ಮಡಿಕೇರಿ, ಆ. ೮: ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಸಂಭವಿಸುವ ಅನಾಹುತಗಳನ್ನು ಎದುರಿಸಲು ಸರಕಾರ ಜಿಲ್ಲಾಡಳಿತಕ್ಕೆ ಅಗತ್ಯ ಅನುದಾನ ನೀಡಿದ್ದು, ಹೆಚ್ಚುವರಿ ಹಣ ಖಾತೆಯಲ್ಲಿದೆ. ಜಿಲ್ಲೆಯ ಹಿತ ಕಾಯಲು ಸರಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರೀ ಮಳೆಯಿಂದ ಸಂಭವಿಸಿದ ಜಲಸ್ಫೋಟಕ್ಕೆ ಕಾರಣ

ತಿಳಿಯಲು ತಜ್ಞರ ನೆರವು ಪಡೆಯಲಾಗುವುದು. ಈ ನಿಟ್ಟಿನಲ್ಲಿ ಯಾವ ವಿಶ್ವವಿದ್ಯಾನಿಲಯದ ತಜ್ಞರನ್ನು ಕರೆಸುವುದು ಎಂಬುದು ಚರ್ಚೆ ಯಾಗಿದೆ. ಮಳೆಗಾಲದ ನಂತರವಷ್ಟೇ ಇದಕ್ಕೆ ಕಾರಣ ತಿಳಿಯಲು ಸಾಧ್ಯ. ಈ ಹಿನ್ನೆಲೆ ಮಳೆಗಾಲದ ನಂತರ ತಜ್ಞರ ತಂಡ ಜಿಲ್ಲೆಗೆ ಆಗಮಿಸಲಿದೆ. ಜೊತೆಗೆ ಭೂಕಂಪನ ಹಾಗೂ ಭೂಕುಸಿತಕ್ಕೆ ಸಂಬAಧವಿದೆಯೇ ಎಂಬ ದೃಷ್ಟಿಕೋನದಲ್ಲಿ ಅಧ್ಯಯನ ನಡೆಯಲಿದೆ ಎಂದು ತಿಳಿಸಿದರು.

ಕೊಡಗು ಜಿಲ್ಲೆಯನ್ನು ರಾಜ್ಯ ಸರಕಾರ ಕಡೆಗಣಿಸಿಲ್ಲ. ಎಲ್ಲಾ ರೀತಿಯ ಬೇಡಿಕೆಗಳಿಗೆ ಸರಕಾರ ಸ್ಪಂದಿಸಿದೆ. ಇಲ್ಲಿನ ಅವಶ್ಯಕತೆಯನ್ನು ಸರಕಾರ ಪೂರ್ಣಗೊಳಿಸುತ್ತದೆ ಎಂದ ಅವರು, ಜಿಲ್ಲಾಡಳಿತದ ಖಾತೆಯಲ್ಲಿ ಹಣ ಖರ್ಚಾದರೆ ತ್ವರಿತವಾಗಿ ಸರಕಾರದ ಕಾರ್ಯದರ್ಶಿಗಳ ಮೂಲಕ ತಡಮಾಡದೆ ಹಣ ಜಮೆ ಮಾಡಿಸಲಾಗುವುದು. ಸಂತ್ರಸ್ತರಿಗೆ ತಲುಪಬೇಕಾದ ಹಣವನ್ನು ಶೀಘ್ರವಾಗಿ ನೀಡಲಾಗುತ್ತಿದೆ. ಜಿಲ್ಲಾಡಳಿತ ಬಳಿ ರೂ. ೩೫ ಕೋಟಿ ಹಣ ಇದೆ. ಮನೆಮನೆಗೆ ತೆರಳಿ ಚೆಕ್ ನೀಡುವಷ್ಟು ಹಣ ಖಾತೆಯಲ್ಲಿದೆ. ಸಮರ್ಥವಾಗಿ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಸರಕಾರ ಮಾನವೀಯತೆಯಲ್ಲಿ ಕೆಲಸ ಮಾಡುತ್ತಿದೆ. ಸರಕಾರದ ಬಳಿ ಹಣದ ಕೊರತೆ ಇಲ್ಲ ಎಂದರು.

ಈ ಸಂದರ್ಭ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ತಹಶೀಲ್ದಾರ್ ಮಹೇಶ್ ಹಾಜರಿದ್ದರು.

ಮನೆ ಹಾನಿ ಪ್ರದೇಶಗಳಿಗೆ

ಸಚಿವರ ಭೇಟಿ

ಸೋಮವಾರಪೇಟೆ: ಮಳೆ ಯಿಂದಾಗಿ ಮನೆಗಳು ಹಾನಿ ಗೀಡಾಗಿರುವ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಸೂರು, ನೀರುಗುಂದ, ಕೆಲಕೊಡ್ಲಿ ವ್ಯಾಪ್ತಿಯಲ್ಲಿ ಮಳೆಯಿಂದಾಗಿ

(ಮೊದಲ ಪುಟದಿಂದ) ಹಾನಿಗೀಡಾಗಿರುವ ಪ್ರದೇಶಕ್ಕೆ ಭೇಟಿ ನೀಡಿದ ಸಚಿವರು, ಕಂದಾಯ ಇಲಾಖೆ ವತಿಯಿಂದ ನೀಡಲಾಗುವ ಚೆಕ್‌ಗಳನ್ನು ಸಂತ್ರಸ್ತರಿಗೆ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಜಾಗಕ್ಕೆ ಸಂಬAಧಿಸಿದAತೆ ಅಗತ್ಯ ದಾಖಲೆಗಳನ್ನು ಹೊಂದಿಕೊಳ್ಳಬೇಕು. ಸರ್ಕಾರದಿಂದ ಸಿಗುವ ಪರಿಹಾರ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪರಿಹಾರ ಹಣದಲ್ಲಿ ವಾಸಕ್ಕೆ ಯೋಗ್ಯವಾದ ರೀತಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಬೇಕು ಎಂದರು.

ಕAದಾಯ ಇಲಾಖೆಯಿಂದ ನೀಡುವ ಪರಿಹಾರ ಹಣ ಸದ್ಬಳಕೆಯಾಗಿದೆಯೇ ಎಂಬ ಬಗ್ಗೆ ಇಲಾಖಾಧಿಕಾರಿಗಳು ಗಮನ ಹರಿಸಬೇಕು. ಮಳೆಹಾನಿಗೆ ಸಂಬAಧಿಸಿದAತೆ ಸರ್ಕಾರ ತ್ವರಿತ ಸ್ಪಂದನ ನೀಡುತ್ತಿದೆ. ತಕ್ಷಣದ ಪರಿಹಾರಕ್ಕಾಗಿ ಅಗತ್ಯ ಅನುದಾನ ಮೀಸಲಿದೆ ಎಂದು ಸಚಿವ ನಾಗೇಶ್ ಹೇಳಿದರು.

ಈ ಸಂದರ್ಭ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು, ಲೋಕೋಪಯೋಗಿ ಇಲಾಖಾ ಅಭಿಯಂತರ ವೆಂಕಟೇಶ್ ನಾಯಕ್, ಪ್ರಮುಖರಾದ ಮನುಕುಮಾರ್ ರೈ, ಮೋಕ್ಷಿಕ್ ರಾಜ್, ನಿತಿನ್, ಭಗವಾನ್, ಕ್ಯಾತೆ ಶಿವಕುಮಾರ್, ಇಂದ್ರೇಶ್, ಕೆಂಚೇಶ್ವರ್ ಸೇರಿದಂತೆ ಇತರರು ಇದ್ದರು. ಬೆಸೂರು ಗ್ರಾಮದ ರೇಣುಕಪ್ಪ, ಕೆಲಕೊಡ್ಲಿಯ ಅಕ್ಕಮ್ಮ ಅವರುಗಳಿಗೆ ಪರಿಹಾರ ಧನದ ಚೆಕ್‌ಗಳನ್ನು ವಿತರಿಸಲಾಯಿತು.