ಮಡಿಕೇರಿ, ಆ. ೬: “ಆತ್ಮನಿರ್ಭರ ಭಾರತ’ ಪ್ರಧಾನಮಂತ್ರಿ ಅವರ ಅತೀ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಗೆ ಅರ್ಜಿ ಅಹ್ವಾನಿಸಲಾಗಿದೆ.
ಆತ್ಮನಿರ್ಭರ್ ಕಾರ್ಯಕ್ರಮದಡಿಯಲ್ಲಿ ಹೊಸ ಮಾರ್ಗಸೂಚಿ ಅನ್ವಯ ಕೇಂದ್ರ ಪುರಸ್ಕçತ ಯೋಜನೆಯಾದ ಪ್ರಧಾನ ಮಂತ್ರಿಗಳ ಅತೀ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯನ್ನು ಮಾರ್ಪಡಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಸೂಚಿಸಿದೆ.
ಈ ಯೋಜನೆಯ ಅವಧಿ ೨೦೨೦-೨೧ ರಿಂದ ೨೦೨೪-೨೫ ರವರೆಗೆ (೫ ವರ್ಷಗಳು) ಜಾರಿಯಲ್ಲಿರುತ್ತದೆ. ಗರಿಷ್ಠ ೮ ವರ್ಷ ಸಾಲ ಮರುಪಾವತಿ ಅವಧಿಗೆ ಅವಕಾಶ ಮಾಡಿಕೊಟ್ಟಿರುತ್ತಾರೆ. ಈ ಯೋಜನೆಯಲ್ಲಿ ವೈಯಕ್ತಿಕ, ಸ್ವ-ಸಹಾಯ ಗುಂಪುಗಳು, ರೈತ ಉತ್ಪಾದಕ ಸಂಸ್ಥೆಗಳು, ಉತ್ಪಾದಕರ ಸಹಕಾರ ಸಂಘಗಳು ಈ ಯೋಜನೆಯ ಸಂಪೂರ್ಣ ಲಾಭವನ್ನು ಪಡೆಯಬಹುದು ಹಾಗೂ ಯುವ ಜನತೆಗೆ ಉದ್ಯೋಗ ಸೃಷ್ಠಿ ಮಾಡುವುದು ಮುಖ್ಯ ಧ್ಯೇಯವಾಗಿದೆ.
ಈ ಯೋಜನೆಯಡಿಯಲ್ಲಿ ಚಾಲ್ತಿಯಲ್ಲಿರುವ ಘಟಕಗಳಿಗೆ ಸಾಲ ಒದಗಿಸಲಾಗುವುದು. ಉದ್ಯಮಿದಾರರ ಕೊಡುಗೆಯು ಯೋಜನೆಯ ವೆಚ್ಚದ ಕನಿಷ್ಟ ಶೇ.೧೦ ಆಗಿರಬೇಕು. ಪ್ರತಿ ಘಟಕಕ್ಕೆ ಶೇ.೫೦ (ಕೇಂದ್ರ ಶೇ.೩೫+ ರಾಜ್ಯ ಶೇ.೧೫ ) ಸಹಾಯಧನ ಇದೆ. (ಗರಿಷ್ಠ ೧೫ ಲಕ್ಷ).
ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕರನ್ನು ಹಾಗೂ ಮೊ.ಸಂ. ೯೬೮೬೨೧೭೯೧೫ ನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಸುರೇಶ್ ಭಟ್ ಅವರು ತಿಳಿಸಿದ್ದಾರೆ.