ಮಡಿಕೇರಿ, ಆ. ೫: ತಾ.೭ರಂದು ಅರಮೇರಿಯ ಶ್ರೀ ಲಿಂಗರಾಜೇAದ್ರ ಪ್ರಸಾದ ಭವನದಲ್ಲಿ ಮಧ್ಯಾಹ್ನ ೩ ಗಂಟೆಗೆ ಹೊಂಬೆಳಕು ಕಿರಣ ೨೦೧ ತತ್ತ÷್ವಚಿಂತನಾಗೋಷ್ಠಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿಕ ಹಾಗೂ ಲೇಖಕರಾದ ಕಿಗ್ಗಾಲು ಗಿರೀಶ್ ಅವರು ನೆರವೇರಿಸಲಿದ್ದಾರೆ. ವನ್ಯಜೀವಿ ಛಾಯಾಗ್ರಾಹಕ ವಿಪಿನ್ ಬಾಳಿಗ ಉಪನ್ಯಾಸ ನೀಡಲಿದ್ದಾರೆ. ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ಅವರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಕಿಗ್ಗಾಲು ಗಿರೀಶ್ ರಚನೆಯ ‘ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತಿತರ ಲೇಖನಗಳು’ ಪುಸ್ತಕ ಬಿಡುಗಡೆ ನೆರವೇರಲಿದೆ.