ಮಡಿಕೇರಿ, ಆ. ೭: ಭಾರತ ಸ್ವಾತಂತ್ರö್ಯಗೊAಡು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆ ಮಡಿಕೇರಿಯ ಜೀವ ವಿಮಾ ಪ್ರತಿನಿಧಿ ಹಾಗೂ ವಿವಿಧ ಸಂಘ, ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಗೀತಾ ಗಿರೀಶ್ ಅವರು ೧೦೦ಕ್ಕೂ ಹೆಚ್ಚು ಧ್ವಜಗಳನ್ನು ಅಂಚೆ ಕಚೇರಿಯಿಂದ ಖರೀದಿಸಿ ವಿತರಿಸಿದ್ದಾರೆ.
ಅಜಾದಿ ಕಾ ಅಮೃತ ಮಹೋತ್ಸವ ಘೋಷವಾಕ್ಯದಲ್ಲಿ ಸರಕಾರದಿಂದ ಕಾರ್ಯಕ್ರಮಗಳು ನಡೆಯುತ್ತಿದ್ದು, ಸ್ವಯಂ ಪ್ರೇರಿತವಾಗಿ ಧ್ವಜಗಳನ್ನು ಎಲ್ಲಾ ವರ್ಗದವರಿಗೆ ವಿತರಿಸಲಾಗಿದೆ. ೭೫ ವರ್ಷ ವಯಸ್ಸಿನವರನ್ನು ಗುರುತಿಸಿ ಅವರಿಗೆ ಧ್ವಜ ನೀಡಿ ಶುಭಾಶಯ ಕೋರುತ್ತಿದ್ದೇನೆ. ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವ ಸಂದೇಶವನ್ನು ನೀಡುತ್ತಿದ್ದೇನೆ. ಇನ್ನೂ ಹೆಚ್ಚಿನ ಧ್ವಜಗಳನ್ನು ವಿತರಿಸಲು ಇಚ್ಚಿಸಿದ್ದೇನೆ ಎಂದು ಗೀತಾ ಗಿರೀಶ್ ತಿಳಿಸಿದ್ದಾರೆ.