ಬೆಂಗಳೂರು, ಆ. ೮: ತಾಯಿಯೊಬ್ಬಳು ಮಗುವಿಗೆ ನೇಣು ಹಾಕಿ ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತರನ್ನು ಕೊಡಗಿನ ವೀರಾಜಪೇಟೆ ಮೂಲದ ದಂತ ವೈದ್ಯೆ ಸೈಮಾ ನಾರಾಯಣ್ (೩೮) ಮತ್ತು ಆಕೆಯ ಮಗಳು ಆರಾಧನಾ (೧೦) ಎಂದು ಗುರುತಿಸಲಾಗಿದೆ.

ವೈದ್ಯೆ ಸೈಮಾ ಮುತ್ತಪ್ಪ ಕೋಲಾರ ಮೂಲದ ದಂತ ವೈದ್ಯ ನಾರಾಯಣ್ ಅವರನ್ನು ೧೨ ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಇಬ್ಬರೂ ಜತೆಯಲ್ಲಿಯೇ ದಂತ ಚಿಕಿತ್ಸಾಲಯವನ್ನು ನಡೆಸುತಿದ್ದರು. ದಂಪತಿಗಳ ನಡುವೆ ತಲೆದೋರಿರುವ ಕೌಟುಂಬಿಕ ಕಲಹವೇ ಘಟನೆಗೆ ಕಾರಣ ಎನ್ನಲಾಗಿದ್ದು ಪೊಲೀಸರು ಪತಿ ನಾರಾಯಣ್ ಅವರನ್ನು ತನಿಖೆಗೆ ಒಳಪಡಿಸಿದ್ದಾರೆ.

ವೈದ್ಯೆಯು ತನ್ನ ೧೦ ವರ್ಷದ ಮಗಳು ಆರಾಧನಾಗೆ ಮನೆಯ ಬೆಡ್ ರೂಮಿನಲ್ಲಿ ನೇಣು ಹಾಕಿ ಹತ್ಯೆ ಮಾಡಿದ ಬಳಿಕ

(ಮೊದಲ ಪುಟದಿಂದ) ಮತ್ತೊಂದು ಬೆಡ್ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಈ ಘಟನೆ ಎರಡು ದಿನಗಳ ಹಿಂದೆ ನಡೆದಿದ್ದು, ಭಾನುವಾರ ಬೆಳಕಿಗೆ ಬಂದಿದೆ.

ಘಟನೆ ನಡೆದಾಗ ಪತಿ ನಾರಾಯಣ್ ಕೋಲಾರಕ್ಕೆ ತೆರಳಿದ್ದು, ಮನೆಗೆ ಬಂದು ನೋಡಿದಾಗ ಶವಗಳು ಕೊಳೆಯುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ವಿಷಯ ತಿಳಿದ ತಕ್ಷಣ ಆಸ್ಟೆçÃಲಿಯಾದಲ್ಲಿದ್ದ ಸೈಮಾ ಸಹೋದರ ಬೆಂಗಳೂರಿಗೆ ಬಂದಿದ್ದು, ಸೋಮವಾರ ಪೊಲೀಸರಿಗೆ ದೂರು ನೀಡಿದ್ದಾರೆ.

ಇವರ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂತ ವೈದ್ಯೆ ಕೈಗೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಜಯನಗರ ವಿಭಾಗದ ಸಹಾಯಕ ಪೋಲೀಸ್ ಆಯುಕ್ತ ಶ್ರೀನಿವಾಸ್ ಕಾರಂತ್ ಅವರು, ಮೃತರ ಸಹೋದರ ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದು, ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಶವ ಪರೀಕ್ಷೆ ವರದಿ ಬಂದ ನಂತರವಷ್ಟೆ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದರು. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

-ಕೋವರ್ ಕೊಲ್ಲಿ ಇಂದ್ರೇಶ್