ಪೊನ್ನಂಪೇಟೆ, ಆ. ೬: ರೋಟರಿ ಸಂಸ್ಥೆ, ಮೈಸೂರಿನ ಪ್ರಗತಿ ಹಾಗೂ ಪ್ರಥಮ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಇಂಗ್ಲಿಷ್ ಕಲಿಕಾ ಮೇಳವನ್ನು ತಿತಿಮತಿ ಸಮೀಪದ ದೇವರಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭ ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ ಬೇಸಿಕ್ ಇಂಗ್ಲಿಷ್ ಕಲಿಕೆ, ಗ್ರಂಥಾಲಯದ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಸದಸ್ಯ ದಿಲನ್ ಚಂಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದ, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಪಂಕಜ, ಎಸ್‌ಡಿಎಂಸಿ ಅಧ್ಯಕ್ಷೆ ಬೇಬಿ, ಪ್ರಥಮ್ ಸಂಸ್ಥೆಯ ಎಆರ್‌ಜಿ ಮುರುಗೇಶ್, ಶಾಲಾ ಮುಖ್ಯ ಶಿಕ್ಷಕಿ ಗಂಗಮ್ಮ, ಶಿಕ್ಷಕರಾದ ವಯಲೆಟ್, ಪರಶಿವಮೂರ್ತಿ, ನಾಗಶ್ರೀ, ಅನಿಲ್, ಪ್ರಥಮ್ ಸಂಸ್ಥೆ ಶಿಕ್ಷಕಿ ಜೀನಿತ ಇನ್ನಿತರರು ಇದ್ದರು.