ಭಾಗಮAಡಲ, ಆ. ೫: ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ವತಿಯಿಂದ ೨೦೨೨ ವಿಶ್ವ ಅರೆ ಭಾಷೆ ಜಂಬರ ಆಟಿ ೧೮ರ ಅಂಗವಾಗಿ ತಾ. ೭ ರಂದು ಜನಾಂಗದವರಿಗಾಗಿ ವಿವಿಧ ಸ್ಪರ್ಧೆಗಳನ್ನು ಭಾಗಮಂಡಲದ ಕಾವೇರಿ ಕಾಲೇಜಿನಲ್ಲಿ ಬೆಳಿಗ್ಗೆ ೧೦ ಗಂಟೆಗೆ ಏರ್ಪಡಿಸಲಾಗಿದೆ.
ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆದು ಕಾರು ಪೆಮಿತ ಸಂದೀಪ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ನಂಗಾರು ವೀಣಾ ಜ್ಞಾನಶೇಖರ್, ಅರೆಭಾಷೆ ಯುವ ಪ್ರತಿಭೆ ಪ್ರಗತಿ ಕೇಡನ ಪಾಲ್ಗೊಳ್ಳಲಿದ್ದಾರೆ.
ಒಂದರಿAದ ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ಅರೆಭಾಷೆ ಕಥೆ ಹೇಳುವ ಸ್ಪರ್ಧೆ, ಐದರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಅರೆ ಭಾಷೆ ಸಂಸ್ಕೃತಿ, ಸಾಹಿತ್ಯ, ಗ್ರಾಮೀಣ ಸೊಗಡು ಕುರಿತ ಚಿತ್ರಕಲಾ ಸ್ಪರ್ಧೆ, ಯುವ ಜನರಿಗೆ ಹಸೆ ಬರೆಯುವ ಸ್ಪರ್ಧೆ, ಯುವತಿಯರಿಗೆ ಸೋಬಾನೆ ಹಾಡುವ ಸ್ಪರ್ಧೆ ಹಾಗೂ ಸಂಸ್ಕೃತಿಯ ಮಹತ್ವದ ಕುರಿತ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ.
ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕಿಶೋರ್ ಕುದುಕುಳಿ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ೧.೩೦ ಗಂಟೆಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಅರೆ ಭಾಷೆ ಬರಹಗಾರ ಸೂದನ ಈರಪ್ಪ ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ಲಲಿತ ಭಾಸ್ಕರ ಹೊಸಗದ್ದೆ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಜೋಯಪ್ಪ, ತಲಕಾವೇರಿ ದೇವಸ್ಥಾನದ ತಕ್ಕರಾದ ಕೋಡಿ ಮೋಟಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಸಿರಕಜೆ ನಾಗೇಶ್, ಅರೆಭಾಷೆ ಬರಹಗಾರ್ತಿ ಕಡ್ಲೆರ ತುಳಸಿ ಮೋಹನ್ ಯುವ ಒಕ್ಕೂಟ ಉಪಾಧ್ಯಕ್ಷ ಕೂಡಕಂಡಿ ದಯಾನಂದ ಹಾಗೂ ಗೌರವ ಕಾರ್ಯದರ್ಶಿ, ನಿಡ್ಯಮಲೆ ಚಲನ್ ಉಪಸ್ಥಿತರಿರುವರು.