ಮಡಿಕೇರಿ, ಆ.೮: ಭಾರತೀಯ ಸೇನೆ/ ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೩ಎ ಹಾಗೂ ೩ಬಿ ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ೨೦೨೨-೨೩ನೇ ಸಾಲಿನಲ್ಲಿ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತ ಊಟ ಮತ್ತು ವಸತಿಯೊಂದಿಗೆ ನೀಡುತ್ತಿದ್ದು, ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ (ಬಾಲಕರಿಗೆ ಮಾತ್ರ) ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ: ಪ್ರವರ್ಗ-೧ಕ್ಕೆ ರೂ.೨.೫೦ ಲಕ್ಷಗಳು ಹಾಗೂ ಪ್ರವರ್ಗ-೨(ಎ), ೩(ಎ) ಮತ್ತು ೩(ಬಿ)ಗಳಿಗೆ ರೂ.೧ ಲಕ್ಷಗಳು. ಅಭ್ಯರ್ಥಿಯು ೧೦ನೇ ತರಗತಿಯನ್ನು ಉತ್ತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಟ ೩೩ ಅಂಕ ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಮ್ ಇದ್ದಲ್ಲಿ ಸಮಾನವಾದ ಗ್ರೇಡ್ ಪಡೆದಿರಬೇಕು. ಅಕ್ಟೋಬರ್ ೧, ೨೦೨೨ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯ ವಯಸ್ಸನ್ನು ಪರಿಗಣಿಸಲಾಗುವುದು. (ಅಭ್ಯರ್ಥಿಯು ೦೧ ಅಕ್ಟೋಬರ್ ೨೦೦೦ ದಿಂದ ೧ ಏಪ್ರಿಲ್ ೨೦೦೫ (೧೭-೫-೨೨) ರ ದಿನಾಂಕಗಳ ನಡುವೆ ಜನಿಸಿರಬೇಕು).

ತರಬೇತಿಯನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಾತ್ರ ನೀಡಲಾಗುವುದು. ಅಭ್ಯರ್ಥಿಗಳು ಈ ಮೂರು ಜಿಲ್ಲೆಗಳಲ್ಲಿ ತರಬೇತಿಗೆ ಆಯ್ಕೆ ಮಾಡಿಕೊಳ್ಳುವ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅವರ ಕಚೇರಿಗೆ ಅರ್ಜಿಯನ್ನು ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಸಲ್ಲಿಸಬಹುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಇಲಾಖಾ ವೆಬ್‌ಸೈಟ್ hಣಣಠಿs://bಛಿತಿಜ.ಞಚಿಡಿಟಿಚಿಣಚಿಞಚಿ.gov.iಟಿ ನಿಂದ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್, ೧೬ ಕೊನೆಯ ದಿನವಾಗಿದೆ.

ಸಹಾಯವಾಣಿ: (ಸಮಯ ಬೆಳಗ್ಗೆ ೧೦ ರಿಂದ ಸಂಜೆ ೫.೩೦ ಗಂಟೆ ವರೆಗೆ, (ಸಾರ್ವಜನಿಕ ರಜಾ ದಿನ ಹೊರತುಪಡಿಸಿ) ದಕ್ಷಿಣ ಕನ್ನಡ ಜಿಲ್ಲೆ: ದೂ.ಸಂ.೦೮೨೪-೨೨೨೫೦೭೮, ಉಡುಪಿ ಜಿಲ್ಲೆ: ದೂ.ಸಂ.೦೮೨೦-೨೫೭೪೮೮೧, ಉತ್ತರ ಕನ್ನಡ: ಜಿಲ್ಲೆ ದೂ.ಸಂ.:೦೮೩೮೨-೨೨೬೫೮೯, ಕೇಂದ್ರ ಕಚೇರಿ ೮೦೫೦೭೭೦೦೦೪ ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎನ್.ಮಂಜುನಾಥ್ ಅವರು ತಿಳಿಸಿದ್ದಾರೆ.