ಶನಿವಾರಸಂತೆ, ಆ. ೬: ದುಂಡಳ್ಳಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಪಂಚಾಯಿತಿ ಉಪಾಧ್ಯಕ್ಷ ಎಸ್.ಸಿ. ನಿತಿನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಪಂಚಾಯಿತಿ ಮಟ್ಟದಲ್ಲಿ ಕುಡಿಯುವ ನೀರಿನ ಪೈಪ್ ದುರಸ್ತಿ ಮಾಡುವ ಸಾಮಗ್ರಿಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಸಭೆಯಲ್ಲಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಮುಂದೆ ಉತ್ತಮ ಗುಣಮಟ್ಟದ ಪೈಪ್ ರಿಪೇರಿ ಮಾಡುವ ಸಾಮಗ್ರಿಗಳನ್ನು ಬಳಸಲು ತೀರ್ಮಾನಿಸಲಾಯಿತು. ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಆರೋಗ್ಯದ ದೃಷ್ಟಿಯಿಂದ ಅತೀ ತುರ್ತಾಗಿ ಶುಚಿಗೊಳಿಸಲು ನಿರ್ಧರಿಸಲಾಯಿತು.

ದುಂಡಳ್ಳಿ ಗ್ರಾಮ ಪಂಚಾಯಿತಿ ಡಿಜಿಟಲ್ ಗ್ರಂಥಾಲಯಕ್ಕೆ ತಾ.ಪಂ. ಹಾಗೂ ಜಿಲ್ಲಾ ಪಂಚಾಯಿತಿ ಪ್ರತ್ಯೇಕವಾದ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಪಿಡಿಓ ರಾಜೇಂದ್ರ ತಿಳಿಸಿದರು. ಕಸವಿಲೇವಾರಿ ಘಟಕಕ್ಕೆ ವಿದ್ಯುತ್ ಸಂಪರ್ಕವನ್ನು ತುರ್ತಾಗಿ ಕಲ್ಪಿಸುವಂತೆ ಸೂಚಿಸಲಾಯಿತು. ಸದಸ್ಯ ಡಿ.ಪಿ. ಭೋಜಪ್ಪ ಮಾತನಾಡಿ ಅತಿವೃಷ್ಟಿಯಿಂದ ಹಾನಿಯಾದಾಗ ಪಂಚಾಯಿತಿ ಮಟ್ಟದಲ್ಲಿ ತುರ್ತು ಸಭೆ ಹಾಗೂ ಪೂರ್ವಭಾವಿ ಸಭೆ ಕರೆದು ಪರಿಹಾರ ಕಂಡುಕೊAಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಂಚಾಯಿತಿ ವ್ಯಾಪ್ತಿಯ ಸುಳುಗಳಲೆ ಗ್ರಾಮದಲ್ಲಿ ಅತಿವೃಷ್ಟಿಯಿಂದ ಮೃತಪಟ್ಟ ವಸಂತಮ್ಮ ಎಂಬ ಮಹಿಳೆಗೆ ಸರಕಾರದಿಂದ ನೀಡಲಾದ ಪರಿಹಾರ ಕಂಡುಕೊAಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಂಚಾಯಿತಿ ವ್ಯಾಪ್ತಿಯ ಸುಳುಗಳಲೆ ಗ್ರಾಮದಲ್ಲಿ ಅತಿವೃಷ್ಟಿಯಿಂದ ಮೃತಪಟ್ಟ ವಸಂತಮ್ಮ ಎಂಬ ಮಹಿಳೆಗೆ ಸರಕಾರದಿಂದ ನೀಡಲಾದ