ಬರ್ಮಿಂಗ್ ಹ್ಯಾಮ್, ಆ. ೬: ಕಾಮನ್‌ವೆಲ್ತ್ ಗೇಮ್ಸ್ ೨೦೨೨ರಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ಇಂದು ನಡಿಗೆ ಮತ್ತು ಸ್ಟೀಪಲ್ ಚೇಸ್‌ನಲ್ಲಿ ೨ ಬೆಳ್ಳಿ ಪದಕ ದಕ್ಕಿದೆ.
೧೦,೦೦೦ ಮೀಟರ್ ಮಹಿಳೆಯರ ನಡಿಗೆ ಸ್ಪರ್ಧೆಯಲ್ಲಿ ಭಾರತದ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ನಡಿಗೆ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಪ್ರಿಯಾಂಕಾ ಗೋಸ್ವಾಮಿ ಇತಿಹಾಸ ಬರೆದಿದ್ದಾರೆ.

ಅಂತೆಯೇ ಪುರುಷರ ೭೪ ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಭಾರತದ ಕುಸ್ತಿಪಟು ನವೀನ್ ಇಂಗ್ಲೆAಡ್‌ನ ಚಾರ್ಲಿ ಬೌಲಿಂಗ್‌ರನ್ನು ಸೋಲಿಸಿ ಪೈನಲ್‌ಗೇರಿದ್ದು, ಈ ವಿಭಾಗದಲ್ಲಿ ಭಾರತಕ್ಕೆ ಕನಿಷ್ಟ ಬೆಳ್ಳಿಯ ಭರವಸೆ ನೀಡಿದ್ದಾರೆ.
ಇನ್ನು ಮಹಿಳಾ ಬಾಕ್ಸಿಂಗ್‌ನಲ್ಲಿ ಭಾರತದ ಬಾಕ್ಸರ್ ನೀತು ಘಂಗಾಸ್ ೪೮ ಕೆಜಿ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿ ಭಾರತಕ್ಕೆ ಮತ್ತೊಂದು ಪದಕ ಖಚಿತಪಡಿಸಿದ್ದಾರೆ.
ಭಾರತದ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ದೀಪಕ್ ಪೂನಿಯಾ ಹಾಗೂ ಸಾಕ್ಷಿ ಮಲ್ಲಿಕ್ ಚಿನ್ನದ ಪದಕವನ್ನು ಗೆದಿದ್ದಾರೆ.