ಮಡಿಕೇರಿ, ಆ. ೯: ೨೦೨೨-೨೩ ನೇ ಸಾಲಿನ ಮಂಗಳೂರು ವಲಯ ಅಂಡರ್-೧೯ ಪುರುಷರ ಕ್ರಿಕೆಟ್ ತಂಡ ಸೇರ್ಪಡೆಗೆ ಆಯ್ಕೆ ಪ್ರಕ್ರಿಯೆ ತಾ.೧೯, ೨೦ ಹಾಗೂ ೨೧ ರಂದು ಮಂಗಳೂರಿನಲ್ಲಿ ನಡೆಯಲಿದ್ದು ಆಸಕ್ತ ಕ್ರೀಡಾಪಟುಗಳು ಭಾಗವಹಿಸುವಂತೆ ಕೆ.ಎಸ್.ಸಿ.ಎ ಮಂಗಳೂರು ವಲಯದ ಸಂಯೋಜಕರಾದ ರತನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೨೦೦೩ ಸೆಪ್ಟೆಂಬರ್ ೧ ಹಾಗೂ ತದನಂತರ ಜನಿಸಿದವರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಂಡರ್-೧೬ ಆಯ್ಕೆ ಪ್ರಕಿಯೆಗೆ ಅರ್ಹರಾದವರು ಭಾಗವಹಿಸಲು ಅವಕಾಶವಿರುವುದಿಲ್ಲ. ಆಸಕ್ತ ಕ್ರೀಡಾಪಟುಗಳು ಞsಛಿಚಿmಟoಡಿezoಟಿe @gmಚಿiಟ.ಛಿomಗೆ ಮೇಲ್ ಮಾಡುವ ಮೂಲಕ ಹುಟ್ಟಿದ ದಿನಾಂಕ, ವ್ಯಾಸಂಗ ಮಾಡುತ್ತಿರುವ ವಿದ್ಯಾಸಂಸ್ಥೆಯ ವಿವರ, ಬ್ಯಾಟಿಂಗ್ ಆರ್ಡರ್, ಶೈಲಿ, ಬೌಲಿಂಗ್ ವಿವರ, ವಿಕೆಟ್ ಕೀಪಿಂಗ್ ವಿವರ, ಈ ಹಿಂದೆ ಕೆ.ಎಸ್.ಸಿ.ಎ ಆಯೋಜಿತ ಟೂರ್ನಿ ಗಳಲ್ಲಿ ಆಡಿದ್ದರೆ, ಅದರ ವಿವರ ಸೇರಿದಂತೆ ಮೊಬೈಲ್ ಸಂಖ್ಯೆ ಯೊಂದಿಗೆ ನೋಂದಣಿ ಮಾಡಬಹುದು. ಆಯ್ಕೆ ಪ್ರಕ್ರಿಯೆ ದಿನದಂದು ಆಟಗಾರರು ಜನನ ಪ್ರಮಾಣ ಪತ್ರದೊಂದಿಗೆ ‘ವೈಟ್ಸ್’ನಲ್ಲಿ ಹಾಜರಿರಬೇಕು.

ಮಂಗಳೂರಿನ ಲಾಲ್‌ಬಾಗಿನಲ್ಲಿ ರುವ ಸಾಯ್‌ಬೀನ್ ಕಾಂಪ್ಲೆಕ್ಸ್ನ Zuese ಕ್ರಿಕೆಟ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೆಲ್ರಾಯ್ ಡಿಸೋಜಾ - ಮೊ:೯೧೬೪೭೫೦೮೬೩ ಅನ್ನು ಸಂಪರ್ಕಿಸಬಹುದು.