ಪೊನ್ನಂಪೇಟೆ, ಆ. ೪: ಕಿರುಗೂರು ಗ್ರಾ.ಪಂ. ವ್ಯಾಪ್ತಿಯ ರಾಟೆಮನೆ ವ್ಯಾಪ್ತಿಯಲ್ಲಿರುವ ತೋಟಕ್ಕೆ ನಿನ್ನೆ ರಾತ್ರಿ ಕಾಡಾನೆ ಹಿಂಡು ದಾಳಿ ಮಾಡಿದ್ದು, ಕಾಫಿ ಗಿಡ, ತೆಂಗಿನ ಗಿಡ, ಬಾಳೆ ಗಿಡ ಹಾಗೂ ಸ್ಪಿçಂಕ್ಲರ್ ಪೈಪ್ಗಳನ್ನು ತುಳಿದು ನಾಶ ಮಾಡಿವೆ. ತೋಟದ ಮಧ್ಯದಲ್ಲಿ ಇರುವ ಲೈನ್ ಮನೆಯೂ ಹಾನಿಗೊಳಗಾಗಿದೆ. ಇಲ್ಲಿನ ಸಣ್ಣ ಬೆಳೆಗಾರರು ಬೆಳೆಯನ್ನೇ ನಂಬಿಕೊAಡು ಜೀವನ ಸಾಗಿಸುತ್ತಿದ್ದು, ಮಳೆಯಿಂದಾಗಿ ಈಗಾಗಲೇ ಬೆಳೆಗೆ ಹೆಚ್ಚು ಹಾನಿಯಾಗಿ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಇದೀಗ ಕಾಡಾನೆ ಹಿಂಡು ದಾಳಿ ಮಾಡಿ ಬೆಳೆಯನ್ನು ಹಾಗೂ ಲೈನ್ ಮನೆಯನ್ನು ನಾಶಪಡಿಸಿದ್ದು, ರೈತರು ಕಂಗಾಲಾಗಿದ್ದಾರೆ. ಸಂಬAಧಪಟ್ಟ ಅಧಿಕಾರಿಗಳು ತಕ್ಷಣ ಗಮನಹರಿಸಿ ಬೆಳೆಗಾರರಿಗೆ ನೆರವು ನೀಡಬೇಕು ಹಾಗೂ ಆನೆಗಳನ್ನು ಕೂಡಲೇ ಕಾಡಿಗಟ್ಟಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಾಟೆ ಮನೆ ಸಮೀಪವಿರುವ ಪೊಕ್ಕಳಿಚಂಡ ಎನ್. ಪೂಣಚ್ಚ, ಪೊಕ್ಕಳಿಚಂಡ ಪುರುಷೋತ್ತಮ್, ಪೊಕ್ಕಳಿಚಂಡ ಪಿ. ಪೂವಪ್ಪ ಹಾಗೂ ಪೊಕ್ಕಳಿಚಂಡ ದಿಲೀಪ ಅವರ ತೋಟಗಳು ಕಾಡಾನೆ ದಾಳಿಯಿಂದ ಹಾನಿಗೆ ಒಳಗಾಗಿವೆ. -ಚನ್ನನಾಯಕ