ಸೋಮವಾರಪೇಟೆ, ಆ.೬: ಮಾದಾಪುರದ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಮಾದಾಪುರದಲ್ಲಿ ಮಳೆಯ ನಡುವೆಯೂ ಪಂಜಿನ ಮೆರವಣಿಗೆ ನಡೆಯಿತು.

ಮಾದಾಪುರದ ಇಗ್ಗೋಡ್ಲು ಚಾಮುಂಡೇಶ್ವರಿ ದೇವಾಲಯದಿಂದ ಹೊರಟ ಮೆರವಣಿಗೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಕೇಸರಿ ಧ್ವಜ ಹಾಗೂ ಪಂಜನ್ನು ಹಿಡಿದು ಭಾಗವಹಿಸಿದ್ದರು.

ಮೆರವಣಿಗೆಯ ಉದ್ದಕ್ಕೂ ಭಾರತ್ ಮಾತಾಕೀ ಜೈ, ಅಖಂಡ ಭಾರತ ನಿರ್ಮಾಣ ಶತಃಸಿದ್ಧ, ಜೈ ಗೋಮಾತಾ ಸೇರಿದಂತೆ ಇನ್ನಿತರ ಘೊಷಣೆಗಳು ಕೇಳಿಬಂದವು.

ಚಾಮುಂಡೇಶ್ವರಿ ದೇವಾಲಯ ದಿಂದ ಆರಂಭಗೊAಡ ಮೆರವಣಿಗೆ ಜಂಬೂರು ಮುಖ್ಯರಸ್ತೆಯಲ್ಲಿ ಸಾಗಿ, ಸೋಮವಾರಪೇಟೆ-ಮಡಿಕೇರಿ ಹೆದ್ದಾರಿಯ ಮೂಲಕ ಮಾದಾಪುರ ಪಟ್ಟಣಕ್ಕೆ ಆಗಮಿಸಿತು. ನಂತರ ಪಟ್ಟಣದಿಂದ ಗಣಪತಿ ದೇವಾಲಯದ ವರೆಗೆ ಸಾಗಿ ಸಮಾಪನಗೊಂಡಿತು.

ದೇವಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗಿಯಾದ ಕಾರ್ಯಕರ್ತರು, ಸ್ವಾತಂತ್ರö್ಯಪೂರ್ವದಲ್ಲಿ ಹರಿದು ಹಂಚಿ ಹೋಗಿರುವ ಹಿಂದೂರಾಷ್ಟçದ ಭೂ ಪ್ರದೇಶಗಳನ್ನು ಒಂದುಗೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪ ಮಾಡಿದರು.

ಸಭಾ ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಹ ನಿಧಿ ಪ್ರಮುಖ್ ಹರೀಶ್ ಅವರು, ಅಖಂಡವಾಗಿದ್ದ ಹಿಂದೂ ರಾಷ್ಟçವನ್ನು ಒಡೆದ ನಂತರ ದೇಶದಲ್ಲಿ ಹಿಂದೂಗಳು ದಿನನಿತ್ಯ ಒಂದಿಲ್ಲೊAದು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹಿಂದೂ ಸಮಾಜದ ಜಾಗೃತಿಗಾಗಿ ಜಾಗರಣಾ ವೇದಿಕೆ ಕಾರ್ಯನಿರ್ವಹಿ ಸುತ್ತಿದ್ದು, ಮತಾಂಧ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಕಾರ್ಯ ಸಮಾಜ ದಿಂದಲೇ ಆಗಬೇಕಿದೆ ಎಂದರು.

ಧರ್ಮದ ವಿರುದ್ಧ ನಡೆಯುತ್ತಿ ರುವ ಸಂಚನ್ನು ಎದುರಿಸಲು ಹಿಂದೂ ಸಮಾಜ ಸದಾ ಎಚ್ಚರಿಕೆ ಯಿಂದಿರಬೇಕು. ಗೋ ರಕ್ಷಣೆಯಾಗ ಬೇಕು. ಸನಾತನ ಸಂಸ್ಕೃತಿಯ ಮೇಲಾಗುತ್ತಿರುವ ದಬ್ಬಾಳಿಕೆಗಳನ್ನು ಮೆಟ್ಟಿನಿಲ್ಲಲು ಹಿಂದೂ ಸಮಾಜ ಸಂಘಟಿತ ವಾಗಬೇಕು. ಅಖಂಡ ಭಾರತ ನಿರ್ಮಾಣ ಎಲ್ಲಾ ಕಾರ್ಯಕರ್ತರ ಸಂಕಲ್ಪವಾಗಬೇಕೆAದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಹವಾಲ್ದಾರ್ ತಂಬುಕುತ್ತೀರ ಗಪ್ಪು ಸೋಮಯ್ಯ ವಹಿಸಿದ್ದರು. ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್, ಪ್ರಮುಖರಾದ ಸುನಿಲ್ ಮಾದಾಪುರ, ಸುಭಾಷ್ ತಿಮ್ಮಯ್ಯ, ಉಮೇಶ್, ಬೋಜೇಗೌಡ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಜಾಗರಣಾ ವೇದಿಕೆಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಡಿವೈಎಸ್‌ಪಿ ಗಂಗಾಧರಪ್ಪ, ಸೋಮವಾರಪೇಟೆ ಸರ್ಕಲ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್, ಮಡಿಕೇರಿ ಸರ್ಕಲ್ ಇನ್ಸ್ಪೆಕ್ಟರ್ ಮೇದಪ್ಪ ಅವರುಗಳ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.