ಸೋಮವಾರಪೇಟೆ, ಆ. ೯: ಪಟ್ಟಣ ಪ್ರಮುಖ ಕೆರೆಯಾಗಿರುವ ಆನೆಕೆರೆಯಲ್ಲಿ ಅಶುಚಿತ್ವ ತಾಂಡವವಾಡುತ್ತಿರುವ ಬಗ್ಗೆ ‘ಶಕ್ತಿ’ಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಪಟ್ಟಣ ಪಂಚಾಯಿತಿ ಪ್ರಮುಖರು ಭೇಟಿ ನೀಡಿ ಕೆರೆಯ ಶುಚಿತ್ವಕ್ಕೆ ಕ್ರಮ ವಹಿಸಿದ್ದಾರೆ. ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಸೇರಿದಂತೆ ಸದಸ್ಯರುಗಳು ಭರ್ತಿಯಾಗಿರುವ ಆನೆಕೆರೆಗೆ ಭೇಟಿ ನೀಡಿ, ಪೌರ ಕಾರ್ಮಿಕರ ಮೂಲಕ ಕೆರೆಯ ಆವರಣದ ಶುಚಿತ್ವಕ್ಕೆ ಕ್ರಮ ಕೈಗೊಂಡಿದ್ದಾರೆ. ತಾ. ೧೨ರಂದು ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ಆನೆಕೆರೆಗೆ ಪಟ್ಟಣ ಪಂಚಾಯಿತಿ ವತಿಯಿಂದ ಬಾಗಿನ ಅರ್ಪಿಸಲಾಗುವುದು ಎಂದು ಸದಸ್ಯ ಬಿ.ಆರ್. ಮಹೇಶ್ ತಿಳಿಸಿದ್ದಾರೆ.