ಮಡಿಕೇರಿ, ಆ. ೬; ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಗೆ ನಾಲ್ವರು ನೂತನ ಸದಸ್ಯರುಗಳನ್ನು ನೇಮಿಸಿ ಕರ್ನಾಟಕ ಸರಕಾರ ಆದೇಶಿಸಿದೆ.
ಸೋಮೆಯಂಡ ಕೌಸಲ್ಯ ಸತೀಶ್, ನಾಗೇಶ್ ಕಾಲೂರು, ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ, ಚಾಮೇರ ದಿನೇಶ್ ಬೆಳ್ಯಪ್ಪ ಅವರುಗಳನ್ನು ನೂತನ ಸದಸ್ಯರಾಗಿ ನೇಮಕಾತಿ ಮಾಡಲಾಗಿದೆ. ಕೊಡವ ಸಾಹಿತ್ಯ ಅಕಾಡೆಮಿಯೊಂದಿಗೆ ವಿವಿಧ ಅಕಾಡೆಮಿಗಳ ಸದಸ್ಯರನ್ನು ಬದಲು ಮಾಡಿ ನೂತನ ಸದಸ್ಯರನ್ನು ನೇಮಿಸಲಾಗಿದೆ.