ಚೆಯ್ಯಂಡಾಣೆ, ಆ. ೮: ಹೈದರಾಬಾದಿನಲ್ಲಿರುವ ಕೇಂದ್ರ ಮಂತ್ರಾಲಯದ ಅಧೀನದ ಕೇಂದ್ರೀಯ ಪತ್ತೇದಾರಿ ತರಬೇತಿ ಸಂಸ್ಥೆಯಲ್ಲಿ ೬೫ ದಿನಗಳ ಕಾಲ ತನಿಖೆ ಮತ್ತು ಅಪರಾಧ ಪತ್ತೆ ಎಂಬ ವಿಷಯದಲ್ಲಿ ನಡೆದ ಆಧುನಿಕ ವಿಶೇಷ ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಕೊಡಗಿನ ಎಡಪಾಲದ ಗ್ರಾಮದ ಕುಪ್ಪೋಡಂಡ ಅಹ್ಮದ್ ರಫೀಕ್ ಅಖಿಲ ಭಾರತ ಮಟ್ಟದಲ್ಲಿ ೩ನೇ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಇವರು ಸಿಐಡಿ ವಿಭಾಗದಲ್ಲಿ ಸಬ್‌ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಎಡಪಾಲದ ಕುಪ್ಪೋಡಂಡ ದಿ. ಅಹ್ಮದ್ ಹಾಜಿ ಹಾಗೂ ಆಯಿಷಾ ದಂಪತಿಯ ಪುತ್ರರಾಗಿದ್ದಾರೆ.