ಶನಿವಾರಸಂತೆ, ಆ. ೫: ವಿದ್ಯುತ್ ಉಪಕೇಂದ್ರ ಶನಿವಾರಸಂತೆಯ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕೆಲಸವಿರುವುದರಿಂದ ತಾ.೭ರಂದು ಬೆಳಿಗ್ಗೆ ೯ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಹಂಡ್ಲಿ, ಕೊಡ್ಲಿಪೇಟೆ, ಶನಿವಾರಸಂತೆ, ಗೋಪಾಲಪುರ, ಗೌಡಳ್ಳಿ, ಶುಂಠಿ, ನಿಡ್ತ, ಅಂಕನಹಳ್ಳಿ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಿರಿಯ ಸಂಪರ್ಕಾಧಿಕಾರಿ ಸುದೀಪ್ ಕುಮಾರ್ ಕೋರಿದ್ದಾರೆ.