ಮಡಿಕೇರಿ, ಆ. ೮: ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ನೋಂದಣಿ ಇನ್ನು ಆ್ಯಪ್ ಮುಖಾಂತರ ನಡೆಯಲಿದೆ. ಸದಸ್ಯತ್ವ ಶುಲ್ಕವನ್ನು ರೂ.೫೦೦ ರಿಂದ ರೂ. ೨೫೦ ಗಳಿಗೆ ಇಳಿಸಲಾಗಿದ್ದು ಇದೀಗ ಆ್ಯಪ್ ಮೂಲಕ ಆಸಕ್ತರು ಸದಸ್ಯತ್ವ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾಹಿತಿ ನೀಡಿದ್ದಾರೆ.

ಈ ಹಿಂದೆ ಸಾಧಾರಣ ಗುರುತಿನ ಚೀಟಿ ನೀಡಲಾಗುತ್ತಿದ್ದುದನ್ನು ಬದಲಾಯಿಸಿ, ರೂ. ೧೫೦ ಗಳಿಗೆ ಅತ್ಯಾಧುನಿಕ ತಂತ್ರಾAಶದ ಚಿಪ್ ವುಳ್ಳ ಸ್ಮಾರ್ಟ್ ಕಾರ್ಡ್ ಅನ್ನು ಗುರುತಿನ ಚೀಟಿಯಾಗಿ ಹೊಸದಾಗಿ ನೋಂದಾಯಿ ಸುವ ಸದಸ್ಯರಿಗೆ ವಿತರಿಸಲಾಗುತ್ತದೆ. ಈಗಾಗಲೇ ನೋಂದಾಯಿತ ಸದಸ್ಯರ ಹೆಸರು, ವಿಳಾಸದಲ್ಲಿ ತಪ್ಪುಗಳಿದ್ದಲ್ಲಿ ಅವನ್ನು ಸರಿಪಡಿಸಲು ಮತ್ತು ವಿಳಾಸ ಬದಲಾವಣೆ ಮಾಡಲು ಈ ಆ್ಯಪ್‌ನಲ್ಲಿ ಅವಕಾಶವಿದ್ದು, ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳ ಬೇಕೆಂದು ಅವರು ಮನವಿ ಮಾಡಿದ್ದಾರೆ.

ಹೊಸ ಸದಸ್ಯತ್ವ ಪಡೆಯುವಿಕೆ, ಸದಸ್ಯತ್ವ ವಿಳಾಸ ಪರಿಷ್ಕರಣೆ, ಗುರುತಿನ ಚೀಟಿಯಾಗಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳುವುದು ಸೇರಿದಂತೆ, ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಚಟುವಟಿಕೆಗಳ ಮಾಹಿತಿಯನ್ನು ಈ ಆ್ಯಪ್ ಮೂಲಕ ಸದಸ್ಯರು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಮುಂಬರುವ ಹಾವೇರಿಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬAಧಿಸಿದAತೆ ಮಾಹಿತಿ, ಪ್ರತಿನಿಧಿಗಳ ನೋಂದಣಿ ಇನ್ನಿತರೆ ಪ್ರಮುಖ ಮಾಹಿತಿಗಳನ್ನು ಈ ಆ್ಯಪ್ ಒದಗಿಸಲಿದೆ. hಣಣಠಿs://ಠಿಟಚಿಥಿ.googಟe.ಛಿom/sಣoಡಿe/ಚಿಠಿಠಿs/ಜeಣಚಿiಟs?iಜ=ಛಿom.ಞಟಿobಟಥಿ.ಞಚಿsಚಿಠಿಚಿ ಈ ಲಿಂಕ್ ಬಳಸಿ ಪ್ರಕ್ರಿಯೆ ನಡೆಸಬೇಕು. ಅಲ್ಲದೆ ಜಾಲತಾಣದ ಮೂಲಕವೂ ಸದಸ್ಯತ್ವ ಪಡೆಯಲು hಣಣಠಿs://ಞಚಿಟಿಟಿಚಿಜಚಿsಚಿhiಣhಥಿಚಿಠಿಚಿಡಿishಚಿಣಣu.iಟಿ/ಚಿಠಿಠಿ ಈ ಲಿಂಕ್ ಬಳಸಬಹುದಾಗಿದೆ ಎಂದು ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.