮಳೆಯ ಪರಿಣಾಮ ಜಲಸ್ಫೋಟಗೊಂಡು ಕುಸಿದ ಭಾಗಮಂಡಲ-ಕರಿಕೆ ಅಂತರ್ ರಾಜ್ಯ ಹೆದ್ದಾರಿಯನ್ನು ತುರ್ತು ದುರಸ್ತಿ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ಮಣ್ಣಿನ ಚೀಲದ ರಕ್ಷಣಾ ತಡೆಗೋಡೆ ನಿರ್ಮಾಣ ಮಾಡಿ ಕುಸಿದ ಭಾಗದ ರಸ್ತೆ ಬದಿಗೆ ನೀರು ಹರಿಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಬೇಲಿಯನ್ನು ಕೂಡ ನಿರ್ಮಾಣ ಮಾಡಲಾಗಿದೆ. ಜಲ್ಲಿ ಕಲ್ಲುಗಳನ್ನು ಬಳಸಿ ವಾಹನ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಅಗಲೀಕರಣಗೊಳಿಸಲಾಗಿದ್ದು, ಈ ಭಾಗದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು ಮಳೆ ಮತ್ತೆ ಮುಂದುವರಿದರೆ ರಸ್ತೆ ಕುಸಿಯುವ ಸಾಧ್ಯತೆ ಇದೆ. ಲೋಕೋಪಯೋಗಿ ಇಲಾಖೆಯ ವರದಿಯ ಮೇರೆಗೆ ಈಗಾಗಲೇ ಜಿಲ್ಲಾಧಿಕಾರಿಗಳು ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದರೂ ಜಲಸ್ಫೋಟಗೊಂಡ ಕಾರಣ ರಸ್ತೆ ಕೆಳ ಬದಿಯಲ್ಲಿ ನೀರಿನ ಒಳ ಹರಿವು ನಿರಂತರವಾಗಿ ಇರುವುದರಿಂದ ಮತ್ತೆ ಕುಸಿಯುವ ಸಾಧ್ಯತೆ ಹೆಚ್ಚಿದೆ. ಪ್ರಯಾಣಿಕರು ಜಾಗರೂಕತೆಯಿಂದ ಸಂಚರಿಸಬೇಕಿದೆ.ಕುಸಿತಗೊAಡಿದೆ. ಯೋಗೇಶ್ ಅವರಿಗೆ ಸೇರಿದ ವಾಸದ ಮನೆಯು ಭಾಗಶಃ ಜಖಂಗೊAಡಿದ್ದು, ವಾಸಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ.
ಶನಿವಾರಸಂತೆ ಹೋಬಳಿಯ ಹೊಸಳ್ಳಿ ಗ್ರಾಮದ ಲಕ್ಷö್ಮಮ್ಮ ಅವರ ಮನೆ ಶೇ. ೨೦ರಷ್ಟು ಹಾನಿಗೀಡಾಗಿದೆ. ಜಾನಕಿ ಬಸವರಾಜ್ ಅವರಿಗೆ ಸೇರಿದ ಮನೆಯ ಹಿಂಭಾಗದ ಗೋಡೆ ಜಖಂಗೊAಡಿದೆ. ಘಟನಾ ಸ್ಥಳಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರೀ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ಜನ ಜೀವನ ಅವ್ಯವಸ್ತಗೊಂಡಿದೆ. ಗ್ರಾಮೀಣ ಭಾಗದ ರಸ್ತೆಗಳೂ ದುರಸ್ತಿ ಗೀಡಾಗುತ್ತಿದ್ದು, ಸಂಚಾರ ದುಸ್ತರವಾಗುತ್ತಿದೆ.
ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ವ್ಯಾಪ್ತಿಯ ಶಾಂತಳ್ಳಿ, ಬೆಟ್ಟದಳ್ಳಿ, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನದ ೨೪ ಗಂಟೆಯೂ ಮಳೆಯಾಗುತ್ತಿದೆ. ಕಾಫಿ ಹಾಗೂ ಏಲಕ್ಕಿ ತೋಟಕ್ಕೆ ಕೊಳೆ ರೋಗ ಬಾಧಿಸಿದ್ದು, ಮಳೆ ಮುಂದಿನ ಮರ್ನಾಲ್ಕು ದಿನ ಹೀಗೇ ಇದ್ದರೆ ಇರುವ ಕಾಫಿಯೂ ನೆಲಕ್ಕಚ್ಚಲಿದೆ ಎಂದು ಹರಗ ಗ್ರಾಮದ ಕೃಷಿಕ ಶರಣ್ ಆತಂಕ ವ್ಯಕ್ತಪಡಿಸಿದ್ದಾರೆ.
ತೋಳೂರುಶೆಟ್ಟಳ್ಳಿ ಭಾಗದಲ್ಲಿ ದಾಖಲೆಯ ಮಳೆಯಾಗುತ್ತಿದ್ದು, ವಾತಾವರಣ ಅತೀ ಶೀತದಿಂದ ಕೂಡಿದೆ. ಎಲ್ಲೆಲ್ಲೂ ಜಲದ ಒರತೆ ಕಂಡುಬAದಿದೆ. ಕಾಫಿ ತೋಟದೊಳಗೆ ತೆರಳಲು ಅಸಾಧ್ಯವಾದ ಪರಿಸ್ಥಿತಿ ಇದೆ. ಈ ಬಾರಿ ಬಂಪರ್ ಫಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಮಳೆ ಆಘಾತ ನೀಡಿದೆ. ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹೆಚ್ಚು ಮಳೆ ಬೀಳುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪರಿಹಾರ ಒದಗಿಸಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕೆಂದು ತೋಳೂರುಶೆಟ್ಟಳ್ಳಿಯ ಕೃಷಿಕ ಕೆ.ಕೆ. ಸುಧಾಕರ್ ಅಭಿಪ್ರಾಯಿಸಿದ್ದಾರೆ.ಕುಸಿತಗೊಂಡಿದೆ. ಯೋಗೇಶ್ ಅವರಿಗೆ ಸೇರಿದ ವಾಸದ ಮನೆಯು ಭಾಗಶಃ ಜಖಂಗೊAಡಿದ್ದು, ವಾಸಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ.
ಶನಿವಾರಸಂತೆ ಹೋಬಳಿಯ ಹೊಸಳ್ಳಿ ಗ್ರಾಮದ ಲಕ್ಷö್ಮಮ್ಮ ಅವರ ಮನೆ ಶೇ. ೨೦ರಷ್ಟು ಹಾನಿಗೀಡಾಗಿದೆ. ಜಾನಕಿ ಬಸವರಾಜ್ ಅವರಿಗೆ ಸೇರಿದ ಮನೆಯ ಹಿಂಭಾಗದ ಗೋಡೆ ಜಖಂಗೊAಡಿದೆ. ಘಟನಾ ಸ್ಥಳಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾರೀ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ಜನ ಜೀವನ ಅವ್ಯವಸ್ತಗೊಂಡಿದೆ. ಗ್ರಾಮೀಣ ಭಾಗದ ರಸ್ತೆಗಳೂ ದುರಸ್ತಿ ಗೀಡಾಗುತ್ತಿದ್ದು, ಸಂಚಾರ ದುಸ್ತರವಾಗುತ್ತಿದೆ.
ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ವ್ಯಾಪ್ತಿಯ ಶಾಂತಳ್ಳಿ, ಬೆಟ್ಟದಳ್ಳಿ, ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನದ ೨೪ ಗಂಟೆಯೂ ಮಳೆಯಾಗುತ್ತಿದೆ. ಕಾಫಿ ಹಾಗೂ ಏಲಕ್ಕಿ ತೋಟಕ್ಕೆ ಕೊಳೆ ರೋಗ ಬಾಧಿಸಿದ್ದು, ಮಳೆ ಮುಂದಿನ ಮರ್ನಾಲ್ಕು ದಿನ ಹೀಗೇ ಇದ್ದರೆ ಇರುವ ಕಾಫಿಯೂ ನೆಲಕ್ಕಚ್ಚಲಿದೆ ಎಂದು ಹರಗ ಗ್ರಾಮದ ಕೃಷಿಕ ಶರಣ್ ಆತಂಕ ವ್ಯಕ್ತಪಡಿಸಿದ್ದಾರೆ.
ತೋಳೂರುಶೆಟ್ಟಳ್ಳಿ ಭಾಗದಲ್ಲಿ ದಾಖಲೆಯ ಮಳೆಯಾಗುತ್ತಿದ್ದು, ವಾತಾವರಣ ಅತೀ ಶೀತದಿಂದ ಕೂಡಿದೆ. ಎಲ್ಲೆಲ್ಲೂ ಜಲದ ಒರತೆ ಕಂಡುಬAದಿದೆ. ಕಾಫಿ ತೋಟದೊಳಗೆ ತೆರಳಲು ಅಸಾಧ್ಯವಾದ ಪರಿಸ್ಥಿತಿ ಇದೆ. ಈ ಬಾರಿ ಬಂಪರ್ ಫಸಲಿನ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಮಳೆ ಆಘಾತ ನೀಡಿದೆ. ಕಾಫಿ ಮಂಡಳಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹೆಚ್ಚು ಮಳೆ ಬೀಳುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪರಿಹಾರ ಒದಗಿಸಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕೆಂದು ತೋಳೂರುಶೆಟ್ಟಳ್ಳಿಯ ಕೃಷಿಕ ಕೆ.ಕೆ. ಸುಧಾಕರ್ ಅಭಿಪ್ರಾಯಿಸಿದ್ದಾರೆ.ಮುಳ್ಳೂರು: ಶನಿವಾರಸಂತೆ ವ್ಯಾಪ್ತಿಯಲ್ಲಿ ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದೆ. ಕೆರೆ, ಕೊಲ್ಲಿ ತುಂಬಿ ಹರಿಯುತ್ತಿದೆ. ಕೆಲವು ಕಡೆಗಳಲ್ಲಿ ಕೆರೆಯ ಕೋಡಿ ನೀರು ಗ್ರಾಮಸ್ಥರ ಮನೆಗಳಿಗೆ ತೆರಳುವ ದಾರಿಯನ್ನು ಕೊಲ್ಲಿ ಮಾಡಿಕೊಂಡು ಹರಿಯುತ್ತಿದೆ. ಹೋಬಳಿ ವ್ಯಾಪ್ತಿಯಲ್ಲಿರುವ ನಿಡ್ತ ಕೆರೆ, ಮುಳ್ಳೂರು ಇಂಟಿ ನಾಯಕನ ಕೆರೆ, ಮಾಲಂಬಿ ಗ್ರಾಮದ ದೊಡ್ಡಕೆರೆ, ಬಾಲ್ಗೆರೆ, ಆಲೂರುಸಿದ್ದಾಪುರ ಶಾಲಾ ಕೆರೆ, ದೊಡ್ಡಳ್ಳಿ ಕಟ್ಟೆ ಮುಂತಾದ ಕೆರೆಗಳು ಭರ್ತಿಯಾಗಿದ್ದು ಕೆರೆ ಮೆಗೋಡಿ ಮತ್ತು ಕೆರೆ ತೂಬೂಗಳಲ್ಲಿ ನೀರನ್ನು ಹರಿಯ ಬಿಡಲಾಗಿದೆ.
ಆಲೂರುಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ಮಾಲಂಬಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿರುವ ದೊಡ್ಡಕೆರೆ ಭರ್ತಿಯಾಗಿದ್ದು ಕೆರೆ ನೀರು ಮೆಗೋಡಿಯಲ್ಲಿ ಹರಿದು ಹೆಚ್ಚುವರಿ ನೀರು ಗ್ರಾಮಸ್ಥರ ಮನೆಗಳಿಗೆ ತೆರಳುವ ರಸ್ತೆಯಲ್ಲಿ ಹರಿಯುತ್ತಿದೆ. ಇದು ಈಗ ದೊಡ್ಡಕೊಲ್ಲಿಯಾಗಿ ಮಾರ್ಪಾ ಡಾಗಿದೆ. ಈ ಭಾಗದ ಗ್ರಾಮಸ್ಥರ ಮನೆಗಳಿಗೆ ತೆರಳಲು ಕನಿಷ್ಟ ಕಲ್ಲು ಮಣ್ಣಿನ ರಸ್ತೆಯ ವ್ಯವಸ್ಥೆ ಇಲ್ಲದೆ ಮನೆಗಳಿಗೆ ತೆರಳುವ ಕಾ