ಸೋಮವಾರಪೇಟೆ, ಆ. ೮: ಇಲ್ಲಿನ ಆನೆಕೆರೆ ಆವರಣ ಆಶುಚಿತ್ವ ದಿಂದ ಕೂಡಿದ್ದು ಐತಿಹಾಸಿಕ ಕೆರೆಯ ಪ್ರಾಂಗಣ ತ್ಯಾಜ್ಯ ವಸ್ತುಗಳ ಸಂಗ್ರಹಾಗಾರವಾಗಿ ಮಾರ್ಪಟ್ಟಿದೆ.
ಈ ಹಿಂದೆ ಶಿಥಿಲಾವಸ್ಥೆಗೆ ತಲುಪಿದ್ದ ಆನೆಕೆರೆಯನ್ನು ಒಕ್ಕಲಿಗರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅವರು ಸುಮಾರು ರೂ. ೮ ಲಕ್ಷ ವೆಚ್ಚದಲ್ಲಿ ಹೂಳು ತೆಗೆಸಿ ದುರಸ್ತಿ ಕಾರ್ಯ ಕೈಗೊಂಡಿದ್ದು, ತರುವಾಯ ಆನೆಕೆರೆಯಲ್ಲಿ ಯಥೇಚ್ಚ ನೀರು ಸಂಗ್ರಹವಾಗುತ್ತಿದೆ.
ಈ ನಡುವೆ ಕೆರೆಯ ಸುತ್ತಮುತ್ತ ಕೆಲ ಸಾರ್ವಜನಿಕರು ಗೃಹ ಬಳಕೆಯ ತ್ಯಾಜ್ಯಗಳನ್ನು ತಂದು ಸುರಿಯುವ ಮೂಲಕ ಅನಾಗರಿಕತೆಯನ್ನು ಪ್ರದರ್ಶಿಸುತ್ತಿದ್ದಾರೆ. ಮನೆ ಬಳಕೆಯ ತ್ಯಾಜ್ಯಗಳನ್ನು ತಂದು ಸುರಿಯುತ್ತಿರು ಸೋಮವಾರಪೇಟೆ, ಆ. ೮: ಇಲ್ಲಿನ ಆನೆಕೆರೆ ಆವರಣ ಆಶುಚಿತ್ವ ದಿಂದ ಕೂಡಿದ್ದು ಐತಿಹಾಸಿಕ ಕೆರೆಯ ಪ್ರಾಂಗಣ ತ್ಯಾಜ್ಯ ವಸ್ತುಗಳ ಸಂಗ್ರಹಾಗಾರವಾಗಿ ಮಾರ್ಪಟ್ಟಿದೆ.
ಈ ಹಿಂದೆ ಶಿಥಿಲಾವಸ್ಥೆಗೆ ತಲುಪಿದ್ದ ಆನೆಕೆರೆಯನ್ನು ಒಕ್ಕಲಿಗರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅವರು ಸುಮಾರು ರೂ. ೮ ಲಕ್ಷ ವೆಚ್ಚದಲ್ಲಿ ಹೂಳು ತೆಗೆಸಿ ದುರಸ್ತಿ ಕಾರ್ಯ ಕೈಗೊಂಡಿದ್ದು, ತರುವಾಯ ಆನೆಕೆರೆಯಲ್ಲಿ ಯಥೇಚ್ಚ ನೀರು ಸಂಗ್ರಹವಾಗುತ್ತಿದೆ.
ಈ ನಡುವೆ ಕೆರೆಯ ಸುತ್ತಮುತ್ತ ಕೆಲ ಸಾರ್ವಜನಿಕರು ಗೃಹ ಬಳಕೆಯ ತ್ಯಾಜ್ಯಗಳನ್ನು ತಂದು ಸುರಿಯುವ ಮೂಲಕ ಅನಾಗರಿಕತೆಯನ್ನು ಪ್ರದರ್ಶಿಸುತ್ತಿದ್ದಾರೆ. ಮನೆ ಬಳಕೆಯ ತ್ಯಾಜ್ಯಗಳನ್ನು ತಂದು ಸುರಿಯುತ್ತಿರು ಹೆಚ್ಚಾಗುತ್ತಲೇ ಇದೆ.
ಕೆರೆಯನ್ನು ಶುಚಿತ್ವಗೊಳಿಸಿದ ಕೆಲ ದಿನಗಳಲ್ಲಿ ಮತ್ತೆ ಕಸ ಶೇಖರಣೆಯಾಗುತ್ತಿದೆ. ಇದರೊಂದಿಗೆ ಕೆರೆಯ ಆವರಣದೊಳಗೆ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್‌ಗಳನ್ನು ಎಸೆಯ ಲಾಗುತ್ತಿದೆ. ಆವರಣ ಗೋಡೆಯನ್ನು ತೆರವುಗೊಳಿಸಿ ಸುತ್ತಲೂ ಮೆಸ್ ಅಳವಡಿಸಿದರೆ ತ್ಯಾಜ್ಯ ಸುರಿಯುವುದಕ್ಕೆ ತಡೆಹಾಕಬಹುದು. ಮೆಸ್ ಅಳವಡಿಸುವುದರಿಂದ ಪಾರದರ್ಶಕತೆ ಇರಲಿದ್ದು ತ್ಯಾಜ್ಯ ಹಾಕುವವರ ಪತ್ತೆಗೂ ಅನುಕೂಲವಾಗಲಿದೆ ಎಂದು ಸ್ಥಳೀಯರು ಪತ್ರಿಕೆಯೊಂದಿಗೆ ಆಗ್ರಹಿಸಿದ್ದಾರೆ.
ಈ ತಿಂಗಳಾAತ್ಯದಲ್ಲಿ ಗೌರಿ ಗಣೇಶ ಹಬ್ಬವೂ ಬರಲಿದ್ದು, ಪಟ್ಟಣ ವ್ಯಾಪ್ತಿಯ ೧೦ಕ್ಕೂ ಅಧಿಕ ಕಡೆಗಳಲ್ಲಿ ಪ್ರತಿಷ್ಠಾಪನೆಗೊಳ್ಳುವ ಉತ್ಸವ ಮೂರ್ತಿಗಳನ್ನು ಇದೇ ಕೆರೆಗೆ ವಿಸರ್ಜಿಸಲಾಗುತ್ತದೆ. ಐತಿಹಾಸಿಕ ಆನೆಕೆರೆಯನ್ನು ಪೂಜ್ಯ ಭಾವನೆಯಿಂದ ನೋಡಲಾಗುತ್ತಿದ್ದು, ಇದರ ಶುಚಿತ್ವಕ್ಕೆ ಆದ್ಯತೆ ನೀಡಲೇಬೇಕಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿ ಗಮನ ಹರಿಸಿ ಸುತ್ತಲೂ ಮೆಸ್ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.