ಬರ್ಮಿಂಗ್ ಹ್ಯಾಮ್, ಆ. ೮: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೆ ಚಿನ್ನದ ಪದಕ ಬಂದಿದೆ. ಬ್ಯಾಡ್ಮಿಂಟನ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಲಕ್ಷö್ಯ ಸೇನ್ ಚಿನ್ನದ ಪದಕ ಗೆದ್ದಿದ್ದಾರೆ. ಲಕ್ಷö್ಯಸೇನ್, ಟ್ಜೆಯೋಂಗ್ ಎನ್‌ಜಿ ಅವರನ್ನು ೧೯-೨೧, ೨೧-೯, ೨೧-೧೬ ಸೆಟ್‌ಗಳಿಂದ ಸೋಲಿಸಿದರು. ಇದಕ್ಕೂ ಮುನ್ನ ಮಹಿಳೆಯರ ಸಿಂಗಲ್ಸ್ನಲ್ಲಿ ಕೆನಡಾದ ಮಿಚೆಲ್‌ಲಿ ಅವರನ್ನು ೨೧-೧೫, ೨೧-೧೩ ನೇರ ಸೆಟ್‌ಗಳಿಂದ ಸೋಲಿಸಿದ್ದ ಪಿ.ವಿ ಸಿಂಧು ಚಿನ್ನದ ಪದಕ ಗೆದ್ದಿದ್ದಾರೆ. ಪ್ಯಾಡ್ಲರ್ ಸತ್ಯನ್ ಜ್ಞಾನಶೇಖರನ್ ಕಂಚಿನ ಪದಕ ಗೆದ್ದಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೂ ಭಾರತಕ್ಕೆ ಒಟ್ಟು ೬೧ ಪದಕಗಳು
ಕಾಮನ್‌ವೆಲ್ತ್ ಕ್ರೀಡೆ ಭಾರತಕ್ಕೆ ನಾಲ್ಕನೇ ಸ್ಥಾನ
(ಮೊದಲ ಪುಟದಿಂದ) ಬಂದಿದ್ದು ೨೨ ಚಿನ್ನ, ೧೬ ಬೆಳ್ಳಿ ಹಾಗೂ ೨೩ ಕಂಚು ಸೇರಿದೆ. ಪದಕಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.
ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಇಂಗ್ಲೆAಡ್‌ನ ಲೇನ್-ವೆಂಡಿ ಜೋಡಿಯ ವಿರುದ್ಧ ಜಯ ಗಳಿಸಿದ್ದು ಚಿನ್ನದ ಪದಕ ಗೆದ್ದಿದ್ದಾರೆ. ಟೇಬಲ್ ಟೆನ್ನಿಸ್‌ನ ಸಿಂಗಲ್ಸ್ ವಿಭಾಗದಲ್ಲಿ ಶರತ್ ಕಮಲ್ ಇಂಗ್ಲೆAಡ್‌ನ ಲಿಯಾಮ್ ಪಿಚ್ಫೋರ್ಡ್ನ್ನು ಫೈನಲ್ಸ್ನಲ್ಲಿ ೪-೧ ಅಂತರದಿAದ ಮಣಿಸಿ ಸ್ವರ್ಣ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಹಾಕಿ ಪುರುಷರ ವಿಭಾಗದಲ್ಲಿ ಆಸ್ಟೆçÃಲಿಯಾ ವಿರುದ್ಧ ಭಾರತ ೦-೭ ಗೋಲುಗಳ ಅಂತರದಿAದ ಸೋಲು ಕಂಡಿದೆ. ಫೈನಲ್ಸ್ ಪಂದ್ಯದ ಮೇಲೆ ಆಸ್ಟೆçÃಲಿಯಾ ಸಂಪೂರ್ಣ ಹಿಡಿತ ಸಾಧಿಸಿದ್ದು, ಬ್ಲೇಕ್ ಗೋವರ್ಸ್, ನಾಥನ್ ಎಫ್ರಾಮ್ಸ್, ಜಾಕೋಬ್ ಆಂಡರ್ಸನ್, ಟಾಮ್ ವಿಕ್ಹ್ಯಾಮ್ ಮತ್ತು ಫಿನ್ ಒಗಿಲ್ವಿ ಆಸ್ಟ್ರೇಲಿಯಾ ಪರ ಗೋಲು ದಾಖಲಿಸಿದರು. ಆಸ್ಟೆçÃಲಿಯಾ ಆಟಗಾರರ ಎದುರು ಭಾರತೀಯ ಕ್ರೀಡಾಪಟುಗಳು ಗೋಲು ದಾಖಲಿಸಲು ಹರಸಾಹಸ ಪಡಬೇಕಾಯಿತು. ಪರಿಣಾಮ ಭಾರತ ರಜತ ಪದಕಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.