ಗೋಣಿಕೊಪ್ಪ ವರದಿ, ಜು. ೯: ಮಂಗಳೂರು ವಿಶ್ವವಿದ್ಯಾನಿಲಯ, ಗೋಣಿಕೊಪ್ಪ ಕಾವೇರಿ ಕಾಲೇಜು ಐ.ಕ್ಯೂ.ಎ.ಸಿ ಘಟಕ ಮತ್ತು ಎನ್.ಎಸ್.ಎಸ್ ಘಟಕ ಸಹಯೋಗದಲ್ಲಿ ಸ್ವಾತಂತ್ರö್ಯದ ಅಮೃತ ಮಹೋತ್ಸವ ಪ್ರಯುಕ್ತ ನಡೆದ ಜಿಲ್ಲಾ ಮಟ್ಟದ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಂದ ದೇಶಪ್ರೇಮ ಮೂಡಿ ಬಂತು. ದೇಶದ ಭದ್ರತೆ, ಸ್ವಾತಂತ್ರö್ಯ ದಿನದ ಹಿನ್ನೆಲೆ, ಹೋರಾಡಿದವರನ್ನು ಸ್ಮರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಬದ್ರೀಯಾ ರೇಹನಾ ಪ್ರಥಮ, ಮಡಿಕೇರಿ ಎಫ್.ಎಂ.ಸಿ. ಕಾಲೇಜಿನ ಕೆ.ಎಸ್. ಸವಿತಾ ದ್ವಿತೀಯ, ಸೋಮವಾರಪೇಟೆ ಬಿ.ಟಿ.ಟಿ.ಸಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಸಿ ತೃತೀಯ ಸ್ಥಾನ ಪಡೆದರು. ಚರ್ಚಾ ಸ್ಪರ್ಧೆಯಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜಿನ ಸಿ.ಪಿ. ರಮ್ಷಾನ ಪ್ರಥಮ, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆರ್. ಲಿಂಗರಾಜು ದ್ವಿತೀಯ, ಕುಶಾಲನಗರ ಎಂ.ಜಿ.ಎA ಕಾಲೇಜಿನ ಎಂ.ಟಿ. ನೇಹಾ ತೃತೀಯ ಸ್ಥಾನ ಪಡೆದರು. ಕಾವೇರಿ ಏಜುಕೇಷನ್ ಸೊಸೈಟಿ ಅಧ್ಯಕ್ಷ ಸಿ.ಕೆ. ಉತ್ತಪ್ಪ, ನಿರ್ದೇಶಕ ಪ್ರೊ. ಇಟ್ಟಿರ ಬಿದ್ದಪ್ಪ, ಪ್ರಾಂಶುಪಾಲ ಮಾಳೇಟಿರ ಬಿ. ಕಾವೇರಪ್ಪ, ಐಕ್ಯೂಎಸಿ ವಿಭಾಗದ ಸಂಚಾಲಕಿ ಎಂ.ಎಸ್ ಭಾರತಿ, ಉಪ ಪ್ರಾಂಶುಪಾಲ ಎ.ಎಸ್. ಪೂವಮ್ಮ, ಅಜಾದಿ ಕಾ ಅಮೃತ ಮಹೋತ್ಸವದ ಕೊಡಗು ಘಟಕದ ನೊಡಲ್ ಅಧಿಕಾರಿ ಎಂ.ಎನ್. ವನಿತ್‌ಕುಮಾರ್, ಬೋಧಕರಾದ ಚಿತ್ರಾವತಿ, ರಮ್ಯಶ್ರೀ, ಪೂವಮ್ಮ, ಬಿ.ಪಿ ಈಶ್ವರಿ, ಎನ್.ಎಸ್.ಎಸ್. ಅಧಿಕಾರಿ ಎನ್.ಪಿ. ರೀತಾ ಇದ್ದರು.