ನಾಪೋಕ್ಲು, ಆ. ೮: ಕಾಫಿ ತೋಟದಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಅಸ್ಸಾಮಿ ಕಾರ್ಮಿಕರು ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಮಾಲು ಸಹಿತ ಪೊಲೀಸರು ಬಂಧಿಸಿದ್ದಾರೆ.
ನಾಪೋಕ್ಲು ಸಂತೆ ದಿನವಾದ ಸೋಮವಾರ ನಸುಕು ಚೋನಕೆರೆ ಎಂಬಲ್ಲಿ ಸಂಶಯಸ್ಪದವಾಗಿ ಬ್ಯಾಗು ಸಮೇತ ರಸ್ತೆಯಲ್ಲಿ ತೆರಳುತ್ತಿದ್ದ ಆರೋಪಿಗಳನ್ನು ಖಚಿತ ಮಾಹಿತಿ ಆಧರಿಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿಗೆ ಸಮೀಪದ ಚೋನಕರೆಯ ಚೇಂಬು ನಾಸಿರ್ ಹಾಗೂ ಮೂವೇರ ಬೆಳ್ಳಿಯಪ್ಪ ಎಂಬವರ ಲೈನ್ ಮನೆಯಲ್ಲಿ ವಾಸವಾಗಿದ್ದು, ಕಾರ್ಮಿಕರಾಗಿ ಕಾರ್ಯನಿರ್ವಹಿಸು ತ್ತಿದ್ದ ಅಸ್ಸಾಂ ಉದಲ್ಗಿರಿ ನಿವಾಸಿಗಳಾದ ಸಹಜಾನ್ ಆಲಿ (೪೦), ಸೈದುಲ್ ಇಸ್ಲಾಂ (೨೨) ಅವರು ೧೨ ಕೆ.ಜಿ. ಗೋಮಾಂಸ ಹಾಗೂ ಚರ್ಮ ಸಹಿತ ಸಿಕ್ಕಿಬಿದ್ದು, ಇದೀಗ ಇಬ್ಬರು ನಾಪೋಕ್ಲು ಪೊಲೀಸರ ಅತಿಥಿಗಳಾಗಿ ದ್ದಾರೆ. ಇನ್ನೊಬ್ಬ
(ಮೊದಲ ಪುಟದಿಂದ) ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಸದಾಶಿವ ಅವರ ಮುಂದಾಳತ್ವದಲ್ಲಿ ಎಎಸ್ಐ ಕುಶಾಲಪ್ಪ, ಸಿಬ್ಬಂದಿಗಳಾದ ಪಂಚಲಿAಗಪ್ಪ, ಲವಕುಮಾರ್, ಮಹೇಶ್, ಗಿರೀಶ್, ರವಿಕುಮಾರ್, ಚಾಲಕ ಬಾಲಕೃಷ್ಣ ಪಾಟೀಲ್ ಇನ್ನಿತರರು ಕಾರ್ಯಾಚರಣೆ ನಡೆಸಿದರು.
ಅಕ್ರಮ ತಡೆಗಟ್ಟಲು ಒತ್ತಾಯ
ನಾಪೋಕ್ಲು ಭಾಗದಲ್ಲಿ ಅಕ್ರಮ ಗೋಹತ್ಯೆ ಮತ್ತು ಗೋಮಾಂಸ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಹಿಂದೂ ಪರ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ಮಾಡುವ ಮೊದಲು ಸಂಬAಧಿಸಿದವರು ಅಕ್ರಮವನ್ನು ತಡೆಗಟ್ಟಿ ಕಠಿಣ ಕ್ರಮ ಜರುಗಿಸಬೇಕೆಂದು ಹಿಂದೂ ಪರ ಸಂಘಟನೆಯ ಪ್ರಮುಖರಾದ ಕಂಗಾAಡ ಜಾಲಿ ಪೂವಪ್ಪ, ಅಮ್ಮಂಡ ಮನು ಮಹೇಶ್ ಒತ್ತಾಯಿಸಿದರು.
ಈ ಸಂದರ್ಭ ಸಂಘಟನೆಯ ಕೆಲೇಟಿರ ಸಾಬು ನಾಣಯ್ಯ, ಕೇಟೋಳಿರ ಡಾಲಿ ಅಚ್ಚಪ್ಪ, ಚಿಯಕ್ಪೂವಂಡ ಸತೀಶ್, ಸುಕುಮಾರ ಸೇರಿದಂತೆ ಇನ್ನಿತರರು ಇದ್ದರು.