ಮಡಿಕೇರಿ, ಆ. ೭: ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಮೂಲಕ ವ್ಯವಸ್ಥಿತ ರೀತಿಯಲ್ಲಿ ಗಮನ ಹರಿಸಲಾಗುತ್ತಿದೆ. ವಿಪತ್ತು ನಿರ್ವಹಣೆ, ತುರ್ತು ಅಗತ್ಯತೆಗಳತ್ತ ಹೆಚ್ಚಿನ ಮುತುವರ್ಜಿ ವಹಿಸಲಾಗುವುದು. ಪ್ರಸ್ತುತ ಮಳೆ-ಗಾಳಿಯ ಅಬ್ಬರ ಜಿಲ್ಲೆಯಾದ್ಯಂತ ಹೆಚ್ಚಿದ್ದು, ಜಿಲ್ಲಾಡಳಿತ ಇದನ್ನು ಎದುರಿಸಲು ಸಜ್ಜಾಗಿರುವುದಾಗಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ತಿಳಿಸಿದ್ದಾರೆ.

‘ಶಕ್ತಿ’ಯೊಂದಿಗೆ ಜಿಲ್ಲೆಯ ಪ್ರಸ್ತುತದ ಸನ್ನಿವೇಶದ ಕುರಿತು ಪ್ರತಿಕ್ರಿಯಿಸಿದ ಅವರು, ಜಿಲ್ಲೆಯ ಎಲ್ಲೆಡೆಯ ಮಾಹಿತಿಯನ್ನು ಪಡೆಯಲಾಗುತ್ತಿದೆ. ಜಿಲ್ಲಾಡಳಿತ ವಿಪತ್ತು ನಿರ್ವಹಣೆಯ ವಿಚಾರದಲ್ಲಿ ಎನ್.ಡಿ.ಆರ್.ಎಫ್.ನ ಮಾರ್ಗ ಸೂಚಿಯ ಪ್ರಕಾರ ಕ್ರಮಕೈಗೊಳ್ಳ ಬೇಕಾಗಿದೆ. ಈ ಮಾರ್ಗಸೂಚಿಗೆ ಒಳಪಟ್ಟಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರಸ್ತೆ, ಸೇತುವೆ, ಮೋರಿ ಸೇರಿದಂತೆ ಹಲವು ರೀತಿಯ ಹಾನಿಗಳು ಸಂಭವಿಸುತ್ತಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ತುರ್ತಾಗಿ ಆಗಬೇಕಾದ ಕೆಲಸಗಳಿಗೆ ಆದ್ಯತೆ ಯನ್ನು ನೀಡಲಾಗುತ್ತಿದೆ. ಮಳೆ ಕಡಿಮೆಯಾದ ನಂತರವಷ್ಟೆ ಶಾಶ್ವತವಾದ ಪರಿಹಾರ ಕಾರ್ಯಗಳತ್ತ ಗಮನ ಹರಿಸಬೇಕಾಗುತ್ತದೆ ಎಂದು ಅವರು ವಿವರಿಸಿದರು.

ಮಳೆ ಹಾನಿಗೆ ಸಂಬAಧಿಸಿದAತೆ ಜಿಲ್ಲಾಡಳಿತದ ಬಳಿ ರೂ. ೩೫ ಕೋಟಿಯಷ್ಟು ಅನುದಾನವಿದೆ. ಆದರೆ ಈ ಬಗ್ಗೆ ಕೆಲವು ಗೊಂದಲಗಳು ಸೃಷ್ಟಿ ಯಾಗಿದ್ದು, ಸರಕಾರ ಕೊಡಗನ್ನು ಕಡೆಗಣಿಸಿದೆ ಎಂಬAತೆ ಪ್ರಚಾರವಾಗಿದೆ. ಆದರೆ ಈ ಅಭಿಪ್ರಾಯ ತಪ್ಪಾಗಿದ್ದು, ಜಿಲ್ಲಾಡಳಿತದ ಬಳಿ ಅಗತ್ಯ ಅನುದಾನವಿದ್ದು, ಇದನ್ನು ಪರಿಹಾರ ಮಾರ್ಗಸೂಚಿಯ ಪ್ರಕಾರ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ರೂ. ೨೩೨ ಕೋಟಿಯಷ್ಟು ನಷ್ಟ

ಮಳೆ-ಗಾಳಿಯ ಪರಿಣಾಮ ದಿಂದಾಗಿ ವಿವಿಧ ಇಲಾಖೆಗಳಿಗೆ ಸಂಬAಧಿಸಿದAತೆ ಪ್ರಸ್ತುತ ಅಂದಾಜು ರೂ. ೨೩೨ ಕೋಟಿಯಷ್ಟು ನಷ್ಟ ಸಂಭವಿಸಿದೆ. ನಷ್ಟದ ಬಗ್ಗೆ ದಿನಂಪ್ರತಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈ ವರದಿಯನ್ನು ಸರಕಾರಕ್ಕೆ ನೀಡಲಾಗುವುದು. ಸದ್ಯದಲ್ಲಿ ರಾಜ್ಯ ಸರಕಾರದ ಮೂಲಕ ನಷ್ಟದ ಸಂಪೂರ್ಣ ವಿವರದೊಂದಿಗೆ ಕೇಂದ್ರಕ್ಕೆ ಮಾಹಿತಿ ನೀಡಿ ಹೆಚ್ಚು ಅನುದಾನಕ್ಕೆ ಬೇಡಿಕೆ ಸಲ್ಲಿಸುವ ಬಗ್ಗೆ ಕ್ರಮವಹಿಸಲಾಗುತ್ತಿದೆ. ಇದಕ್ಕೆ ಜಿಲ್ಲೆಯ ಪೂರ್ಣ ವಿವರವನ್ನು ರಾಜ್ಯ ಸರಕಾರಕ್ಕೆ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬೆಳೆ ಹಾನಿ ವಿಚಾರ

ಜಿಲ್ಲೆಯಲ್ಲಿ ಬೆಳೆ ಹಾನಿಗೆ ಸಂಬAಧಿಸಿದAತೆ ಬರುತ್ತಿರುವ ದೂರುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಮುಖ ಬೆಳೆಯಾದ ಕಾಫಿ ಬೆಳೆ ನಷ್ಟದ

(ಮೊದಲ ಪುಟದಿಂದ) ಬಗ್ಗೆ ಹೆಚ್ಚಿನ ದೂರು ಇದೆ. ದೂರು ಬರುತ್ತಿರುವ ಕಡೆಗಳಲ್ಲಿ ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆಗಳ ಮೂಲಕ ಜಂಟಿ ಪರಿಶೀಲನೆ ನಡೆಯಲಿದೆ. ಈಗಾಗಲೇ ಕೆಲವಾರು ಕಡೆಗಳ ಮಾಹಿತಿ ಸಂಗ್ರಹಿಸಲಾಗಿದೆ. ಪ್ರಸ್ತುತದ ವರದಿಯ ಪ್ರಕಾರ ಶೇ. ೨೦ ರಿಂದ ೨೨ ರಷ್ಟು ಬೆಳೆ ನಷ್ಟವಾಗಿದೆ. ಆದರೆ, ಎನ್.ಡಿ.ಆರ್.ಎಫ್. ಮಾರ್ಗಸೂಚಿಯ ಪ್ರಕಾರ ಶೇ. ೩೩ಕ್ಕಿಂತ ಅಧಿಕ ನಷ್ಟ ಸಂಭವಿಸಿದಲ್ಲಿ ಇದು ಪರಿಹಾರ ವ್ಯಾಪ್ತಿಗೆ ಬರಲಿದೆ.

ಆದರೆ ಪ್ರಸ್ತುತ ಮಳೆಗಾಲ ಇನ್ನೂ ಮುಂದುವರಿಯಲಿದ್ದು, ನಷ್ಟವೂ ಹೆಚ್ಚಾಗುವ ಸಾಧ್ಯತೆಯಿದೆ. ಈ ಬಗ್ಗೆ ಮುಂದಿನ ದಿನದಲ್ಲಿ ಸಮೀಕ್ಷೆ ನಡೆಯಲಿದೆ.

ಇದರಂತೆ ಬೆಳೆಗಾರರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಮೂಲಕ ನೇರವಾಗಿ ಅವರ ಖಾತೆಗೆ ಹಣ ಬರಲಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರವಾಗಬೇಕಿದೆ ಎಂದು ಅವರು ಸ್ಪಷ್ಟಪಡಿಸಿದರು. ಕಳೆದ ಸಾಲಿನಲ್ಲೂ ಇದೇ ಮಾರ್ಗಸೂಚಿಯನ್ವಯ ರೂ. ೧೦೬ ಕೋಟಿಯಷ್ಟು ಪರಿಹಾರ ನೀಡಲಾಗಿರುವುದನ್ನು ಸ್ಮರಿಸಬಹುದು ಎಂದು ಅವರು ಉಲ್ಲೇಖಿಸಿದರು.

ರಾಜ್ಯದಲ್ಲಿನ ಪ್ರಾಕೃತಿಕ ವಿಕೋಪದ ನಷ್ಟ ಹಾಗೂ ವಸ್ತುಸ್ಥಿತಿಯನ್ನು ಅವಲೋಕಿಸಲು ಮುಂದಿನ ದಿನದಲ್ಲಿ ಕೇಂದ್ರದಿAದಲೂ ವಿಶೇಷ ತಂಡ ಆಗಮಿಸುವ ಸಾಧ್ಯತೆ ಇರುವುದಾಗಿಯೂ ಜಿಲ್ಲಾಧಿಕಾರಿ ಸತೀಶ ಅವರು ಹೇಳಿದರು.

ಜಿಲ್ಲಾಡಳಿತ ನಿಯಮಾವಳಿಯ ಪ್ರಕಾರವಾಗಿ ಕಾರ್ಯನಿರ್ವಹಿಸುತ್ತಿದ್ದು, ಜನತೆಯಲ್ಲಿ ಗೊಂದಲ ಬೇಡ ಎಂದು ಅವರು ಈ ಸಂದರ್ಭ ಮನವಿ ಮಾಡಿದರು.