ಸೋಮವಾರಪೇಟೆ, ಆ. ೮: ನಗರದ ಶಾಲೆಗಳಲ್ಲಿ ಕಲಿತ “ಕ್ಲಾಸ್ ಆಫ್ ೯೯ ಬ್ಯಾಚ್” ಸಂಘದ ವತಿಯಿಂದ ಶಾಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕವನ್ನು ಕಟ್ಟಲಾಯಿತು.
ಪಟ್ಟಣದ ವಿಶ್ವಮಾನವ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಗೆ ೧೭,೬೦೦ರೂ. ವಾರ್ಷಿಕ ಶುಲ್ಕ, ಮಾದಾಪುರ ಡಿ ಚನ್ನಮ್ಮ ಪ್ರೌಢಶಾಲೆಯ ೫ ಬಡ ವಿದ್ಯಾರ್ಥಿಗಳಿಗೆ ೧೫೦೦೦ ರೂ. ಹಾಗೂ ಯಡವಾರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳು ಹಾಗು ಕಪಾಟು ನೀಡಲಾಯಿತು. ಸಂಘದ ಪ್ರಮುಖರಾದ ಡಾ.ರಾಕೇಶ್ ಪಟೇಲ್, ಪ್ರಿಯದರ್ಶನ್, ಸಂದೀಪ್, ಪ್ರಶಾಂತ್, ಶಮಿಲ್, ಆಶಿತ್, ಮಧುಮತಿ, ಸರಿತಾ, ಚಂದ್ರಿಕಾ, ರೂಪ ಶಾಲೆಗಳ ಮುಖ್ಯ ಶಿಕ್ಷಕರಾದ ಮಿಲ್ಡ್ರೆಡ್ ಗೊನ್ಸಾಲ್ವೆಸ್, ರೇವತಿ ಮತ್ತಿತರರು ಇದ್ದರು.