ಕೂಡಿಗೆ, ಆ. ೬: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ಸಮೀಪದ ಮಾಸ್ತಹಳ್ಳದ ಮೂಲಕ ಹೋಗಿರುವ ಹಾರಂಗಿ ಮುಖ್ಯ ನಾಲೆಯ ಅಕ್ವಿಡೆಟ್ಸ್ (ಮೇಲ್ ಕಾಲುವೆ)ಯು ಬಿರುಕುಗೊಂಡ ಪರಿಣಾಮ ನಾಲೆಯ ನೀರು ಸಂಪೂರ್ಣವಾಗಿ ಹಳ್ಳ ಸೇರುತ್ತಿತ್ತು. ಸ್ಥಳೀಯ ಗ್ರಾಮಸ್ಥರ ಮತ್ತು ಈ ವ್ಯಾಪ್ತಿಯ ರೈತರ ಮನವಿಗೆ ಸ್ಪಂದಿಸಿದ ನೀರಾವರಿ ಇಲಾಖೆ ತುರ್ತಾಗಿ ಮುಖ್ಯ ನಾಲೆ ಬಿರುಕುಗಳನ್ನು ಮತ್ತು ನಾಲೆಯ ಕೆಲ ಭಾಗದವರೆಗೆ ಎರಡೂ ಬದಿಗಳಲ್ಲಿ ಲೈನಿಂಗ್ ಕಾಂಕ್ರೀಟಿಕರಣ ಮಾಡುವ ಮೂಲಕ ದುರಸ್ತಿ ಕಾರ್ಯ ಕೈಗೊಂಡಿದೆ.
ಕಾಮಗಾರಿಯ ಉಸ್ತುವಾರಿಯನ್ನು ಇಲಾಖೆಯ ಅಭಿಯಂತರ ಐ.ಕೆ. ಪುಟ್ಟಸ್ವಾಮಿ, ಸಹಾಯಕ ಇಂಜಿನಿಯರ್ ಸಿದ್ದರಾಜು ವಹಿಸಿಕೊಂಡಿದ್ದಾರೆ.