ಮಡಿಕೇರಿ ಆ.೫ : ತುಳುಭಾಷೆಯ ಲಿಪಿಯನ್ನು ಕೊಡಗು ಜಿಲ್ಲೆಯಲ್ಲಿ ಪರಿಚಯಿಸುವ ಮತ್ತು ತುಳು ಲಿಪಿಯನ್ನು ಕಲಿಸುವ ನಿಟ್ಟಿನಲ್ಲಿ ತಾ.೭ ರಂದು “ಬಲೆ ತುಳು ಲಿಪಿ ಕಲ್ಪುಗ” ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಿ.ಎಂ.ರವಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಂದು ಬೆಳಗ್ಗೆ ೧೦.೩೦ ಗಂಟೆಗೆ ನಗರದ ಪತ್ರಿಕಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಯುನಿಕೋಡ್‌ನಲ್ಲಿ ತುಳು ಲಿಪಿ ಬಳಕೆಯಲ್ಲಿದೆ, ೫೦ಕ್ಕೂ ಹೆಚ್ಚು ತುಳು ಶಾಸನ ದೊರಕ್ಕಿದ್ದು, ತುಳು ಲಿಪಿಯ ಪ್ರಾಚೀನತೆಯನ್ನು ತೋರಿಸಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿರಂತರವಾಗಿ ತುಳು ಲಿಪಿ ಕಲಿಕೆಗೆ ವಿಶೇಷ ಆಸಕ್ತಿ ವಹಿಸುತ್ತಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ ತುಳು ಲಿಪಿ ಕಲಿತಿರುವ ಶಿಕ್ಷಕರಿದ್ದು, ಅವರ ಮೂಲಕ ಅನ್‌ಲೈನ್ ಸೇರಿದಂತೆ ಲಿಪಿ ಕಲಿಕೆಗೆ ತರಬೇತಿ ಹಮ್ಮಿಕೊಳ್ಳಲಾಗುವುದು ಎಂದು ರವಿ ತಿಳಿಸಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಪಿ.ಎಂ.ರವಿ, ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ ೯೯೭೨೦೭೩೨೯೫ ಹಾಗೂ ತುಳು ಲಿಪಿ ಶಿಕ್ಷಕಿ ಶಶಿಕಲಾ ಪೂಜಾರಿ ೭೯೭೫೯೪೭೩೯೦ ಸಂಪರ್ಕಿಸಬಹುದಾಗಿದೆ.