ಸೋಮವಾರಪೇಟೆ: ಸ್ಥಳೀಯ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ‘ಸ್ತನ್ಯಪಾನ ಸಪ್ತಾಹ’ವನ್ನು ಆಚರಿಸಲಾಯಿತು.
ಆಸ್ಪತ್ರೆಯ ಶುಶ್ರೂಷಕಿ ಅನಿತಾರವರು, ಬಾಣಂತಿಯರಿಗೆ ಸ್ತನ್ಯಪಾನದ ಮಹತ್ವ, ಬಾಣಂತಿ ಹಾಗೂ ಮಗುವಿನ ಶುಚಿತ್ವ ಮತ್ತು ಆರೋಗ್ಯ ಹಾಗೂ ಲಿಂಗ ಭೇದವೆಂಬ ಪಿಡುಗಿನ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಇದೇ ಸಂದರ್ಭ ಬಾಣಂತಿಯರಿಗೆ ಹಾರ್ಲಿಕ್ಸ್ ಹಾಗೂ ಶಿಶುಗಳಿಗೆ ಉಡುಪನ್ನು ನೀಡಲಾಯಿತು.
ಕ್ಲಬ್ ಅಧ್ಯಕ್ಷೆ ಪ್ರೇಮ ಹೃಷಿಕೇಶ್, ಕಾರ್ಯದರ್ಶಿ ಅಮೃತ ಕಿರಣ್, ಖಜಾಂಚಿ ಶಿಲ್ಪ ಪ್ರಸಾದ್, ಮಾಜಿ ಅಧ್ಯಕ್ಷೆ ಕವಿತ ವಿರೂಪಾಕ್ಷ, ಸದಸ್ಯರುಗಳಾದ ಸರಿತಾ ರಾಜೀವ್, ಅನಿತಾ ಶುಭಕರ್, ಚಂದ್ರಿಕಾ ಕುಮಾರ್ ಹಾಗೂ ನಂದಿನಿ ಗೋಪಾಲ್ ಇದ್ದರು.ಸುಂಟಿಕೊಪ್ಪ: ಕೊಡಗರಹಳ್ಳಿಯ ಆರೋಗ್ಯ ಉಪ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ನಡೆಯಿತು.
ಉದ್ಘಾಟನೆಯನ್ನು ಆರೋಗ್ಯ ಸಂಸ್ಥೆಯ ಸಿ.ಹೆಚ್.ಓ. ಟೆಸ್ಸಿ ಥೋಮಸ್ ಉದ್ಘಾಟಿಸಿದರು. ಸಮಾರಂಭದಲ್ಲಿ ಆರೋಗ್ಯ ಕಾರ್ಯಕರ್ತೆ ಕೆ.ಸಿ. ಲತಾಕುಮಾರಿ, ಅಂಗನವಾಡಿ ಕಾರ್ಯಕರ್ತೆ ಎಸ್.ಎನ್. ಸಾವಿತ್ರಿ ಮತ್ತು ಮಹಾದೇವಮ್ಮ, ಆಶಾ ಕಾರ್ಯಕರ್ತೆಯರಾದ ಕವಿತಾ ಮತ್ತು ಗೀತಾ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಜರಿದ್ದರು. ಸ್ತನ್ಯಪಾನ ಮತ್ತು ಒ.ಆರ್.ಎಸ್. ಬಗ್ಗೆ ಟೆಸ್ಸಿ ಥೋಮಸ್ ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಎಸ್.ಎನ್. ಸಾವಿತ್ರಿ ಮಾಹಿತಿ ನೀಡಿದರು. ಗೀತಾ ಸ್ವಾಗತಿಸಿ, ಕವಿತಾ ವಂದಿಸಿದರು.