ಸೋಮವಾರಪೇಟೆ, ಆ.೬: ತಾಲೂಕಿನ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಗುತ್ತಿ-ಹೊಸಳ್ಳಿ ಗ್ರಾಮ ಸಂಪರ್ಕ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದ್ದು, ಸಾರ್ವಜನಿಕರು ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದಾರೆ.

ಬಡ ಕೃಷಿಕರಾಗಿರುವ ಇಲ್ಲಿನ ಮಂದಿ ಅನೇಕ ಬಾರಿ ಗ್ರಾಮ ಪಂಚಾಯಿತಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಸೇರಿದಂತೆ ಶಾಸಕರ ಗಮನ ಸೆಳೆದಿದ್ದರೂ ಪ್ರಯೋಜನ ಮಾತ್ರ ಶೂನ್ಯವಾಗಿದೆ. ಪರಿಣಾಮ ತಕ್ಷಣ ರಸ್ತೆ ದುರಸ್ತಿ ಪಡಿಸದಿದ್ದರೆ ಮುಂದೆ ನಡೆಯಲಿರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ವಾಹನಗಳು ಗ್ರಾಮಕ್ಕೆ ಬರುತ್ತಿಲ್ಲ. ಶಾಲಾ ಕಾಲೇಜು ವಾಹನಗಳೂ ಇತ್ತ ಸುಳಿಯುತ್ತಿಲ್ಲ. ಪರಿಣಾಮ ವಿದ್ಯಾರ್ಥಿಗಳು ಪ್ರತಿ ದಿನ ಪಾದರಕ್ಷೆಗಳನ್ನು ಕೈಯಲ್ಲಿಡಿದುಕೊಂಡು ಹೊಸಗುತ್ತಿಗೆ ಆಗಮಿಸಬೇಕಿದೆ ಎಂದು ಸ್ಥಳೀಯರಾದ ಮನು ಅವರು ವಾಸ್ತವತೆಯನ್ನು ವಿವರಿಸಿದ್ದಾರೆ.

ಹೊಸಳ್ಳಿಯಲ್ಲಿ ೩೦ ಕುಟುಂಬ ಗಳಿದ್ದು, ಎಲ್ಲಾ ಕುಟುಂಬಗಳೂ ಬಡ ಕೃಷಿಕ ಕುಟುಂಬವಾಗಿವೆ. ಎಲ್ಲಾ ವರ್ಗದ ಮಂದಿಯೂ ಗ್ರಾಮ ದಲ್ಲಿದ್ದಾರೆ. ಪರಿಶಿಷ್ಟ ಜಾತಿ ಕುಟುಂಬಗಳೂ ಇಲ್ಲಿ ನೆಲೆಸಿದ್ದು, ಸರ್ಕಾರದ ಯಾವುದಾದರೊಂದು ಯೋಜನೆಯ ಮೂಲಕ ಗ್ರಾಮಕ್ಕೆ ಸೌಲಭ್ಯ ಒದಗಿಸಬಹುದಾಗಿದೆ. ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರಾದ ಶಿವಕುಮಾರ್ ಹೇಳಿದ್ದಾರೆ.

ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ಸಾಗಿಸಲೂ ಸಮಸ್ಯೆಯಾಗಿದೆ. ರಸ್ತೆ ಅವ್ಯವಸ್ಥೆಯಿಂದಾಗಿ ೨ ಕಿ.ಮೀ. ಹೆಗಲ ಮೇಲೆ ಹೊತ್ತುಕೊಂಡು ತರುವಂತಾಗಿದೆ. ಮಳೆ ನೀರಿನಿಂದಾಗಿ ರಸ್ತೆ ಕೆಸರುಮಯವಾಗಿದೆ. ಇದರೊಂದಿಗೆ ಕೃಷಿ ಉತ್ಪನ್ನಗಳನ್ನು ಮನೆಗೆ ಸಾಗಿಸಲೂ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ರಸ್ತೆ ಅವ್ಯವಸ್ಥೆಯೊಂದಿಗೆ ಗ್ರಾಮದಲ್ಲಿ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ನಮಗಳ ಸಮಸ್ಯೆಗಳನ್ನು ತಕ್ಷಣ ಬಗೆಹರಿಸದಿದ್ದರೆ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದೇವೆ ಎಂದು ಸ್ಥಳೀಯರಾದ ಮನು, ಶಿವಕುಮಾರ್ ಸೇರಿದಂತೆ ಇತರರು ತಿಳಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿರುವ ಆಲೂರು ಸಿದ್ದಾಪುರ ಗ್ರಾ.ಪಂ.ನ ಹೊಸಗುತ್ತಿ ವಾರ್ಡ್ ಸದಸ್ಯ ಕಿರಣ್ ಅವರು, ಗ್ರಾಮ ಪಂಚಾಯಿತಿಯಿAದ ರೂ. ೧ಲಕ್ಷ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಈ ಹಣದಲ್ಲಿ ಗ್ರಾಮದ ರಸ್ತೆ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವುದಿಲ್ಲ. ಹೆಚ್ಚಿನ ಅನುದಾನಕ್ಕಾಗಿ ಈಗಾಗಲೇ ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗ ಮತ್ತು ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಅನುದಾನ ಲಭ್ಯವಾದ ತಕ್ಷಣ ರಸ್ತೆ ಹಾಗೂ ಚರಂಡಿ ಕಾಮಗಾರಿ ನಿರ್ವಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.