ಸೋಮವಾರಪೇಟೆ, ಆ. ೬: ಜನ ಸಂಘ ಹಾಗೂ ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡ ಹಾಗೂ ಸಮಾಜ ಸೇವಕರಾಗಿದ್ದ ಬಿ.ಬಿ. ಶಿವಪ್ಪ ಅವರ ಸ್ಮರಣೆ ಕಾರ್ಯಕ್ರಮ ಇಲ್ಲಿನ ವಿದ್ಯಾ ಗಣಪತಿ ದೇವಾಲಯದಲ್ಲಿ ನಡೆಯಿತು.
ಬಿ.ಬಿ. ಶಿವಪ್ಪ ಅಭಿಮಾನಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಶಿವಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಶಿವಪ್ಪ ಅವರ ಒಡನಾಡಿಗಳಾಗಿದ್ದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಬಿ.ಟಿ. ತಿಮ್ಮಶೆಟ್ಟಿ, ಎಂ.ಸಿ. ರಾಘವ, ಸುಮಾ ಸುದೀಪ್, ರತ್ಮಕುಮಾರ್, ಮೃತ್ಯುಂಜಯ, ದಾಮೋಧರ್, ಮಂಜುನಾಥ್, ಜಯಾನಂದ, ಪ್ರಮುಖರಾದ ಮಂಥರ್ ಗೌಡ, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಬಿ.ಡಿ. ಧರ್ಮಪ್ಪ, ಬಿ.ಪಿ. ಶಿವಕುಮಾರ್, ಎಸ್.ಪಿ. ಪೊನ್ನಪ್ಪ, ಮಹೇಶ್ ತಿಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.