ವರದಿ: ಚಂದ್ರಮೋಹನ್
ಕುಶಾಲನಗರ, ಆ. ೯: ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ದೇಶದಾದ್ಯಂತ ನದಿ ಉತ್ಸವ ನಡೆದಿದ್ದು, ಕಾವೇರಿ ನದಿ ಉತ್ಸವ ಕಾರ್ಯಕ್ರಮ ಮಾತ್ರ ಇನ್ನೂ ನಡೆಯದೆ ಇಲಾಖೆಗಳ ಕಡತದಲ್ಲಿಯೇ ಉಳಿಯುವಂತಾಗಿದೆ.
ಕೇAದ್ರ ಸರ್ಕಾರದÀ ಜಲ ಸಂಪನ್ಮೂಲ ಇಲಾಖೆಯಿಂದ ನದಿ ಉತ್ಸವದ ಬಗ್ಗೆ ೨೦೨೧ರ ನವೆಂಬರ್ ತಿಂಗಳಲ್ಲಿ ಸೂಚನೆ ಹೊರಡಿಸಲಾಗಿದ್ದು, ಈ ಬಗ್ಗೆ ಕಾವೇರಿ ನೀರಾವರಿ ನಿಗಮ ೨೦೨೧ ಡಿಸೆಂಬರ್ ತಿಂಗಳಲ್ಲಿ ಎಲ್ಲಾ ಸಿದ್ಧತೆಗಳನ್ನು ನಡೆಸಿತ್ತು. ಆದರೆ, ಕಾವೇರಿ ನದಿ ಹಬ್ಬ ಮಾತ್ರ ಕೊರೊನಾ ಮಾರಿಯೊಳಗೆ ಸಿಲುಕಿ ಮುಂದೂಡುತ್ತಲೇ ಬಂದಿದ್ದು ಇದೀಗ ಅಧಿಕಾರಿಗಳೂ ಕೂಡ ಮರೆತಂತಿದೆ. ಒಂದು ವಾರಗಳ ಕಾಲ ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಆಯ್ದ ಪ್ರದೇಶಗಳಲ್ಲಿ ನದಿ ಹಬ್ಬ ನಡೆಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರು. ಜಿಲ್ಲೆಗಳ ಉಸ್ತುವಾರಿ ಸಚಿವರುಗಳ ನೇತೃತ್ವದಲ್ಲಿ ರಾಜ್ಯ ಏಳು ಕಡೆ ಅದ್ಧೂರಿ ನದಿ ಉತ್ಸವ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಕ್ರಿಯಾಯೋಜನೆ ಪ್ರಕಾರ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆ ಸೇರಿದಂತೆ ಮೈಸೂರು, ಮಂಡ್ಯ, ಹಾಸನ, ತುಮಕೂರು ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯ ನದಿ ಪಾತ್ರಗಳಲ್ಲಿ ೨೦೨೧ರ ಡಿಸೆಂಬರ್ ೧೭ ರಿಂದ ೨೩ ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನದಿ ಉತ್ಸವ ನಡೆಸಲು ಪೂರ್ವಸಿದ್ಧತೆಗಳು ನಡೆದಿದ್ದವು. ತಲಕಾವೇರಿಯಿಂದ ಚಾಲನೆಗೊಂಡು ನದಿ ಪಾತ್ರದ ಭಾಗಮಂಡಲ, ಕುಶಾಲನಗರ, ಶ್ರೀರಂಗಪಟ್ಟಣ, ಟಿ.ನರಸಿಪುರ, ಕಾವೇರಿ ಉಪನದಿಗಳಾದ ಹಾರಂಗಿ,
(ಮೊದಲ ಪುಟದಿಂದ) ಹೇಮಾವತಿ ನದಿ ತಟಗಳಲ್ಲಿ ಮತ್ತು ತುಮಕೂರು ಜಿಲ್ಲೆಯ ಶಿಂಸಾ ನದಿಗಳ ಹಾಗೂ ಆರ್ಕವತಿ ಹಾಗೂ ಕಾವೇರಿ ನದಿ ಸಂಗಮಗಳಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಲವು ಕಾರ್ಯಕ್ರಮಗಳನ್ನು ಸಿದ್ದಪಡಿಸಲಾಗಿತ್ತು. ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಚಾಲನೆಗೊಂಡು ಭಾಗಮಂಡಲ ಮತ್ತು ಕುಶಾಲನಗರ ಕೇಂದ್ರಗಳಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ ಸಾರ್ವಜನಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು.
ನದಿ ಸ್ವಚ್ಛತೆ, ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ, ಯೋಗ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡAತೆ ನದಿ ತಟಗಳನ್ನು ಸಿಂಗರಿಸಿ, ನದಿಗೆ ಮಹಾ ಆರತಿ ಕಾರ್ಯಕ್ರಮಗಳನ್ನು ನಡೆಸುವಂತೆ ಪೂರ್ವ ಸಿದ್ಧತೆಗಳು ನಡೆದಿದ್ದವು.
ಜಲ ಸಂಪನ್ಮೂಲ ಇಲಾಖೆಗಳನ್ನು ಒಳಗೊಂಡAತೆ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಕೃಷಿ ತೋಟಗಾರಿಕೆ ಇಲಾಖೆ, ಶಿಕ್ಷಣ, ಮುಜುರಾಯಿ, ಪುರಾತತ್ವ ಇಲಾಖೆ ಎಲ್ಲರ ಸಹಯೋಗದೊಂದಿಗೆ ಸಂಘ ಸಂಸ್ಥೆ ಹಾಗೂ ಶಾಲಾ -ಕಾಲೇಜು ವಿದ್ಯಾರ್ಥಿಗಳನ್ನು ಬಳಸಿ ನದಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ಸಿದ್ಧತೆಗಳು ನಡೆದಿದ್ದರೂ ಇದುವರೆಗೆ ಕಾವೇರಿ ನದಿ ಉತ್ಸವ ಮಾತ್ರ ಕಡತಗಳಲ್ಲಿಯೇ ಬಾಕಿ ಉಳಿದಿರುವುದು ವಿಷಾದನೀಯ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿ ಎನ್.ಬಿ. ಚೆನ್ನಕೇಶವ, ಕೊರೊನಾ ಸೇರಿದಂತೆ ಕೆಲವು ಕಾರಣಗಳಿಂದ ನದಿ ಉತ್ಸವ ಮುಂದೂಡಲ್ಪಟ್ಟಿದೆ ಎಂದು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಾವೇರಿ ನಿಗಮದ ಹಿರಿಯ ಅಧಿಕಾರಿಗಳು ನದಿ ಉತ್ಸವ ಸಂಬAಧ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಸಂಘ ಸಂಸ್ಥೆಗಳ ಸಭೆಯನ್ನು ಏರ್ಪಡಿಸಿ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆ ಒಂದು ವಾರಗಳ ಕಾಲ ಅದ್ದೂರಿ ನದಿ ಉತ್ಸವ ಆಯೋಜನೆ ಮಾಡುವುದಾಗಿ ಪ್ರಕಟಣೆ ನೀಡಿತ್ತು. ಆ ಮೂಲಕ ಜೀವನದಿ ಕಾವೇರಿಯ ಉತ್ಸವ ನಡೆಯಬೇಕಾಗಿದ್ದರೂ ಸಂಬAಧಿಸಿದ ಅಧಿಕಾರಿಗಳು ಈ ಬಗ್ಗೆ ಮೌನ ತಾಳಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ದೇಶದೆಲ್ಲೆಡೆ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯೊಂದಿಗೆ ಅದ್ದೂರಿ ಸ್ವಾತಂತ್ರö್ಯ ದಿನಾಚರಣೆಗೆ ಕ್ಷಣಗಣನೆ ನಡೆಯುತ್ತಿದ್ದರೆ, ಈ ನಡುವೆ ನಡೆಯಬೇಕಾಗಿದ್ದ ಮಹತ್ವದ ನದಿ ಉತ್ಸವ ಮಾತ್ರ ನೆನೆಗುದಿಗೆ ಬಿದ್ದಿದೆ.