ಮಡಿಕೇರಿ, ಆ. ೪: ಕನ್ನಡ ಡಿಜಿಟಲ್ ಲೋಕದಲ್ಲಿ ಹೊಸ ಕ್ರಾಂತಿಯಾಗುತ್ತಿದೆ. ವೂಟ್ ಒಟಿಟಿಯಲ್ಲಿ ಬಿಗ್ ಬಾಸ್ನ ಮೊದಲ ಸೀಸನ್ ಆರಂಭ ಆಗುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಆಗಸ್ಟ್ ೬ ರಿಂದ ಈ ರಿಯಾಲಿಟಿ ಶೋ ಒಟಿಟಿಯಲ್ಲಿ ಪ್ರಸಾರವಾಗಲಿದೆ.
ಈ ಕಾರ್ಯಕ್ರಮದಲ್ಲಿ ಕೊಡಗಿನವರಾದ ನ್ಯೂಸ್ ೧sಣ ಚಾನಲ್ನ ಮಾಚಿಮಾಡ ಪಿ. ಸೋಮಣ್ಣ ಹಾಗೂ ಎಂಟಿವಿ ರೋಡೀಸ್ ಶೋನ ರನ್ನರ್ ಅಪ್ ಆಗಿದ್ದ ಜಿಲ್ಲೆಯ ಬಾಳೆಯಡ ಜಸ್ವಂತ್ ಬೋಪಣ್ಣ ಪಾಲ್ಗೊಳ್ಳುತ್ತಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾ ಯಶಸ್ಸಿನಲ್ಲಿರುವ ನಟ ಕಿಚ್ಚ ಸುದೀಪ್, ಬಿಗ್ ಬಾಸ್ ಕನ್ನಡ ಒಟಿಟಿ ಮೊದಲ ಸೀಸನ್ ನಡೆಸಿಕೊಳ್ಳಲು ಸಜ್ಜಾಗಿದ್ದಾರೆ.
ಈ ವಿಚಾರಕ್ಕೆ ಸಂಬAಧಿಸಿದAತೆ ಕಿಚ್ಚ ಸುದೀಪ್ ಬಿಗ್ ಬಾಸ್ ಮೊದಲ ಸೀಸನ್ಗೆ ಎದುರಾಗುವ ಸವಾಲುಗಳ ಬಗ್ಗೆ ಮಾತಾಡಿದ್ದಾರೆ. ಈ ವೇಳೆ ಬೀಪ್ ಇರೋದೇ ಇಲ್ಲ ಎಂದು ಹೇಳಿದ್ದಾರೆ. ಈ ಬಿಗ್ ಬಾಸ್ ಒಟಿಟಿ ಸೀಸನ್ನಲ್ಲಿ ಬಿಗ್ಬಾಸ್ ಮನೆಯೊಳಗೆ ಏನು ನಡೆಯುತ್ತಿದೆ ಎಂಬುದರ ಕುರಿತು ವೀಕ್ಷಕರು ಅಂತಿಮ ಅಭಿಪ್ರಾಯವನ್ನು ಹೊಂದಿರುತ್ತಾರೆ. ಅವರು, ೨೪/೭ ಸ್ಪರ್ಧಿಗಳನ್ನು ನೋಡುತ್ತಾರೆ ಮತ್ತು ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತಾರೆ. ಇದು ಸ್ಪರ್ಧಿಗಳು ಆಟವನ್ನು ಆಡುವ ವಿಧಾನವನ್ನು ಬದಲಾಯಿಸುತ್ತದೆ. ಇದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.