ಮಡಿಕೇರಿ, ಆ. ೬: ಕೊಡಗು ಜಿಲ್ಲೆಯಲ್ಲಿ ಈ ಹಿಂದಿನ ಕೆಲ ವರ್ಷಗಳಿಂದ ಆಗಸ್ಟ್ ತಿಂಗಳು ಆರಂಭಗೊಳ್ಳುತ್ತಿದ್ದAತೆ ಜನತೆ ಒಂದಷ್ಟು ಹೆಚ್ಚಿನ ಆತಂಕವನ್ನು ಅನುಭವಿಸುವ ಪರಿಸ್ಥಿತಿ ಉಂಟಾಗಿದೆ. ೨೦೧೮ರಿಂದ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತಗಳು ನಂತರದ ವರ್ಷಗಳಲ್ಲೂ ಆಗಸ್ಟ್ ತಿಂಗಳಿನಲ್ಲಿ ಆಶ್ಲೇಷಾ ಮಳೆ ಅಪಾರ ಹಾನಿಯುಂಟು ಮಾಡಿರುವ ಘಟನೆಗಳು ಜನಮಾನಸದಿಂದ ಇನ್ನೂ ದೂರಾಗಿಲ್ಲ. ಇದರ ಬೆನ್ನಲ್ಲೇ ಈ ವರ್ಷವೂ ಪ್ರಸ್ತುತದ ವಾತಾವರಣದ ಅಸಹಜತೆಯಿಂದಾಗಿ ಜನತೆ ಒಂದಷ್ಟು ಆತಂಕವನ್ನು ಎದುರಿಸುವಂತಾಗಿದೆ.
ಕಳೆದ ವಾರ ಜಿಲ್ಲೆಯಲ್ಲಿ ಮಳೆ ಇಳಿಮುಖಗೊಂಡು ಒಂದಷ್ಟು ಬಿಸಿಲು ಕಾಣಿಸಿಕೊಂಡಿತ್ತು. ಇದೀಗ ತಾ. ೩ ರಿಂದ ಆಶ್ಲೇಷಾ ಮಳೆ ನಕ್ಷತ್ರ ಆರಂಭ ಗೊಳ್ಳುತ್ತಿರುವಂತೆ ಜಿಲ್ಲೆಯಾದ್ಯಂತ ವಾಯು-ವರುಣನ ಅಬ್ಬರ ಹೆಚ್ಚಾಗಿದೆ. ಕಳೆದ ಒಂದೆರಡು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮತ್ತೆ ಅಲ್ಲಲ್ಲಿ ವ್ಯಾಪಕ ಹಾನಿಗಳು ಉಂಟಾಗುತ್ತಿವೆ. ಬಹುತೇಕ ಕಡೆಗಳಲ್ಲಿ ದಿನವೊಂದಕ್ಕೆ ಸರಾಸರಿ ಮೂರು ಇಂಚಿನಿAದ ಐದು ಇಂಚುಗಳಷ್ಟು ಮಳೆ ಸುರಿಯುತ್ತಿದೆ. ಗ್ರಾಮೀಣ ಭಾಗಗಳಲ್ಲಂತೂ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಿದೆ. ಧಾರಾಕಾರ ಮಳೆಯಿಂದಾಗಿ ಕಾವೇರಿ ಸೇರಿದಂತೆ ಇನ್ನಿತರ ನದಿ ತೋಡು, ತೊರೆಗಳು ಉಕ್ಕಿ ಹರಿಯುತ್ತಿವೆ. ಅಲ್ಲಲ್ಲಿ ಬರೆ ಜರಿತ, ವಿದ್ಯುತ್ ವ್ಯತ್ಯಯ ಉಂಟಾಗಿವೆ. ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತವೂ ಸಜ್ಜಾಗಿದೆ.
ತಾ. ೬ ರಂದು ಜಿಲ್ಲೆಯಲ್ಲಿ ಮಳೆ-ಗಾಳಿಯು ಮುಂದುವರಿದಿದ್ದು, ಮುಂಗಾರಿನ ತೀವ್ರತೆ ಮತ್ತೆಯೂ ಯಥಾಸ್ಥಿತಿಯಲ್ಲಿ ಮುಂದುವರಿಯುವ ಸಾಧ್ಯತೆಗಳು ಕಂಡುಬರುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡAತಿದೆ.
ಶನಿವಾರದ ಚಿತ್ರಣ
ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದ್ದು, ನಾಪೋಕ್ಲು ರಸ್ತೆಯಲ್ಲಿ ನೀರು ಆವರಿಸಿದೆ.
ಶಾಂತಳ್ಳಿ ಹೋಬಳಿಯಲ್ಲಿ ೯ ಇಂಚು
ಜಿಲ್ಲೆಯ ಶಾಂತಳ್ಳಿ ಹೋಬಳಿಯಲ್ಲಿ ಕಳೆದ ೨೪ ಗಂಟೆಗಳಲ್ಲಿ ೯ ಇಂಚಿನಷ್ಟು ಭಾರೀ ಮಳೆಯಾಗಿದೆ.
(ಮೊದಲ ಪುಟದಿಂದ) ಭಾಗಮಂಡಲದಲ್ಲಿಯೂ ೫.೨೦ ಇಂಚು ದಾಖಲಾಗಿದೆ. ಜಿಲ್ಲಾ ಸರಾಸರಿ ೨.೯೮ ಇಂಚುಗಳಷ್ಟಿದ್ದರೆ, ಮಡಿಕೇರಿ ತಾಲೂಕಿನಲ್ಲಿ ೩.೮೩, ವೀರಾಜಪೇಟೆ ೨.೧೭ ಹಾಗೂ ಸೋಮವಾರಪೇಟೆಯಲ್ಲಿ ೨.೯೫ ಇಂಚಿನಷ್ಟು ಸರಾಸರಿ ಮಳೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ಮಡಿಕೇರಿ ಹೋಬಳಿ ೩.೮೪, ನಾಪೋಕ್ಲು ೪.೪೦, ಸಂಪಾಜೆ ೧.೯೦ ಮಳೆಯಾಗಿದೆ. ವೀರಾಜಪೇಟೆ ಕಸಬಾ ೨, ಹುದಿಕೇರಿ ೩.೬೦, ಶ್ರೀಮಂಗಲ ೨.೬೯, ಪೊನ್ನಂಪೇಟೆ ೧.೮೦, ಅಮ್ಮತ್ತಿ ೧.೮೦, ಬಾಳೆಲೆಯಲ್ಲಿ ೧.೩೪ ಇಂಚು ಮಳೆಯಾಗಿದೆ. ಸೋಮವಾರಪೇಟೆ ಕಸಬಾ ೩.೬೭, ಶನಿವಾರಸಂತೆ ೧.೪೯, ಕೊಡ್ಲಿಪೇಟೆ ೧.೯೦, ಕುಶಾಲನಗರ ೦.೭೨ ಹಾಗೂ ಸುಂಟಿಕೊಪ್ಪದಲ್ಲಿ ೧.೨೪ ಇಂಚು ಮಳೆ ಬಿದ್ದಿದೆ. ಜನವರಿಯಿಂದ ಈತನಕ ಜಿಲ್ಲೆಯಲ್ಲಿ ೯೦.೨೫ ಇಂಚು ಸರಾಸರಿ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೧೩೧.೮೧ ಇಂಚು, ವೀರಾಜಪೇಟೆ ೬೮.೩೪ ಹಾಗೂ ಸೋಮವಾರಪೇಟೆ ತಾಲೂಕಿಗೆ ೭೦.೫೭ ಇಂಚಿನಷ್ಟು ಮಳೆ ಜನವರಿಯಿಂದ ಈ ತನಕ ಬಿದ್ದಿದೆ.ಕೂಡಿಗೆ: ಕಳೆದ ೫ ದಿನಗಳಿಂದ ಹಾರಂಗಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ೧೩ ಸಾವಿರ ಕ್ಯೂಸೆಕ್ಸ್ಗೂ ಹೆಚ್ಚು ನೀರನ್ನು ನದಿಗೆ ಹರಿಸಲಾಗಿದೆ.
ಅಣೆಕಟ್ಟೆಯ ಸಾಮರ್ಥ್ಯವು ೭,೨೧,೦೨೦ ಟಿಎಂಸಿ ಇದ್ದು, ಇಂದು ಅಣೆಕಟ್ಟೆಯಲ್ಲಿ ೬,೪೬,೦೨೦ ಟಿಎಂಸಿ ಸಂಗ್ರಹವಿದ್ದು, ಅಣೆಕಟ್ಟೆಗೆ ಒಳಹರಿವಿನ ನೀರಿನ ಪ್ರಮಾಣವು ೧೪,೭೨೦ ಕ್ಯೂಸೆಕ್ಸ್ ಬರುತ್ತಿದ್ದು, ಈಗಾಗಲೇ ನದಿ ಮುಂಭಾಗದ ಗೇಟ್ ಮತ್ತು ವಿದ್ಯುತ್ ಘಟಕದ ಮೂಲಕ ನದಿಗೆ ೧೩, ಸಾವಿರಕ್ಕೂ ಹೆಚ್ಚು ನೀರನ್ನು ಹರಿಸಲಾಗುತ್ತಿದೆ ಎಂದು ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.
ನೀರಾವರಿ ಇಲಾಖೆಯ ವತಿಯಿಂದ ದಿನಗಳ ೨೪ ಗಂಟೆಗಳು ಒಳಹರಿವಿನ ಪ್ರಮಾಣವನ್ನು ಗುರುತಿಸಿ ಅಣೆಕಟ್ಟೆಯ ಭದ್ರತ ಹಿತದೃಷ್ಟಿಯಿಂದ ಮತ್ತು ನದಿಯ ಆಸುಪಾಸಿನ ಗ್ರಾಮಗಳಿಗೆ ತೊಂದರೆಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಹೆಚ್ಚು ನೀರನ್ನು ಸಂಗ್ರಹ ಮಾಡದೆ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಒಳಹರಿವಿನ ಪ್ರಮಾಣದಲ್ಲಿ ಏರಿಳಿತಗಳನ್ನು ಗಮನಿಸಿ ಅದರ ಆಧಾರದ ಮೇಲೆ ಮತ್ತು ಹಾರಂಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ನೀರಿನ ಮಟ್ಟವನ್ನು ಕಾಯ್ದಿರಿಸಿಕೊಂಡು ನದಿಗೆ ಮತ್ತು ನಾಲೆಗೆ ಹರಿಸಲಾಗುತ್ತಿದೆ ಎಂದು ಅಭಿಯಂತರ ಚೆನ್ನಕೇಶವ ಮಾಹಿತಿ ನೀಡಿದ್ದಾರೆ.ಕರಿಕೆ: ಜಿಲ್ಲೆಯ ಅಂರ‍್ರಾಜ್ಯ ಸಂಪರ್ಕ ರಸ್ತೆಯ ಸೇತುವೆ ಒಂದರ ತಡೆಗೋಡೆ ಕುಸಿದು ರಸ್ತೆ ಕುಸಿಯುವ ಭೀತಿ ಎದುರಾಗಿದೆ. ಭಾಗಮಂಡಲ-ಕರಿಕೆ ಪಾಣತ್ತೂರು ಅಂತರ್ ರಾಜ್ಯ ಹೆದ್ದಾರಿಯಲ್ಲಿನ ಚೆತ್ತುಕಾಯ ಬಳಿಯ ತಿರುವಿನಲ್ಲಿರುವ ಮಳೆಗೆ ಸಂಪರ್ಕ ಸೇತುವೆ ಬದಿಯ ತಡೆಗೋಡೆ ಕುಸಿದ ಪರಿಣಾಮ ರಸ್ತೆ ಹಾನಿಯಾಗುವ ಸಾಧ್ಯತೆ ಇದ್ದು, ರಸ್ತೆಯಲ್ಲಿ ಹರಿದು ಬರುವ ನೀರು ಕೂಡ ಈ ಭಾಗದಲ್ಲಿ ನದಿಗೆ ಸೇರುತ್ತಿರುವುದರಿಂದ ಇನ್ನಷ್ಟು ಭೂ ಕುಸಿತ ಆಗುವ ಸಾಧÀ್ಯತೆ ಇದೆ.ವೀರಾಜಪೇಟೆ: ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ವಿಪರೀತ ಗಾಳಿ ಮತ್ತು ಮಳೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತೋರ ಗ್ರಾಮದಲ್ಲಿ ಇಂದು ಸುಮಾರು ಹದಿನೈದು ಕುಟುಂಬಗಳ ೪೫ ಮಂದಿಯನ್ನು ತೋಮರ ಗ್ರಾಮದ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಯಿತು.
ವೀರಾಜಪೇಟೆಯ ನೂತನ ತಹಶೀಲ್ದಾರ್ ಅರ್ಚನಾ ಭಟ್ ಹಾಗೂ ಕಂದಾಯ ಅಧಿಕಾರಿ ಹರೀಶ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಜನರ ಮನವೊಲಿಸಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.ರಸ್ತೆ ಕುಸಿತ: ಶಾಸಕರ ಭೇಟಿ
ನಾಪೋಕ್ಲು: ನಾಪೋಕ್ಲುವಿನಿಂದ ಬೆಟ್ಟಗೇರಿ ಸಂಪರ್ಕಿಸುವ ಮುಖ್ಯ ರಸ್ತೆ ಕುಸಿದು ಅಪಾಯ ಮಟ್ಟದಲ್ಲಿರುವುದರಿಂದ ಸ್ಥಳಕ್ಕೆ ಶಾಸಕ ಕೆ.ಜಿ ಬೋಪಯ್ಯ ಭೇಟಿ ನೀಡಿ ಪರಿಶೀಲಿಸಿದರು.
ಮಳೆ ಹಾಗೂ ಕಾವೇರಿ ಪ್ರವಾಹದಿಂದಾಗಿ ರಸ್ತೆಯ ಅರ್ಧಭಾಗ ಕುಸಿದು ತೀವ್ರ ಅಪಾಯ ಮಟ್ಟಕ್ಕೆ ತಲುಪಿತ್ತು. ವಾಹನ ಸಂಚಾರಕ್ಕೆ ತೊಡಕಾಗಿರುವುದರಿಂದ ಪರ್ಯಾಯವಾಗಿ ಬೊಳಿಬಾಣೆ ಹೊದವಾಡ ಶಾಲಾ ರಸ್ತೆ ಸೂಕ್ತವೆಂದು ಕಂಡು ಬಂದ ಹಿನ್ನೆಲೆಯಲ್ಲಿ ಈ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು.
ಈ ಸಂದರ್ಭ ಕೆ.ಜಿ. ಬೋಪಯ್ಯ ಮಾತನಾಡಿ, ಕೊಟ್ಟಮುಡಿ ಬಳಿ ರಸ್ತೆ ಅರ್ಧ ಭಾಗದಷ್ಟು ಕುಸಿದಿದೆ. ವಾಹನಗಳ ಸಂಚಾರ ಅಪಾಯದ ಮಟ್ಟದಲ್ಲಿರುವುದರಿಂದ ಎಲ್ಲಾ ವಾಹನ ಚಾಲಕರು ಎಚ್ಚರಿಕೆ ವಹಿಸುವುದು ಅತಿ ಮುಖ್ಯವಾಗಿದೆ. ತಾತ್ಕಾಲಿಕವಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಬೇಕಾದ ಅಗತ್ಯವಿದೆ. ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ಕೇಮಾಟ್-ಬೊಳಿಬಾಣೆ ಹೊದವಾಡ ಶಾಲಾ ರಸ್ತೆ ಮೂಲಕ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಪ್ರತಿಪ, ಶಿವಚಾಳಿಯಂಡ ಅಂಬಿಕಾರ್ಯಪ್ಪ, ಅಮ್ಮಂಡ ಮನು ಮಹೇಶ್, ಕೆಲೇಟಿರ ಸಾಬು ನಾಣಯ್ಯ, ಕಂಗಾAಡ ಜಾಲಿ ಪೂವಪ್ಪ, ಚೀಯಕ್‌ಪೂವಂಡ ಅಪ್ಪಚ್ಚು, ತಹಶೀಲ್ದಾರ್ ಮಹೇಶ್, ಎಇಇ ಚೆನ್ನಕೇಶವ, ಜಿಇ ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.ಮುಳ್ಳೂರು: ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಗಾಳಿಯೊಂದಿಗೆ ಭಾರೀ ಮಳೆಯಾಗಿದೆ. ಮಳೆ-ಗಾಳಿಗೆ ಹೋಬಳಿ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಶನಿವಾರಸಂತೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗ್ಗಿನವರೆಗೆ ೧.೫ ಇಂಚು ಮಳೆಯಾಗಿದೆ.
ಶುಕ್ರವಾರ ರಾತ್ರಿ ಮಾಲಂಬಿ ಗ್ರಾಮದ ನಿವಾಸಿ ಗಣಗೂರು ಕೂಡು ರಸ್ತೆಯ ಲಕ್ಷö್ಮಮ್ಮ ಎಂಬವರ ವಾಸದ ಮನೆ ಸಂಪೂರ್ಣ ಕುಸಿದು ಹೋಗಿದೆ. ಮನೆಯಲ್ಲಿ ೭೫ ವರ್ಷದ ಲಕ್ಷö್ಮಮ್ಮ ಸೇರಿದಂತೆ ಮಗ, ಸೊಸೆ, ಇಬ್ಬರು ಮೊಮ್ಮಕ್ಕಳು ಸೇರಿದಂತೆ ೫ ಮಂದಿ ವಾಸವಾಗಿದ್ದರು, ರಾತ್ರಿ ಮನೆ ಕುಸಿಯುತ್ತಿದ್ದ ಸಂದರ್ಭ ಕುಟುಂಬ ಸದಸ್ಯರು ಪಕ್ಕದ ಮನೆಗೆ ತೆರಳಿ ಆಶ್ರಯ ಪಡೆದುಕೊಂಡು ಅಪಾಯದಿಂದ ಪಾರಾಗಿದ್ದಾರೆ. ಶನಿವಾರ ಬೆಳಿಗ್ಗೆ ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸಮೀಪದ ಕೊಟ್ಟಮುಡಿಯಲ್ಲಿ ಕಾವೇರಿ ನದಿ ನೀರಿನ ಪ್ರಮಾಣ ಹೆಚ್ಚಾಗಿದೆ. ಮಳೆಯಿಂದಾಗಿ ನಾಪೋಕ್ಲು ವ್ಯಾಪ್ತಿಯಲ್ಲಿ ಹಲವು ರಸ್ತೆಗಳು ದುಸ್ಥಿತಿಯಲ್ಲಿವೆ. ನಾಪೋಕ್ಲು ಮೂರ್ನಾಡು ಸಂಪರ್ಕ ಕಲ್ಪಿಸುವ ರಸ್ತೆಯ ಬೊಳಿಬಾಣೆ ಹಾಗೂ ಚೆರಿಯಪರಂಬು-ಕಲ್ಲು ಮೊಟ್ಟೆ ಎಂಬಲ್ಲಿ ನದಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.
ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ಬಾರಿ ವಾಹನಗಳಿಗೆ ನಿಷೆೆÃಧ ಹೇರಿದ್ದರಿಂದ ಬಾರಿ ವಾಹನಗಳು ಮುರ್ನಾಡು ಕೊಟ್ಟಮಡಿ, ಬೆಟ್ಟಗೇರಿ ಮುಖಾಂತರ ಸಾಗುತ್ತಿದ್ದ ಪರಿಣಾಮ ರಸ್ತೆ ಕುಸಿತ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ ಇದೀಗ ರಸ್ತೆಯನ್ನು ಆದಷ್ಟು ಬೇಗ ದುರಸ್ತಿಪಡಿಸಬೇಕಾದ ಅಗತ್ಯವಿದೆ.ಗೋಣಿಕೊಪ್ಪಲು: ವಿಪರೀತ ಮಳೆಯಿಂದಾಗಿ ಶ್ರೀಮಂಗಲ ಹೋಬಳಿಯ ಟಿ. ಶೆಟ್ಟಿಗೇರಿ ಗ್ರಾಮದ ತಾವಳಗೇರಿ ಗ್ರಾಮದ ನಿವಾಸಿ ಪಿ. ಹರೀಣ್ ಎಂಬವರ ವಾಸದ ಮನೆ ಕುಸಿದು ಬಿದ್ದಿದೆ. ಯಾವುದೇ ಅಪಾಯ ಸಂಭವಿಸಿಲ್ಲ.ಮಡಿಕೇರಿ: ಮಳೆ ಹಾನಿ ಪ್ರದೇಶವಾದ ರಾಮನಕೊಲ್ಲಿಗೆ ತಹಶೀಲ್ದಾರ್ ಮಹೇಶ್ ಇಂದು ಭೇಟಿ ನೀಡಿ ಮಳೆ ಹಾನಿ ಬಗ್ಗೆ ಮಾಹಿತಿ ಪಡೆದರು. ಕಾಟಕೇರಿ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದ್ದಾರೆ.