ಚೆಯ್ಯಂಡಾಣೆ, ಆ ೮. ಅನಿವಾಸಿ ಕೊಡಗಿನ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಒಕ್ಕೂಟವಾದ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಜಿಸಿಸಿ ಸಮಿತಿಯ ಅಧ್ಯಕ್ಷರಾಗಿ ಅಬೂಬಕ್ಕರ್ ಹಾಜಿ ಯುಎಇ, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಅಯ್ಯಂಗೇರಿ ಕುವೈತ್, ಕೋಶಾಧಿಕಾರಿಯಾಗಿ ಹಂಝ ಮುಸ್ಲಿಯಾರ್ ಸೌದಿ ಅರೇಬಿಯಾ, ಕಾರ್ಯದರ್ಶಿಯಾಗಿ ನಝೀರ್ ಮೂರ್ನಾಡು ಕತ್ತರ್, ಸಂಚಾಲಕರಾಗಿ ಸಿದ್ದೀಕ್ ಝುಹ್ರಿ ಸೌದಿ ಅರೇಬಿಯ ಸಂಘಟನಾ ವಿಭಾಗದ ಅಧ್ಯಕ್ಷರಾಗಿ ಆಬಿದ್ ಕಂಡಕ್ಕರೆ ಸೌದಿ ಅರೇಬಿಯಾ, ಕಾರ್ಯದರ್ಶಿಯಾಗಿ ರಿಯಾಝ್ ಕೊಂಡAಗೇರಿ ಯುಎಇ, ಆಡಳಿತ ವಿಭಾಗ ಅಧ್ಯಕ್ಷರಾಗಿ ಸಯ್ಯದ್ ಆಬಿದ್ ತಂಙಳ್ ಒಮಾನ್, ಕಾರ್ಯದರ್ಶಿಯಾಗಿ ಹನೀಫ್ ಚೆರಿಯಪರಂಬು, ಕುವೈತ್, ಶಿಕ್ಷಣ ವಿಭಾಗ ಅಧ್ಯಕ್ಷರಾಗಿ ಬಷೀರ್ ಸಖಾಫಿ ಕುವೈತ್, ಕಾರ್ಯದರ್ಶಿಯಾಗಿ, ಶಂಸುದ್ದೀನ್ ತಕ್ಕಪಳ್ಳಿ ಸೌದಿ ಅರೇಬಿಯಾ, ಸಾಂತ್ವನ ವಿಭಾಗ ಅಧ್ಯಕ್ಷರಾಗಿ ಅರಾಫತ್ ನಾಪೋಕ್ಲು ಯುಎಇ, ಕಾರ್ಯದರ್ಶಿಯಾಗಿ ರಫೀಕ್ ನೆಲ್ಲಿಹುದಿಕೇರಿ ಸೌದಿ ಅರೇಬಿಯಾ, ಪ್ರಕಾಶನ ವಿಭಾಗ ಅಧ್ಯಕ್ಷರಾಗಿ ಅಬ್ಬಾಸ್ ಸಖಾಫಿ ಕತ್ತರ್, ಕಾರ್ಯದರ್ಶಿಯಾಗಿ ಮುಜೀಬ್ ಕಡಂಗ ಯುಎಇ, ಸಲಹಾ ಸಮಿತಿ ಅಧ್ಯಕ್ಷರಾಗಿ ಅಲಿ ಮುಸ್ಲಿಯಾರ್ ಬಹರೈನ್, ಸದಸ್ಯರುಗಳಾಗಿ ಹಾಫಿಝ್ ಉಮರ್ ಸಖಾಫಿ ಕತ್ತರ್, ಯುಸುಫ್ ಸಖಾಫಿ ಕತ್ತರ್ ಝೈನುಲ್ ಆಬಿದೀನ್ ಝುಹ್ರಿ, ಫಾರೂಕ್ ಮುಸ್ಲಿಯಾರ್ ಸೌದಿ ಅರೇಬಿಯಾ,ಮಾಹಿನ್ ಸಖಾಫಿ ಕುವೈತ್, ಹುಸೈನ್ ಮುಸ್ಲಿಯಾರ್ ಕುವೈತ್, ಜಲೀಲ್ ನಿಝಾಮಿ ಯುಎಇ, ಉಸ್ಮಾನ್ ಹಾಜಿ ನಾಪೋಕ್ಲು ಯುಎಇ, ಮಜೀದ್ ಮಾದಾಪುರ ಬಹರೈನ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉದ್ಘಾಟನೆಯನ್ನು ಕೂರ್ಗ್ ಜಂಇಯತ್ತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ವೀರಾಜಪೇಟೆ ನಿರ್ವಹಿಸಿದರು. ಪ್ರಾರ್ಥನೆಗೆ ಕೋಶಾಧಿಕಾರಿ ಅಲಿ ಮುಸ್ಲಿಯಾರ್ ಮುಂದಾಳತ್ವ ವಹಿಸಿದ್ದರು. ಇಸ್ಮಾಯಿಲ್ ಸಖಾಫಿ ಕೊಂಡAಗೇರಿ,ಬಶೀರ್ ಸಅದಿ ಅಯ್ಯಂಗೇರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನೂತನ ಸಮಿತಿಯನ್ನು ಕೊಡಗು ಜಿಲ್ಲೆಯ ಸಹಾಯಕ ಖಾಝಿ ಬಹು- ಶಾದುಲಿ ಫೈಝಿ ಉಸ್ತಾದ್ ಪ್ರಕಟಿಸಿದರು.