ಗುಡ್ಡೆಹೊಸೂರು, ಆ. ೮: ಇಲ್ಲಿಗೆ ಸಮೀಪದ ಹೇರೂರು ರಸ್ತೆಯ ಅತ್ತೂರು ಮೀಸಲು ಅರಣ್ಯಪ್ರದೇಶದಲ್ಲಿ ಬಸವನಹಳ್ಳಿಯ ಲ್ಯಾಂಪ್ಸ್ ಸಹಕಾರ ಸಂಘ ಮತ್ತು ಅರಣ್ಯ ಇಲಾಖೆ ವತಿಯಿಂದ ಗಿಡಗಳನ್ನು ನೆಡಲಾಯಿತು. ವನದೇವಿಗೆ ಪೂಜೆ ನೆರವೇರಿಸಿ ವಿವಿಧ ಜಾತಿಯ ಕಾಡುಮರದ ಗಿಡಗಳನ್ನು ನೆಡಲಾಯಿತು. ವಲಯ ಅರಣ್ಯಧಿಕಾರಿಗಳಾದ ಶಿವರಾಮ್ ಕೆ.ವಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು. ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ, ಉಪಾಧ್ಯಕ್ಷ ಮನು ಮತ್ತು ಉಪವಲಯ ಅರಣ್ಯಧಿಕಾರಿ ಅನೀಲ್ ಡಿಸೋಜಾ, ಸಿಬ್ಬಂದಿ ಮಂಜೆಗೌಡ, ನಿರ್ದೇಶಕರಾದ ಬಿ.ಡಿ. ಮಹೇಶ್, ಉದಯಕುಮಾರ್, ಕಮಲ ಬಿ.ಆರ್. ಸುರೇಶ್, ಅಣ್ಣಯ್ಯ, ಯಶೋಧ, ಕಾವೇರಿ ಮತ್ತು ಸಂಘದ ಮುಖ್ಯಕಾರ್ಯನಿರ್ವಣಾಧಿಕಾರಿ ಅನಿಕುಮಾರ್ ಮತ್ತು ಸಂಘದ ಇತರ ಸಿಬ್ಬಂದಿಗಳು ಹಾಜರಿದ್ದರು.