ಗೋಣಿಕೊಪ್ಪಲು, ಆ.೬: ಹುಲಿ ದಾಳಿಯಿಂದ ಹಸು ಬಲಿಯಾಗಿರುವ ಘಟನೆ ಕುಂದ ಗ್ರಾಮದಲ್ಲಿ ನಡೆದಿದೆ.

ದಕ್ಷಿಣ ಕೊಡಗಿನ ಈಚೂರು ಗ್ರಾಮದ ಸಮೀಪದ ಕುಂದ ಎಂಬಲ್ಲಿ ಹುಲಿ ದಾಳಿ ನಡೆಸಿದ್ದು, ಟಿ. ದೇವಯ್ಯ, ಶಾರದಾ ಅವರಿಗೆ ಸೇರಿದ ಹಸು ಬಲಿಯಾಗಿದೆ. ಸ್ಥಳಕ್ಕೆ ಪಶುವೈದ್ಯ ಅಧಿಕಾರಿಗಳಾದ ಡಾ.ಶಾಂತೇಶ್, ಪೊನ್ನಂಪೇಟೆ ವಲಯದ ಆರ್.ಎಫ್.ಓ. ಬಿ.ಎಂ.ಶAಕರ್ ಹಾಗೂ ದಿವಾಕರ್ ತೆರಳಿ ಪರಿಶೀಲನೆ ನಡೆಸಿದರು.