ಮಡಿಕೇರಿ, ಆ. ೫: ಕೇಂದ್ರ ಸರಕಾರ ಅಗತ್ಯ ವಸ್ತುಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ. ಹಾಗೂ ಬೆಲೆ ಏರಿಕೆಯನ್ನು ವಿರೋಧಿಸಿ ಜಿಲ್ಲಾ ಜಾತ್ಯತೀತ ಜನತಾ ದಳ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ದಿನಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿದ್ದಲ್ಲದೆ ಬೆಲೆಯನ್ನು ಮಡಿಕೇರಿ, ಆ. ೫: ಕೇಂದ್ರ ಸರಕಾರ ಅಗತ್ಯ ವಸ್ತುಗಳ ಮೇಲೆ ವಿಧಿಸಿರುವ ಜಿ.ಎಸ್.ಟಿ. ಹಾಗೂ ಬೆಲೆ ಏರಿಕೆಯನ್ನು ವಿರೋಧಿಸಿ ಜಿಲ್ಲಾ ಜಾತ್ಯತೀತ ಜನತಾ ದಳ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ದಿನಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಿದ್ದಲ್ಲದೆ ಬೆಲೆಯನ್ನು ಪರಿಣಾಮ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಸಮಸ್ಯೆ ಸೃಷ್ಟಿಯಾಗಿದೆ. ಕಷ್ಟದ ಪರಿಸ್ಥಿತಿಯಲ್ಲಿ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜೊತೆಗೆ ಹೊಟೇಲ್ ಹಾಗೂ ಆಸ್ಪತ್ರೆ ವಿಶೇಷ ಕೊಠಡಿಗಳ ಬಾಡಿಗೆ ಮೇಲೂ ಜಿಎಸ್‌ಟಿ ಹೇರಿರುವುದು ಸರಿಯಾದ ಕ್ರಮವಲ್ಲ. ಸರಕಾರ ಅವೈಜ್ಞಾನಿಕ ನೀತಿ ಅನುಸರಿಸುತ್ತಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದ ಅವರು, ಜಿಎಸ್‌ಟಿ ಹಾಗೂ ಬೆಲೆ ಇಳಿಕೆಗೆ ಆಗ್ರಹಿಸಿದರು.

ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಪಿ.ಎಸ್.ಐ. ನೇಮಕಾತಿ, ವಿಶ್ವವಿದ್ಯಾನಿಲಯ ಅಂಕಪಟ್ಟಿ ಹಗರಣಗಳನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸುವಲ್ಲಿ ವಿಫಲಗೊಂಡಿದೆ. ಕೋಮುವಾದದ ಆಡಳಿತ ನಡೆಸುತ್ತ ಸಮಾಜದ ಸ್ವಾಸ್ಥö್ಯ ಹದಗೆಡುತ್ತಿದ್ದರು ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ದೂರಿದರು.

ಯುವಘಟಕದ ಜಿಲ್ಲಾಧ್ಯಕ್ಷ ವಿಶ್ವ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರಕಾರ ಧರ್ಮಗಳ ಸಂಘರ್ಷವನ್ನು ಬಳಸಿಕೊಂಡು ರಾಜಕಾರಣ ಮಾಡುತ್ತ ಜನಸಾಮಾನ್ಯರ ಬದುಕನ್ನು ಮರೆತಿದೆ. ರಾಜ್ಯದ ಪರಿಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಇದೊಂದು ಡಬಲ್ ಎಂಜಿನ್ ಸರಕಾರ ಎಂದು ಕಿಡಿಕಾರಿದರು. ರಾಜ್ಯದ ಏಳಿಗೆಯಾಗಬೇಕಾದರೆ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ. ರಾಷ್ಟಿçÃಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಅಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಇಸಾಖ್ ಖಾನ್, ತಾಲೂಕು ಅಧ್ಯಕ್ಷರುಗಳಾದ ಮಂಜುನಾಥ್, ನಾಗರಾಜ್, ಗಣೇಶ್, ಬಿದ್ರುಪಣೆ ನಂದ, ರಾಜ್ಯ ಸಮಿತಿ ಸದಸ್ಯರಾದ ಸುರೇಶ್, ಎಂ.ಎA. ಶರೀಫ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಾವತಿ ರಮೇಶ್, ಜಿಲ್ಲಾ ಜೆಡಿಎಸ್ ಖಜಾಂಜಿ ಡೆನ್ನಿ ಬರೋಸ್, ಹಿಂದುಳಿದ ವರ್ಗಗಳ ಅಧ್ಯಕ್ಷ ಶಿವದಾಸ್, ವೀರಾಜಪೇಟೆ ನಗರಾಧ್ಯಕ್ಷ ಯೋಗೇಶ್ ನಾಯ್ಡು, ಪ್ರಮುಖರಾದ ರವಿಮಾದಪ್ಪ, ಕಿಶೋರ್, ಹರ್ಷ, ಅಪ್ಪನೆರವಂಡ ಸನ್ನು, ಅಯುಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.