ಸೋಮವಾರಪೇಟೆ, ಆ.೬: ತಾಲೂಕು ವ್ಯಾಪ್ತಿಯಲ್ಲಿ ಆಶ್ಲೇಷಾ ಮಳೆಯ ಆರ್ಭಟ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ಬಿಡುವಿಲ್ಲದಂತೆ ಮಳೆ ಸುರಿಯುತ್ತಿದ್ದು, ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯವಾಗುತ್ತಿದೆ. ಮೊನ್ನೆ ಹಾಗೂ ನಿನ್ನೆ ರಾತ್ರಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಮಂದಿ ಕಾರ್ಗತ್ತಲಿನಲ್ಲಿ ರಾತ್ರಿ ಕಳೆದಿದ್ದು, ವಿದ್ಯುತ್ ಇಲಾಖಾ ಸಿಬ್ಬಂದಿಗಳು ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಮರ್ಪಕ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ.
ಭಾರೀ ಮಳೆಯೊಂದಿಗೆ ಗಾಳಿಯ ಆರ್ಭಟವೂ ಹೆಚ್ಚಾಗಿದ್ದು, ಅಲ್ಲಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬೀಳುತ್ತಿರುವ ಹಿನ್ನೆಲೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಆಶ್ಲೇಷಾ ಮಳೆಯ ಅಬ್ಬರಕ್ಕೆ ಹಾನಿ ಪ್ರಕರಣಗಳೂ ಮುಂದುವರೆದಿವೆ. ವಾಸದ ಮನೆಗಳು ಅತೀ ಶೀತಕ್ಕೆ ಕುಸಿಯುತ್ತಿದ್ದು, ಹಲವಷ್ಟು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ನಿನ್ನೆ ಹಾಗೂ ಇಂದು ಎಡೆಬಿಡದೇ ಮಳೆ ಸುರಿದಿದೆ. ವಾತಾವರಣದಲ್ಲಿ ತೇವಾಂಶ ಅಧಿಕವಾಗಿ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದನಮಕ್ಕಿ ಗ್ರಾಮದ ಲಕ್ಷö್ಮಣ ಎಂಬವರ ವಾಸದ ಮನೆ ಶೇ.೮೦ರಷ್ಟು ಕುಸಿದು ಭಾರೀ ನಷ್ಟ ಸಂಭವಿಸಿದೆ. ಕುಟುಂಬಕ್ಕೆ ನೆಲೆ ಇಲ್ಲದಂತಾಗಿದ್ದು, ಸಂಬAಧಿಕರ ಮನೆಯಲ್ಲಿ ಆಶ್ರಯ ಪಡೆಯುವಂತಾಗಿದೆ.
ಅAತೆಯೇ ಶನಿವಾರಸಂತೆ ಸಮೀಪದ ಮಾಲಂಬಿ ಗ್ರಾಮದ ಲಕ್ಷಿö್ಮÃ ಎಂಬವರ ವಾಸದ ಮನೆಯ ಒಂದು ಪಾರ್ಶ್ವ ಕುಸಿದಿದ್ದು, ಶೇ.೨೦ ರಷ್ಟು ನಷ್ಟವಾಗಿದೆ. ಹಾನಗಲ್ಲ್ಲು ಗ್ರಾ.ಪಂ. ವ್ಯಾಪ್ತಿಯ ಚಂದನಮಕ್ಕಿ ಗ್ರಾಮದ ಚೆನ್ನಮ್ಮ ಅವರ ವಾಸದ ಮನೆ ಅತೀ ಮಳೆಗೆ ಹಾನಿಗೀಡಾಗಿದೆ. ಮನೆಯ ಛಾವಣಿ ನೆಲಕ್ಕಚ್ಚಿದ್ದು, ಶೇ.೨೪ ರಷ್ಟು ನಷ್ಟವಾಗಿರುವ ಬಗ್ಗೆ ಕಂದಾಯ ಇಲಾಖಾಧಿಕಾರಿಗಳು ವರದಿ ನೀಡಿದ್ದಾರೆ.
ತಾಕೇರಿ ಗ್ರಾಮದ ಚಂದಣಿಬಾಣೆ ನಿವಾಸಿ ಚಂದ್ರಾಜು ಅವರ ಮನೆಯ ಗೋಡೆ ಅತೀ ಶೀತಕ್ಕೆ ಕುಸಿದುಬಿದ್ದಿದ್ದು ಶೇ.೨೪ರಷ್ಟು ನಷ್ಟ ಸಂಭವಿಸಿದೆ. ಚೌಡ್ಲು ಗ್ರಾಮದ ಲಲಿತ ಅವರ ವಾಸದ ಮನೆಯು ಮಳೆಯ ಹೊಡೆತಕ್ಕೆ ಸಿಲುಕಿ ನಷ್ಟಕ್ಕೀಡಾಗಿದೆ. ಮನೆಯ ಛಾವಣಿ ಕುಸಿದುಬಿದ್ದಿದ್ದು, ಅದೃಷ್ಟವಶಾತ್ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಹಾನಿಗೀಡಾದ ಪ್ರದೇಶಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಷ್ಟದ ಬಗ್ಗೆ ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.
ಶಾಂತಳ್ಳಿ ಹೋಬಳಿಯಲ್ಲಿ ದಾಖಲೆಯ ಮಳೆ: ಕಳೆದ ೨೪ ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ದಾಖಲೆಯ ಮಳೆ ಸುರಿದಿದೆ. ಶಾಂತಳ್ಳಿಗೆ ೯ ಇಂಚು ಮಳೆಯಾಗಿದ್ದರೆ, ಕುಡಿಗಾಣ ಗ್ರಾಮಕ್ಕೆ ೧೨.೨೫ ಇಂಚು ಮಳೆಯಾಗಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ವಾತಾವರಣದಲ್ಲಿನ ಶೀತಕ್ಕೆ ಕಾಫಿ ತೋಟದಲ್ಲಿ ಕೊಳೆ ರೋಗ ಕಂಡುಬAದಿದ್ದು, ಕಾಫಿ ಹಾಗೂ ಕರಿಮೆಣಸು ಫಸಲು ಉದುರಲಾರಂಭಿಸಿದೆ. ಬಂಪರ್ ಫಸಲಿನ ನಿರೀಕ್ಷೆಯಲ್ಲಿದ್ದ ಕೃಷಿಕರು ಮಳೆಯ ಆರ್ಭಟಕ್ಕೆ ತತ್ತರಿಸುವಂತಾಗಿದೆ.
ಕಾಫಿ ಗಿಡಗಳಲ್ಲಿ ಬೆಳೆಯುವ ಹಂತದಲ್ಲಿದ್ದ ಫಸಲು ಅತೀ ಶೀತಕ್ಕೆ ಉದುರಲಾರಂಭಿಸಿದೆೆ. ಈಗಾಗಲೇ ಶೇ. ೩೦ರಷ್ಟು ಫಸಲು ನಷ್ಟವಾಗಿದೆ. ಮಳೆ ಹೀಗೆಯೇ ಮುಂದುವರೆದರೆ ಬೆಳೆಗಾರರ ಬದುಕಿನ ಮೇಲೆ ಭಾರೀ ಹೊಡೆತ ಬೀಳಲಿದೆ ಎಂದು ಶಾಂತಳ್ಳಿಯ ಲಿಂಗರಾಜು, ತಮ್ಮಣ್ಣಿ ಸೇರಿದಂತೆ ಇತರ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಪುಷ್ಪಗಿರಿ ಬೆಟ್ಟತಪ್ಪಲಿನಲ್ಲಿ ವರುಣನ ಆರ್ಭಟದಿಂದಾಗಿ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಕುಡಿಗಾಣ ಗ್ರಾಮಕ್ಕೆ ಕಳೆದ ೨೪ ಗಂಟೆಗಳಲ್ಲಿ ೧೨.೨೫ ಇಂಚು ಮಳೆಯಾಗಿದೆ. ಈವರೆಗೆ ೨೦೦ ಇಂಚು ಮಳೆ ಸುರಿದಿದ್ದು, ಕೃಷಿಕ ಕಾರ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಗದ್ದೆಗಳಲ್ಲಿ ನೀರು ನಿಂತಿದ್ದು, ಕೃಷಿ ಕಾರ್ಯ ಸ್ಥಗಿತಗೊಂಡಿದೆ. ಸಾರ್ವಜನಿಕರು ಮನೆಯಿಂದ ಹೊರಬರಲೂ ಸಹ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ೨೪ ಗಂಟೆಗಳಲ್ಲಿ ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಯಲ್ಲಿ ೩.೫೮ ಇಂಚು ಮಳೆಯಾಗಿದೆ. ಪ್ರಸಕ್ತ ವರ್ಷ ಸೋಮವಾರಪೇಟೆ ಹೋಬಳಿ ವ್ಯಾಪ್ತಿಗೆ ೭೨ ಇಂಚು ಮಳೆಯಾಗಿದ್ದು, ಕಳೆದ ವರ್ಷ ಈ ಅವಧಿಗೆ ೫೮ ಇಂಚು ಮಳೆಯಾಗಿತ್ತು. ಈ ವರ್ಷ ೧೪ ಇಂಚು ಹೆಚ್ಚು ಮಳೆಯಾಗಿದೆ ಎಂದು ಮಳೆ ಮಾಪನ ಕೇಂದ್ರದ ಅಪ್ಪಚ್ಚು ತಿಳಿಸಿದ್ದಾರೆ.
ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಕಳೆದ ೨೪ ಗಂಟೆಗಳಲ್ಲಿ ೮.೫೪ ಇಂಚು, ಕೊಡ್ಲಿಪೇಟೆಗೆ ೧.೮೬ ಇಂಚು, ಶನಿವಾರಸಂತೆಗೆ ೧.೪೭ ಇಂಚು ಮಳೆಯಾದ ಬಗ್ಗೆ ವರದಿಯಾಗಿದೆ.