ಕರಿಕೆ, ಆ.೭: ಕರಿಕೆ ಗ್ರಾಮದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದ ಪರಿಣಾಮ ಇಂದು ಸಂಜೆ ಭಾಗಮಂಡಲ- ಕರಿಕೆ ರಸ್ತೆಯಲ್ಲಿ ಬೃಹತ್ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದ್ದು, ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ. ಅಲ್ಲದೆ ಬೃಹತ್ ಮರಗಳು ಕೂಡ ಬಿದ್ದಿದ್ದು ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಹತ್ತಾರು ವಾಹನಗಳಲ್ಲಿ ಬಂದಿದ್ದ ಇತರರು ಕರಿಕೆ, ಆ.೭: ಕರಿಕೆ ಗ್ರಾಮದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದ ಪರಿಣಾಮ ಇಂದು ಸಂಜೆ ಭಾಗಮಂಡಲ- ಕರಿಕೆ ರಸ್ತೆಯಲ್ಲಿ ಬೃಹತ್ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದ್ದು, ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ. ಅಲ್ಲದೆ ಬೃಹತ್ ಮರಗಳು ಕೂಡ ಬಿದ್ದಿದ್ದು ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಹತ್ತಾರು ವಾಹನಗಳಲ್ಲಿ ಬಂದಿದ್ದ ಇತರರು ಚರಂಡಿಯ ಮೂಲಕ ಹೊರಬಿಡುವ ಕಾರ್ಯ ಮಾಡಿದರು. ಮತ್ತೆ ಮಳೆ ಬಿರುಸುಗೊಂಡರೆ ಈ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಲೋಕೋಪಯೋಗಿ ಇಲಾಖೆ ಸ್ಥಳದಲ್ಲಿ ಎಚ್ಚರಿಕೆಯ ನಾಮಫಲಕ ಅಳವಡಿಸಬೇಕಿದೆ.

‘ಶಕ್ತಿ’ಯೊಂದಿಗೆ ಮಾತನಾಡಿದ ಶಾಸಕ ಬೋಪಯ್ಯ, ಕರಿಕೆ ಗ್ರಾಮದ ಮಳೆಹಾನಿ

(ಮೊದಲ ಪುಟದಿಂದ) ಪ್ರದೇಶದ ಪರಿಶೀಲನೆ ನಡೆಸಿ ಹಿಂತಿರುಗುವಾಗ ರಸ್ತೆಗೆ ಮರವೊಂದು ಉರುಳಿ ಬಿದ್ದು ಸಂಚಾರಕ್ಕೆ ತೊಡಕಾಗಿತ್ತು. ಅರಣ್ಯ ಸಿಬ್ಬಂದಿಗಳ ಸಹಕಾರದಿಂದ ತ್ವರಿತಗತಿಯಲ್ಲಿ ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೇ ಇದೇ ರಸ್ತೆ ಬದಿ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು ನೋಡ ನೋಡುತ್ತಿದ್ದಂತೆ ಮತ್ತೆ ಗುಡ್ಡ ಕೊಚ್ಚಿ ಹೋಗುತ್ತಿದೆ. ಭಯದ ವಾತಾವರಣದಲ್ಲಿ ಆ ಭಾಗದ ಜನತೆ ಇದ್ದು; ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ. ಮರ ತೆರವು ಮಾಡಿ ರಸ್ತೆ ಸಂಚಾರಕ್ಕೆ ಅವಕಾಶ ನೀಡಲು ಅರಣ್ಯ ಇಲಾಖೆಯ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದು, ಉಸ್ತುವಾರಿ ಸಚಿವರ ಸಭೆಯಲ್ಲಿ ಇವರಿಗೆ ಓಡಾಡಲು ಸೂಕ್ತ ವಾಹನ ಹಾಗೂ ಮರ ಕತ್ತರಿಸುವ ಯಂತ್ರ ಸೇರಿದಂತೆ ಇತರೆ ಮೂಲಭೂತ ಸೌಕರ್ಯ ಒದಗಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.