ಮಡಿಕೇರಿ, ಆ. ೫: ಮಡಿಕೇರಿಯ ಪ್ರವೇಶ ದ್ವಾರದಲ್ಲಿ ವಾಹನ ನಿಲುಗಡೆ ಮತ್ತು ವ್ಯಾಪಾರ ವಹಿವಾಟನ್ನು ನಿಷೇಧಿಸುವಂತೆ ಒತ್ತಾಯಿಸಿ ಕೊಡಗು ಗೌಡ ಯುವ ವೇದಿಕೆ ನಗರಸಭೆಗೆ ಮನವಿ ಮಾಡಿದೆ.

ಮೈಸೂರು ರಸ್ತೆಯ ಮೂಲಕ ಮಡಿಕೇರಿಯ ಪ್ರವೇಶ ದ್ವಾರದ ಫೀ.ಮಾ. ಕೆ.ಎಂ. ಕಾರ್ಯಪ್ಪ ವೃತ್ತದ ಬಳಿ ರಾಷ್ಟçದ ಪ್ರಪ್ರಥಮ ಮಹಾ ದಂಡನಾಯಕ ಫೀ.ಮಾ. ಕೊಡಂದೇರ ಕಾರ್ಯಪ್ಪ ಹಾಗೂ ಸ್ವಾತಂತ್ರö್ಯ ಹೋರಾಟಗಾರ, ಹುತಾತ್ಮ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅವರುಗಳ ಪ್ರತಿಮೆಗಳಿವೆ. ಇವೆರಡೂ ರಾಷ್ಟಿçÃಯ ಸ್ಮಾರಕಗಳಾಗಿದ್ದು, ಸಂರಕ್ಷಿತ ಈ ಪ್ರದೇಶಗಳ ಸುತ್ತಮುತ್ತ ಯಾವುದೇ ಭಿತ್ತಿ ಪತ್ರಗಳನ್ನು ಅಂಟಿಸುವುದಾಗಲೀ, ಗೋಡೆ ಬರಹಗಳನ್ನು ಬರೆಯುವುದಾಗಲೀ, ವಾಹನ ನಿಲುಗಡೆ, ವ್ಯಾಪಾರ ವಹಿವಾಟು ಮಾಡುವಂತಿಲ್ಲ. ಈ ಬಗ್ಗೆ ಸಂಬAಧಿಸಿದ ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳಿAದ ಜಾಗೃತಿ ಫಲಕಗಳನ್ನು ಅಳವಡಿಸಬೇಕು.

ಆದರೆ, ಇಲ್ಲಿ ಯಾವುದೇ ಫಲಕಗಳಿಲ್ಲದೇ ಇರುವುದರಿಂದ ಮಾಹಿತಿ ಇಲ್ಲದೆ, ಪ್ರವಾಸಿ ವಾಹನಗಳು ನಿಲುಗಡೆಗೊಳ್ಳುತ್ತಿವೆ. ವಿವಿಧ ವ್ಯಾಪಾರ ಕೂಡ ನಡೆಸಲಾಗುತ್ತಿದೆ. ಈ ಬಗ್ಗೆ ನಗರಸಭೆ ಸೂಕ್ತ ಕ್ರಮದೊಂದಿಗೆ ಫಲಕಗಳನ್ನು ತೆರವುಗೊಳಿಸಿ, ಜಾಗೃತಿ ಫಲಕಗಳನ್ನು ಅಳವಡಿಸಬೇಕಾಗಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ ತಪ್ಪಿದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮನವಿ ಸಲ್ಲಿಕೆ ಸಂದರ್ಭ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಗೌರವಾಧ್ಯಕ್ಷ ಪೊನ್ನಚ್ಚನ ಮಧು ಸೋಮಣ್ಣ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷö್ಮಣ, ಸಹ ಕಾರ್ಯದರ್ಶಿ ದಂಬೆಕೋಡಿ ದಯಾ, ನಿರ್ದೇಶಕ ಪೈಕೇರ ಗಗನ್ ಹಾಜರಿದ್ದರು.